April 29, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ಶ್ರೀ ರಾಘವೇಂದ್ರ ಸ್ವಾಮಿ ಬ್ರಹ್ಮಕಲಶೋತ್ಸವ ಸಮಿತಿಯ ಸಮಾಲೋಚನೆ ಸಭೆ: ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾಗಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ ಆಯ್ಕೆ

ಬೆಳ್ತಂಗಡಿ: ಲಾಯಿಲ ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನದ ವತಿಯಿಂದ ಏಪ್ರಿಲ್ 20ರಿಂದ 23ರ ವರೆಗೆ ನಡೆಯುವ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆಯು ಮಾ.09 ರಂದು ಶ್ರೀಮಠದಲ್ಲಿ ನಡೆಯಿತು.

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾಗಿ ಬೆಳ್ತಂಗಡಿಯ ಬೆಸ್ಟ್ ಫೌಂಡೇಶನ್ ಅಧ್ಯಕ್ಷರಾದ ರಕ್ಷಿತ್ ಶಿವರಾಮ್ ರವರು ಸರ್ವಾನುಮತದಿಂದ ಆಯ್ಕೆಯಾದರು.

ನಿವೃತ ಪ್ರಾಂಶುಪಾಲ ಎ.ಕೃಷ್ಣಪ್ಪ ಪೂಜಾರಿಯವರು ಪ್ರಾಸ್ತಾವಿಸಿ ಶ್ರೀ ರಾಘವೇಂದ್ರ ಮಠ 24 ವರ್ಷದಿಂದ ನಡೆದು ಬಂದ ದಾರಿಯನ್ನು ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ ಪೀತಾಂಬರ ಹೆರಾಜೆ ಅವರು ಕ್ಷೇತ್ರ ಅಭಿವೃದ್ಧಿ ಪಥದಲ್ಲಿ ಸಾಗಲು ಸಹಕರಿಸಿದ ಮಹನೀಯರನ್ನು ನೆನೆಸಿದರು.

ಪ್ರೊಫೆಸರ್ ಬಿಎ ಕುಮಾರ ಹೆಗ್ಡೆಯವರು ಕಲಿಯುಗದ ಕಾಮಧೇನು ಶ್ರೀ ರಾಘವೇಂದ್ರ ಸ್ವಾಮಿಗಳ ಪವಾಡಗಳನ್ನು ನೆನೆಸಿದರು.

ರಕ್ಷಿತ್ ಶಿವರಾಮ್ ರವರು ಈ ಬಾರಿಯ ಬ್ರಹ್ಮಕಲಶೋತ್ಸವವನ್ನು ಭಕ್ತರ ಸಹಕಾರದಿಂದ ಯಶಸ್ವಿಯಾಗಿ ನೆರವೇರಿಸುವುದಾಗಿ ತಿಳಿಸಿದರು.

ಮುಖ್ಯ ಅರ್ಚಕ ರಾಘವೇಂದ್ರ ಬಾಂಗಿಣ್ಣಾಯರವರು ಪೂಜಾ ವಿಧಿ ವಿಧಾನಗಳ ಬಗ್ಗೆ ಮಾಹಿತಿಯನ್ನು ನೀಡಿದರು. ವೇದಿಕೆಯಲ್ಲಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ವಿಟ್ಠಲ್ ಶೆಟ್ಟಿ, ಶ್ರೀಮತಿ ಸುಜಿತಾ ಬಂಗೇರ, ಶ್ರೀಮತಿ ಲೋಕೇಶ್ವರಿ ವಿನಯಚಂದ್ರ, ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಅಧಿಕಾರಿ ಸುರೇಂದ್ರ, ಮಹಾಬಲ ಶೆಟ್ಟಿ ಮುಂತಾದವರು ವೇದಿಕೆಯಲ್ಲಿದ್ದರು.

ಸುರೇಶ್ ಶೆಟ್ಟಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ವಸಂತ ಸುವರ್ಣ ರವರು ವಂದಿಸಿದರು. ತಾಲೂಕಿನ ವಿವಿಧ ಸಂಘ ಸಂಸ್ಥೆಗಳ ಗಣ್ಯರು, ಅಧ್ಯಕ್ಷರುಗಳು, ಪದಾಧಿಕಾರಿಗಳು, ಸಭೆಯಲ್ಲಿ ಹಾಜರಿದ್ದರು.

Related posts

ತೆಕ್ಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ನಿರ್ದೇಶಕರುಗಳ ಅವಿರೋಧ ಆಯ್ಕೆ

Suddi Udaya

ಉಜಿರೆ ಸಮೃದ್ಧಿ ಜ್ಞಾನ ವಿಕಾಸ ಕೇಂದ್ರದ ಉದ್ಘಾಟನೆ ಕಾರ್ಯಕ್ರಮ

Suddi Udaya

ಮಲೆಬೆಟ್ಟು: ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ : ಪ್ರಾಣಾಪಾಯದಿಂದ ಪಾರು

Suddi Udaya

ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ: ಕೈಯಿಂದ ಕಾರಿನ ಗಾಜು ಒಡೆದ ವಿವಾದ – ಐವರ‌ ವಿಚಾರಣೆ ಪರಸ್ಪರ ಪ್ರಕರಣ ದಾಖಲು

Suddi Udaya

ಗೇರುಕಟ್ಟೆ ಶ್ರೀ ಕೃಷ್ಣ ಮಹಿಳಾ ಭಜನಾ ಮಂಡಳಿ ವತಿಯಿಂದ ಕೃಷ್ಣ ಜನ್ಮಾಷ್ಠಮಿ

Suddi Udaya

ತೆಕ್ಕಾರು: ಬಾಜಾರು ನಲ್ಲಿ ವಿದ್ಯುತ್ ಪರಿವರ್ತಕದಿಂದ ಕಿಡಿ ಸಿಡಿದು ವ್ಯಾಪಿಸಿದ ಬೆಂಕಿ: ಹಲವು ಮರಗಳು ಬೆಂಕಿಗಾಹುತಿ

Suddi Udaya
error: Content is protected !!