25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮುಂಡಾಜೆ ಕೀರ್ತನಾ ಕಲಾ ತಂಡದ ವತಿಯಿಂದ ನಿವೃತ್ತ ಚಂದ್ರಕಾಂತ ಪ್ರಭು ರಿಗೆ ಅಭಿನಂದನೆ ಕಾರ್ಯಕ್ರಮ

ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದಂತಹ ಚಂದ್ರಕಾಂತ ಪ್ರಭು ಇವರು ಇತ್ತೀಚೆಗೆ ವಯೋ ನಿವೃತ್ತಿ ಹೊಂದಿದರಿಂದ ಕೀರ್ತನಾ ಕಲಾ ತಂಡದ ವತಿಯಿಂದ ಅಭಿನಂದನೆ ಕಾರ್ಯಕ್ರಮವು ಮುಂಡಾಜೆ ಗ್ರಾಮ ಪಂಚಾಯತಿ ಸಭಾಭವನದಲ್ಲಿ ಜರಗಿತು.

ತಂಡದ ಸಂಘಟನ ಕಾರ್ಯದರ್ಶಿ ನಾರಾಯಣ ಶೆಟ್ಟಿ ಇವರು ಸಿಇಓ ಇವರಿಗೆ ಯಕ್ಷಗಾನ ಶೈಲಿಯ ಹಾಡಿನ ಮೂಲಕ ಗೌರವಾರ್ಪಣೆಯನ್ನು ಸಲ್ಲಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಣೇಶ್ ಬಂಗೇರ ಕೂಳೂರು ಮುಂಡಾಜೆ ಪಂಚಾಯತ್ ಅಧ್ಯಕ್ಷರು ವಹಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ತಂಡದ ಸಂಚಾಲಕರಾದ ಮಧು ಶೆಟ್ಟಿ ಹುರ್ತಾಜೆ, ಗ್ರಾಮ ಪಂಚಾಯತ್ ಸದಸ್ಯರಾದ ರಾಮಣ್ಣ ಶೆಟ್ಟಿ ಅಗರಿ, ಮಂಡಾಜೆ ಪ್ಯಾಕ್ಸ್ ನ ನಿರ್ದೇಶಕರಾದ ಚೆನ್ನಕೇಶವ ಅರಸ ಮಜಲು ,ಅಶ್ವಿನಿ ಹೆಬ್ಬಾರ್, ಲ್ಯಾoಪ್ಸ್ ಸೊಸೈಟಿ ನಿರ್ದೇಶಕಿ ಲೀಲಾವತಿ ಗೌರವ ಉಪಸ್ಥಿತರಿದ್ದರು.
ತಂಡದ ಪದಾಧಿಕಾರಿಗಳಾದಂತಹ ಮನೋಹರ ನಾಯ್ಕ, ಪ್ರದೀಪ್ ಶೆಟ್ಟಿ, ದುಗ್ಗಪ್ಪ ನಾಯ್ಕ, ವಿನೋದ್ ಶೆಟ್ಟಿ, ಪ್ರಮೋದ್ ಪೂಜಾರಿ, ಚಂದ್ರಶೇಖರ ಗೌಡ, ನಿಶ್ಮಿತಾ ಇವರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಜಿತೀಕ್ಷಾ ಸ್ವಾಗತಿಸಿ, ಕೇಶವ ಮುಂಡಾಜೆ ಧನ್ಯವಾದವನ್ನು ನೀಡಿದರು. ತಂಡದ ಅಧ್ಯಕ್ಷ ಸದಾನಂದ ಬಿ ಮುಂಡಾಜೆ ಇವರು ಅಭಿನಂದನಾ ಭಾಷಣ ಮಾಡಿ ಕಾರ್ಯಕ್ರಮವನ್ನು ನಿರೂಪಿಸಿದರು.

Related posts

ಕಳೆಂಜ ಸಂತ ಸೆಬಾಸ್ಟಿಯನ್ ದೇವಾಲಯದಲ್ಲಿ ಉಚಿತ ಫೂಟ್ ಫಲ್ಸ್ ಥೆರಪಿ ಶಿಬಿರಕ್ಕೆ ಚಾಲನೆ

Suddi Udaya

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಪ.ಪೂ. ಕಾಲೇಜು ವಾರ್ಷಿಕೋತ್ಸವ ಸಮಾರಂಭ

Suddi Udaya

ಧರ್ಮಸ್ಥಳ ಕ್ಷೇತ್ರದ ಮೇಲೆ ನಡೆಯುತ್ತಿರುವ ಅಪಪ್ರಚಾರ ಕೊನೆಯಾಗುವಂತೆ ಕರವೇ ಮಹಿಳಾ ತಂಡದ ಸದಸ್ಯರಿಂದ ಉರುಳು ಸೇವೆ

Suddi Udaya

ಕುಕ್ಕೇಡಿ ಸುಡುಮದ್ದು ತಯಾರಿಕ ಘಟಕದಲ್ಲಿ ಭೀಕರ ಸ್ಪೋಟ ಪ್ರಕರಣ: ಮಾಲಕ ಸೈಯ್ಯದ್ ಬಶೀರ್ ಪೊಲೀಸ್ ವಶ

Suddi Udaya

ಹಳ್ಳಿಂಗೇರಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡ “ಕ್ಷೀರಾಬ್ಧಿ” ಉದ್ಘಾಟನೆ

Suddi Udaya

ನಿಟ್ಟಡೆ ಕುಂಭ ಶ್ರೀ ಆಂಗ್ಲ ಮಾಧ್ಯಮ ಶಾಲಾ ಕಾಲೇಜಿನಲ್ಲಿ ಕುಂಭ ಕಾರ್ನಿವಾಲ್ ಕಾರ್ಯಕ್ರಮ

Suddi Udaya
error: Content is protected !!