April 26, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ ಎಸ್ ಡಿ ಎಂ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಹಳೆ ವಿದ್ಯಾರ್ಥಿಗಳ ಸಮ್ಮಿಲನ

ಉಜಿರೆ: ಮನುಷ್ಯನು ಜೀವನದಲ್ಲಿ ಕಷ್ಟವನ್ನು ಅನುಭವಿಸಿದರೆ ಮಾತ್ರ ಮುಂದೆ ಸುಖವನ್ನು ಕಾಣಬಹುದು ಕಷ್ಟವನ್ನು ಅನುಭವಿಸದೆ ಸುಖವನ್ನು ಕಾಣಲು ಸಾಧ್ಯವಿಲ್ಲ ಹಸಿವು ಬಡತನ ಉದ್ಯೋಗ ಅವಮಾನ ಮತ್ತು ಸೋಲು ಈ ಹಂತಗಳನ್ನು ಕಲಿತರೆ ಜೀವನದಲ್ಲಿ ಯಾವ ಸಾಧನೆಯನ್ನು ಬೇಕಾದರೂ ಮಾಡಬಹುದು ಎಂದು ಉಜಿರೆ, ಲಕ್ಷ್ಮಿ ಗ್ರೂಪ್ಸ್ ಮಾಲಕರಾದ ಮೋಹನ್ ಕುಮಾರ್ ಹೇಳಿದರು.

ಇವರ ಸಾಧನೆಗೆ ಪ್ರೋತ್ಸಾಹ ನೀಡಿದ ಧರ್ಮಸ್ಥಳದ ಡಾ. ಡಿ ವೀರೇಂದ್ರ ಹೆಗ್ಗಡೆ ,ಮಾತೃಶ್ರೀ ಹೇಮಾವತಿ ಹೆಗ್ಗಡೆ ಮತ್ತು ಡಿ ಹರ್ಷೇಂದ್ರ ಕುಮಾರ್ ಇವರನ್ನು ಸ್ಮರಿಸಿ ಅವರು ಮಾ. 9 ರಂದು ಇಂದ್ರಪ್ರಸ್ಥ ಸಭಾಂಗಣದಲ್ಲಿ ಆಯೋಜಿಸಿದ್ದ ಎಸ್ ಡಿ ಎಂ ಪಾಲಿಟೆಕ್ನಿಕ್ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಾಂಶುಪಾಲರಾದ ಸಂತೋಷ್ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದ ಸಂಯೋಜಕಿಯಾದ ಶ್ರೀಮತಿ ಮೇರಿಸ್ಮಿತಾ ರವರು ಹಳೆ ವಿದ್ಯಾರ್ಥಿ ಸಂಘದ ಮಹತ್ವದ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರೆ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಣಯರಾಜ್ ಜೈನ್ ಇವರು ಹಳೆ ವಿದ್ಯಾರ್ಥಿ ಸಂಘದ ಮುಂದಿನ ರೂಪುರೇಷೆಗಳ ಬಗ್ಗೆ ವಿವರಿಸಿದರು ವೇದಿಕೆಯಲ್ಲಿ ಕಾಲೇಜಿನ ವ್ಯವಸ್ಥಾಪಕ ಚಂದ್ರನಾಥ ಜೈನ್ ಉಪಸ್ಥಿತರಿದ್ದರು. ಅರವ ರಾಕ್ ಬ್ಯಾಂಡ್ ವತಿಯಿಂದ ಲೈವ್ ಮ್ಯೂಸಿಕ್ ನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಉನ್ನತ ಸಾಧನೆಗೈದ ಕಾಲೇಜಿನ ಹಳೆ ವಿದ್ಯಾರ್ಥಿಗಳನ್ನು ಕಾಲೇಜಿನ ಉಪನ್ಯಾಸಕಿ ಶ್ರೀಮತಿ ರೇನಿಟಾ ಫೆರ್ನಾಂಡಿಸ್ ಸಭೆಗೆ ಪರಿಚಯಿಸಿದರು. ನಿಖಿತ್ ಜೈನ್ ಸ್ವಾಗತಿಸಿದರು. ಹಳೇ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ನಿಶ್ಮಿತಾ ವಂದಿಸಿದರು. ಕಾಲೇಜಿನ ಹಿರಿಯ ಹಳೆ ವಿದ್ಯಾರ್ಥಿ ಸಾಯಿ ಕಿರಣ್ ಕಾರ್ಯಕ್ರಮ ನಿರೂಪಿಸಿದರು.

Related posts

ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯ ವಿದ್ಯಾರ್ಥಿ ಸಾತ್ವಿಕ್ ಭಟ್ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳಲು ಆಯ್ಕೆ

Suddi Udaya

ತೆಂಕಕಾರಂದೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ‘ಭಾಗವತ ಸಪ್ತಾಹ’

Suddi Udaya

ಮೇಲಂತಬೆಟ್ಟು: ದರ್ಶನ್ ಯು ಸಾಲ್ಯಾನ್ ಅಸೌಖ್ಯದಿಂದ ನಿಧನ

Suddi Udaya

‘ಬೆಳ್ತಂಗಡಿ ಸಂಭ್ರಮ’ ಕಾರ್ಯಕ್ರಮಕ್ಕೆ ಚಾಲನೆ: ಮೂರು ದಿನಗಳ ಕಾಲ ಬೆಳ್ತಂಗಡಿ ಮಾರಿಗುಡಿ ಮೈದಾನದಲ್ಲಿ ಸಂಭ್ರಮ

Suddi Udaya

ಬಂದಾರು ಗ್ರಾ.ಪಂ. ನಲ್ಲಿ ಪಿಎಮ್ ಕಿಸಾನ್ ಯೋಜನೆಯ ಇ-ಕೆವೈಸಿ ಕಾರ್ಯಕ್ರಮ

Suddi Udaya

ಅಮೃತ ಸೋಮೇಶ್ವರರವರ ನೆನಪಿಗೆ ‘ಅಮೃತ ಮಥನ’ ಕಾರ್ಯಕ್ರಮ

Suddi Udaya
error: Content is protected !!