March 10, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಉಜಿರೆ: ರತ್ನಮಾನಸದಲ್ಲಿ ಮಾತೃ, ಪಿತೃ ,ಪೋಷಕರ ಸಭೆ ಹಾಗೂ ಗುರು ವಂದನ ಕಾರ್ಯಕ್ರಮ

ಉಜಿರೆ : ರತ್ನಮಾನಸ ವಿದ್ಯಾರ್ಥಿ ನಿಲಯದಲ್ಲಿ ಮಾತೃ ,ಪಿತೃ, ಪೋಷಕರ ಸಭೆ ಹಾಗೂ ಗುರು ವಂದನ ಕಾರ್ಯಕ್ರಮವು ಮಾ.8ರಂದು ನಡೆಯಿತು.


ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ನೀರ ಚಿಲುಮೆಯ ನಿನಾದದ ಶ್ರೀಮತಿ ಸೋನಿಯಾವರ್ಮ ರವರು ದೀಪ ಪ್ರಜ್ವಲನೆ ಮಾಡಿ ಪ್ರಪಂಚದಲ್ಲಿ ದುಡ್ಡು ಕೊಟ್ಟರೆ ಎಲ್ಲವನ್ನು ಕಲಿಯಬಹುದು ಆದರೆ ಸಂಸ್ಕಾರವನ್ನು ಕಲಿಯಲು ಸಾಧ್ಯವಿಲ್ಲ ಹೆತ್ತವರು ಮಕ್ಕಳಿಗೆ ಕಷ್ಟವನ್ನು ಅರ್ಥಮಾಡಿಸಿಕೊಡಬೇಕು. ರತ್ನಮಾನಸದಲ್ಲಿ ಕಲಿತ ವಿದ್ಯಾರ್ಥಿಗಳು ಅಮೂಲ್ಯ ರತ್ನಗಳಾಗಿ ಹೊರಹೊಮ್ಮಬೇಕು ಎಂದು ತಿಳಿಸಿದರು.


ಎಸ್ ಡಿ ಎಂ ಪದವಿ ಕಾಲೇಜಿನ ನಿವೃತ ಪ್ರಾಂಶುಪಾಲರಾದ ಕುಮಾರ್ ಹೆಗ್ಡೆಯವರು ಮಾತನಾಡಿ ರವೀಂದ್ರನಾಥ ಠಾಗೋರ್ ರವರ ಶಾಂತಿನಿಕೇತನಕ್ಕೆ ಸರಿಯಾದ ಸಂಸ್ಥೆ ಎಂದರೆ ರತ್ನಮಾನಸ ಹತ್ತನೇ ತರಗತಿಯ ವಿದ್ಯಾರ್ಥಿಗಳು ಧೈರ್ಯ ಆತ್ಮವಿಶ್ವಾಸ ಹೆತ್ತವರ ಗುರುಹಿರಿಯರ ಖಾವಂದರ ಅನುಗ್ರಹದಿಂದ ಪರೀಕ್ಷೆಯನ್ನು ಬರೆಯಬೇಕು ಎಂದು ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬಿದರು.

ಎಸ್ ಡಿ ಎಂ ಶಿಕ್ಷಣ ಸಂಸ್ಥೆಯ ನಿವೃತ ಕ್ಷೇಮ ಪಾಲನಾಧಿಕಾರಿಯಾಗಿರುವ ಸೋಮಶೇಖರ್ ಶೆಟ್ಟಿಯವರು ಮಾತನಾಡಿ ರತ್ನಮಾನಸ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಯನ್ನು ಮಾಡಿದ್ದಾರೆ ಶ್ರದ್ಧೆ ಮತ್ತು ಏಕಾಗ್ರತೆಯಿಂದ ವಿದ್ಯಾರ್ಥಿಗಳು ಓದಬೇಕು ಎಂದು ಶುಭ ಹಾರೈಸಿದರು.

ಎಸ್ ಡಿ ಎಂ ಸೆಕೆಂಡರಿ ಶಾಲೆಯ ಮುಖ್ಯೋಪಾಧ್ಯಾಯರಾಗಿರುವ ಸುರೇಶ್ ಕುಮಾರ್ ಮಾತನಾಡಿ ವಿದ್ಯಾರ್ಥಿಗಳು ಓದಿನಕಡೆ ಹೆಚ್ಚಿನ ಗಮನ ಹರಿಸಬೇಕು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಬೇಕು ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ವಹಿಸಿದ ರತ್ನಮಾನಸ ವಿದ್ಯಾರ್ಥಿ ನಿಲಯದ ಪಾಲಕರಾದ ಯತೀಶ್ ಕೆ ಬಳಂಜ ರವರು ಮಾತನಾಡಿ ಈ ಮೂರು ಕಾರ್ಯಕ್ರಮವು ತ್ರಿವೇಣಿ ಸಂಗಮವಾಗಿದೆ. ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ವಿದ್ಯಾರ್ಥಿಗಳು ಓದಿನಕಡೆ ಹೆಚ್ಚಿನ ಗಮನ ಹರಿಸಬೇಕು. ಪೋಷಕರು ಅವರಿಗೆ ಭೋದನೆಯನ್ನು ಮಾಡಬೇಕು. ರತ್ನಮಾನಸ ದಿಂದ ಹೋಗುವಾಗ ಅಮೂಲ್ಯ ರತ್ನಗಳಾಗಿ ಹೋಗಬೇಕು ಎಂದು ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಪದವಿ ಕಾಲೇಜಿನ ನಿವೃತ ಪ್ರಾಂಶುಪಾಲರಾದ ಕುಮಾರ್ ಹೆಗ್ಡೆ ಹಾಗೂ ಎಸ್ ಡಿ ಎಂ ಶಿಕ್ಷಣ ಸಂಸ್ಥೆಯ ನಿವೃತ ಕ್ಷೇಮ ಪಾಲನಾಧಿಕಾರಿಯಾದ ಸೋಮಶೇಖರ್ ಶೆಟ್ಟಿ ಯವರನ್ನು ರತ್ನಮಾನಸ ವಿದ್ಯಾರ್ಥಿ ನಿಲಯದ ವತಿಯಿಂದ ಸನ್ಮಾನಿಸಲಾಯಿತು.


ವಿದ್ಯಾರ್ಥಿಗಳು ಶಿಕ್ಷಕರಿಗೆ ಹಾಗೂ ಅತಿಥಿಯವರಿಗೆ ಆರತಿಯನ್ನು ಮಾಡಿ ಆಶಿರ್ವಾದವನ್ನು ಪಡೆದರು.
ನಿಲಯದ ಅಧ್ಯಾಪಕರಾದ ರವಿಚಂದ್ರ ಸ್ವಾಗತಿಸಿ ವಿದ್ಯಾರ್ಥಿ ವಿನಾಯಕ ಪ್ರಾರ್ಥನೆ ಮಾಡಿ ಅಧ್ಯಾಪಕರಾದ ಉದಯ ರಾಜ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಲ್ಲಿಸಿದರು.


ವೇದಿಕೆಯಲ್ಲಿ ಅತಿಥಿಗಳು, ಎಸ್ ಡಿ ಎಂ ಸೆಕೆಂಡರಿ ಶಾಲೆಯ ಶಿಕ್ಷಕ ಶಿಕ್ಷಕಿಯರು ಹಾಗೂ ರತ್ನಮಾನಸ ವಿದ್ಯಾರ್ಥಿ ನಿಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Related posts

ಅಳದಂಗಡಿ ವಿಠಲದಾಸ್ ನಿಧನ

Suddi Udaya

ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ತುಳು ಭಾಷಣ ಸ್ಪರ್ಧೆ: ಬೆಳಾಲು ಪ್ರೌಢಶಾಲೆಯ ಕು. ಕೀರ್ತನಾ ರಾಜ್ಯ ಮಟ್ಟಕ್ಕೆ ಆಯ್ಕೆ

Suddi Udaya

ಬೆಳ್ತಂಗಡಿ ಕೋಟಕ್ ಲೈಫ್ 2ನೇ ವರ್ಷಕ್ಕೆ ಪಾದಾರ್ಪಣೆ

Suddi Udaya

ಮಾ.1: ಗ್ರಾ.ಪಂ. ನೌಕರರ ವಿವಿಧ ಬೇಡಿಕೆ ಈಡೇರಿಕೆಗೆ ಕೈಗೆ ಕಪ್ಪು ಪಟ್ಟಿ ಧರಿಸಿ ವಿಭಿನ್ನ ಪ್ರತಿಭಟನೆ

Suddi Udaya

ಪುದುವೆಟ್ಟು ಶ್ರೀ ಧ.ಮಂ.ಅ.ಹಿ.ಪ್ರಾ. ಶಾಲೆಯಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ

Suddi Udaya

ನಕ್ಸಲ್ ನಾಯಕ ವಿಕ್ರಮ್ ಗೌಡ ನಕ್ಸಲ್ ನಿಗ್ರಹ ದಳದ ಎನ್ ಕೌಂಟರ್ ನಲ್ಲಿ ಹತ್ಯೆ: ರಾಜ್ಯ ಸರ್ಕಾರ ತಕ್ಷಣ ಎನ್ ಕೌಂಟರ್ ನ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು: ಶೇಖರ್ ಲಾಯಿಲ

Suddi Udaya
error: Content is protected !!