ಬೆಳ್ತಂಗಡಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ಯೂನಿಯನ್ ವತಿಯಿಂದ ಸುಮಾರು 42 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಮುಖ್ಯಕಾರ್ಯನಿರ್ವಹಣಾಧಿಕಾರಿ ಚಂದ್ರಕಾಂತ್ ಪ್ರಭು ರವರಿಗೆ ಬಿಳ್ಕೋಡುಗೆ ಸಮಾರಂಭವು ದ.ಕ ಜಿಲ್ಲಾ ಕೇಂದ್ರ ಬ್ಯಾಂಕಿನಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ಡಿಸಿಸಿ ಬ್ಯಾಂಕಿನ ನಿರ್ದೆಶಕರಾದ ಕುಶಾಲಪ್ಪ ಗೌಡರವರು ವಹಿಸಿಕೊಂಡರು. ಮುಖ್ಯ ಅಥಿತಿಗಳಾಗಿ ಸ.ಸಂ.ಸಹಾಯಕ ನಿಬಂಧಕರಾದ .ಎಸ್.ಯಂ.ರಘು , ಸಿಡಿಓ ಪ್ರತಿಮಾ , ಸಿ.ಇ.ಓ ಯೂನಿಯನ್ ಅಧ್ಯಕ್ಷೆ ಸುಕೇಶಿನಿ, ಪಡಂಗಡಿ ಪ್ಯಾಕ್ಸ್ ಸಿಇ ಓ ಹಾಗೂ ಬೆಳ್ತಂಗಡಿ ಡಿಸಿಸಿ ಶಾಖಾ ಮ್ಯಾನೇಜರ್ ಸುಧೀರ್ , ಮೇಲ್ವಿಚಾರಕರಾದ ಸುದರ್ಶನ ಹಾಗೂ ಸಿರಾಜುದ್ದೀನ್ ಉಪಸ್ಥಿತರಿದ್ದರು.
ಅನಂತಕೃಷ್ಣ ಭಟ್ ಪ್ರಾರ್ಥಿಸಿ, ನಿಡ್ಲೆ ಪ್ಯಾಕ್ಸ್ ಸಿಇಓ ಪದ್ಮನಾಭ ಸ್ವಾಗತಿಸಿ, ನಾರಾವಿ ಪ್ಯಾಕ್ಸ್ ಸಿಇಓ ಶಶಿಕಾಂತ್ ನಿರೂಪಿಸಿ, ಬೆಳ್ತಂಗಡಿ ಪ್ಯಾಕ್ಸ್ ಸಿಇಓ ಪ್ರಸಾದ್ ಧನ್ಯವಾದವಿತ್ತರು.