33.5 C
ಪುತ್ತೂರು, ಬೆಳ್ತಂಗಡಿ
March 9, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಸಿಯೋನ್ ಆಶ್ರಮದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ನೆರಿಯ: ಸಿಯೋನ್ ಆಶ್ರಮ ಟ್ರಸ್ಟ್ (ರಿ.) ಗಂಡಿಬಾಗಿಲು ಇಲ್ಲಿ ಮಾ. 08ರಂದು ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.

ಸಭಾಕಾರ್ಯಕ್ರಮದ ಅಧ್ಯಕ್ಷಸ್ಥಾನವನ್ನು ಸಂಸ್ಥೆಯ ಟ್ರಸ್ಟೀ ಸದಸ್ಯರಾದ ಶ್ರೀಮತಿ ಮೇರಿ ಯು.ಪಿ. ಯವರು ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ವೇದಿಕೆಯನ್ನಲಂಕರಿಸಿದ್ದ ಸಿಯೋನ್ ಆಶ್ರಮದ ಮುಖ್ಯ ವೈದ್ಯಾಧಿಕಾರಿ ಡಾ. ಶಿವಾನಂದ ಸ್ವಾಮಿಯವರು ಮಹಿಳಾ ದಿನಾಚರಣೆಯ ಮಹತ್ವವನ್ನು ವಿವರಿಸಿ, ಸಮಾಜದಲ್ಲಿ ಮಹಿಳೆಯರ ಸದಭಿರುಚಿ, ಶಕ್ತಿ ಮತ್ತು ಕೊಡುಗೆಯನ್ನು ಗುರುತಿಸುವ ಅಗತ್ಯತೆಯ ಕುರಿತು ವಿವರಿಸಿದರು. ಈ ಶುಭ ಸಂದರ್ಭದಲ್ಲಿ ಕೇಕ್ ಕತ್ತರಿಸಿ ಸಿಹಿ ಹಂಚುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಲಾಯಿತು.

ವೇದಿಕೆಯಲ್ಲಿ ಸಂಸ್ಥೆಯ ಮುಖ್ಯ ದಾದಿಯವರಾದ ಶ್ರೀಮತಿ ಫಿಲೋಮಿನಾ ಹಾಗೂ ಆಶ್ರಮ ನಿವಾಸಿ ದಿವ್ಯರವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾಜಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ ದಿವಂಗತ ಶ್ರೀಯುತ ವಸಂತ ಬಂಗೇರರವರ ಧರ್ಮಪತ್ನಿ ಶ್ರೀಮತಿ ಸುಜಿತಾ ವಿ ಬಂಗೇರ, ಬೆಳ್ತಂಗಡಿ ಮಹಿಳಾ ಬಿಲ್ಲವ ವೇದಿಕೆಯ ಕಾರ್ಯದರ್ಶಿ ಶಾಂಭವಿ ಪಿ ಬಂಗೇರ, ಸಿಯೋನ್ ಆಶ್ರಮದ ಆಡಳಿತ ಮಂಡಳಿಯವರು, ಸಿಬ್ಬಂದಿ ವರ್ಗದವರು, ಮತ್ತು ಆಶ್ರಮ ನಿವಾಸಿಗಳೆಲ್ಲರೂ ಉಪಸ್ಥಿತರಿದ್ದರು.

ಈ ಸಭಾ ಕಾರ್ಯಕ್ರಮದ ಅತಿಥಿಗಳೆಲ್ಲರನ್ನು ಸಂಸ್ಥೆಯ ಸಿಬ್ಬಂದಿಯವರಾದ ಕು. ದೀಕ್ಷಿತಾರವರು ಸ್ವಾಗತಿಸಿ, ಸಂಸ್ಥೆಯ ಸಿಬ್ಬಂದಿ ಸುಜಾತಾರವರು ಕಾರ್ಯಕ್ರಮವನ್ನು ನಿರೂಪಿಸಿದರು. ಮಹಿಳಾ ದಿನಾಚರಣೆಯ ಅಂಗವಾಗಿ ಆಶ್ರಮ ನಿವಾಸಿಗಳಿಗೆ ಭೋಜನ ಕೂಟವನ್ನು ಏರ್ಪಡಿಸಲಾಗಿತ್ತು.

Related posts

ನಾಳ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಸ್ವಾತಂತ್ರ್ಯ

Suddi Udaya

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ಬೆಳ್ತಂಗಡಿ ತಾಲೂಕು ಸಮಿತಿಯ ಅಧ್ಯಕ್ಷರಾಗಿ ಪ್ರೊ.ಗಣಪತಿ ಭಟ್ ಪುನರಾಯ್ಕೆ

Suddi Udaya

ಗುರುವಾಯನಕೆರೆ ಕೆರೆ ಬಳಿ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದು ಪರಾರಿಯಾದ ಲಾರಿ: ತಪ್ಪಿದ ಅನಾಹುತ

Suddi Udaya

ನಾವೂರು ಗ್ರಾ.ಪಂ. ಕಾಯಿದೆ ಮತ್ತು ಮಕ್ಕಳ ಹಕ್ಕುಗಳ ಭಿತ್ತಿಪತ್ರ ಬಿಡುಗಡೆ

Suddi Udaya

ಚಾರ್ಮಾಡಿ ಘಾಟಿಯ 7ನೇ ತಿರುವಿನಲ್ಲಿ ವಾಹನ ಸವಾರರಲ್ಲಿ ಭೀತಿ ಹುಟ್ಟಿಸಿದ ಒಂಟಿ ಸಲಗ

Suddi Udaya

ಉಜಿರೆ ಎಸ್.ಡಿ.ಎಮ್ ಆಂ.ಮಾ. ಶಾಲೆಯಲ್ಲಿ ಗಣಿತ ಪ್ರಯೋಗಾಲಯದ ಮಹತ್ವದ ಕುರಿತು ತರಬೇತಿ ಕಾರ್ಯಾಗಾರ

Suddi Udaya
error: Content is protected !!