April 26, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಂದ ಅನಾರೋಗ್ಯದಲ್ಲಿರುವ ಗ್ರಾಮ ಪಂಚಾಯತ್ ನೌಕರರಿಗೆ ರೂ.35 ಸಾವಿರ ಆರ್ಥಿಕ ನೆರವು ಹಾಗೂ ಪಡಿತರ ವಿತರಣೆ

ಇಂದಬೆಟ್ಟು ಗ್ರಾಮ ಪಂಚಾಯತ್ ಬಿಲ್ ಕಲೆಕ್ಟರ್ ಗೋಪಾಲ ಇವರು ಅನಾರೋಗ್ಯದಿಂದ ಬಳಲುತ್ತಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ನಿವೃತ್ತ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಮತಿ ಸುಶೀಲ ಹೆಗ್ಡೆ, ರತ್ನರಾಜ ಹೆಗ್ಡೆ, ರೊನಾಲ್ಡ್ ತಾವ್ರ್ಹೋ, ಉಜಿರೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ ಇವರುಗಳ ಸಹಕಾರದೊಂದಿಗೆ ಸುಮಾರು ರೂ.35ಸಾವಿರಗಳ ಆರ್ಥಿಕ ನೆರವನ್ನು ಚೆಕ್ ಮೂಲಕ ನೌಕರರ ಕುಟುಂಬಕ್ಕೆ ನೀಡಲಾಯಿತು.

ಅನಾರೋಗ್ಯದಲ್ಲಿರುವ ಗೋಪಾಲ ಕೆ ಇಂದಬೆಟ್ಟು ಬಿಲ್ ಕಲೆಕ್ಟರ್ ಇವರಿಗೆ ಪಡಿತರವನ್ನು ವಿತರಿಸಿದರು. ಹಾಗೂ ಪ್ರತಿ ತಿಂಗಳು ಪಡಿತರ ನೀಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಶ್ರೇಯೋಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಡಾ. ದೇವಿಪ್ರಸಾದ್ ಬೊಲ್ಮ, ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷ ರುಕೇಶ್ ಕಲ್ಮಂಜ, ಬೆಳ್ತಂಗಡಿ ತಾಲೂಕು ಘಟಕದ ಕಾರ್ಯದರ್ಶಿ ಶ್ರೀಮತಿ ಮೀನಾಕ್ಷಿ ನಡ, ಉಪಸ್ಥಿತರಿದ್ದರು. ನೌಕರರ ಸಂಘದಿಂದ ಕೃತಜ್ಞತೆ ಸಲ್ಲಿಸಲಾಯಿತು.

Related posts

ಉಜಿರೆ ಎಸ್.ಡಿ.ಎಂ ಕಾಲೇಜಿನ ಕ್ರೀಡಾ ವಿಭಾಗದ ಕ್ರೀಡಾವಾಣಿ ಭಿತ್ತಿಪತ್ರಿಕೆ ಅನಾವರಣ

Suddi Udaya

ರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್: ಕಾಯರ್ತಡ್ಕ ದಿವ್ಯಜ್ಯೋತಿ ಶಾಲಾ ವಿದ್ಯಾರ್ಥಿ ಆ್ಯಡ್ಲಿನ್ ಎಲಿಜಬೆತ್ ಜೆರಿನ್ ಕುಮಿಟೆ ವಿಭಾಗದಲ್ಲಿ ಚಿನ್ನದ ಪದಕ

Suddi Udaya

ಗೇರುಕಟ್ಟೆ: ಎ.ಪಿ.ಉಸ್ತಾದ್ ರಿಂದ ಪರಪ್ಪು ಜಮಾಅತ್ ನ ಗೌರವಾಧ್ಯಕ್ಷರಾಗಿ ಕಾಜೂರು ತಂಙಳ್, ಅಧ್ಯಕ್ಷರಾಗಿ ಜಿ.ಡಿ.ಅಶ್ರಫ್ ಆಯ್ಕೆ

Suddi Udaya

ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಪೂಜೆ

Suddi Udaya

ಮಿಜಾರುಗುತ್ತು ಆನಂದ ಆಳ್ವ ರವರ ನಿಧನಕ್ಕೆ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ ಸಂತಾಪ

Suddi Udaya

ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ವತಿಯಿಂದ ಸಾಮೂಹಿಕ ವಿವಾಹ ನಿಶ್ಚಿತಾರ್ಥ

Suddi Udaya
error: Content is protected !!