March 10, 2025
ಗ್ರಾಮಾಂತರ ಸುದ್ದಿಚಿತ್ರ ವರದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ದೀಕ್ಷಾನ್ವಯ : ಎಸ್.ಡಿ.ಎಂ. ಬಿ.ಎಡ್ ಕಾಲೇಜಿನ ಪ್ರಾರಂಭೋತ್ಸವ

ಉಜಿರೆ: ಶ್ರೀ ಧರ್ಮಸ್ಠಳ ಮಂಜುನಾಥೇಶ್ವರ ಶಿಕ್ಷಣ ಮಹಾವಿದ್ಯಾಲಯ (ಬಿ.ಎಡ್.) ದಲ್ಲಿ ಮಾರ್ಚ್ 10 ರಂದು 2024-25 ನೇ ಸಾಲಿನ ಬಿ.ಎಡ್. ತರಗತಿಯ ಪ್ರಾರಂಭೋತ್ಸವ “ದೀಕ್ಷಾನ್ವಯ” ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಯಿತು.


ಕಾರ್ಯಕ್ರಮದಲ್ಲಿ ಡಾ. ರಜತಾ, ಗ್ರಂಥಪಾಲಕರು, ಎಸ್.ಡಿ.ಎಂ. ತಾಂತ್ರಿಕ ಮಹಾವಿದ್ಯಾಲಯ ಉಜಿರೆ ಇವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಸಮಾಜದ ಹೃದಯದಲ್ಲಿ ಶಿಕ್ಷಣ ಮತ್ತು ಶಿಕ್ಷಕರ ಪಾತ್ರವು ಬಹು ಮುಖ್ಯವಾಗಿದೆ. ಪರಿಪೂರ್ಣ ಶಿಕ್ಷಕನಾದರೆ ಮಾತ್ರ ಪರಿಪೂರ್ಣ ನಾಗರೀಕರನ್ನು ಸೃಷ್ಟಿಸಲು ಸಾಧ್ಯ. ಶಿಕ್ಷಕ ವೃತ್ತಿಯು ಕೇವಲ ಪಠ್ಯಪುಸ್ತಕಕ್ಕೆ ಸೀಮಿತವಾಗಿರದೇ ಬದಲಾಗಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದೆ ಎಂದರು.


ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಜಿರೆ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಧನ್ಯಕುಮಾರ್ ಮಾತನಾಡಿ ಶಿಕ್ಷಕನಾಗಿರುವವನು ಶಿಸ್ತು, ತಾಳ್ಮೆ, ಕ್ರಿಯಾಶೀಲತೆ, ಸಮಯಪ್ರಜ್ಞೆ, ಕರ್ತವ್ಯನಿಷ್ಠೆ ಹಾಗೂ ಕುಶಲತೆ ಹೊಂದಿರಬೇಕು. ವಿದ್ಯಾರ್ಥಿಗಳನ್ನು ಹಲವು ಚಟುವಟಿಕೆಗಳಲ್ಲಿ ಭಾಗವಹಿಸಿ ಅವರಲ್ಲಿರುವ ಸಾಮರ್ಥ್ಯವನ್ನು ಹೊರ ತರಲು ಅವಕಾಶ ಮಾಡಿಕೊಡುವವರೇ ನಿಜವಾದ ಶಿಕ್ಷಕರು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಸಂತೋಷ್ ಸಲ್ಡಾನರವರು ಮಾತನಾಡಿ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಸಂಸ್ಕೃತಿ ಮತ್ತು ಶಿಕ್ಷಕ ತರಬೇತಿಯಿಂದ ಉತ್ತಮ ವ್ಯಕ್ತಿತ್ವ ರೂಪುಗೊಳ್ಳಲು ಸಾಧ್ಯ. ಗುಣಮಟ್ಟದ ಶಿಕ್ಷಣ ದೊರಕುವುದಲ್ಲದೇ ಸರ್ವತೋಮುಖ ಕೌಶಲಗಳನ್ನು ಮೈಗೂಡಿಸಿಕೊಳ್ಳಲು ಶಿಕ್ಷಕ ತರಬೇತಿಯ ಅವಶ್ಯಕತೆ ಇದೆ ಎಂದರು. ವೇದಿಕೆಯಲ್ಲಿ ಎಸ್.ಡಿ.ಎಂ. ಮಹಿಳಾ ಐ.ಟಿ.ಐ. ಕಾಲೇಜಿನ ಪ್ರಾಂಶುಪಾಲರಾದ ಪ್ರಕಾಶ್ ಕಾಮತ್ ಉಪಸ್ಥಿತರಿದ್ದರು.

ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳನ್ನು ಭಾರತದ ನಕಾಶೆಯ ಸುತ್ತಲು ದೀಪ ಬೆಳಗಿಸುವ ಮೂಲಕ ಬರಮಾಡಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕ ವೃಂದದವರು, ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳ ಪೋಷಕರು ಹಾಗೂ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.


ಕಾರ್ಯಕ್ರಮವನ್ನು ಉಪನ್ಯಾಸಕರಾದ ತಿರುಮಲೇಶ ರಾವ್ ಎನ್ ಕೆ ಸ್ವಾಗತಿಸಿ, ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಯಾದ ಅಖಿಲಾ ಎಂ ಪಿ ವಂದಿಸಿ, ರಶ್ಮಿ ಕೆ ಪಿ ಕಾರ್ಯಕ್ರಮವನ್ನು ನಿರೂಪಿಸಿದರು.

Related posts

ಮಾಲಾಡಿ: ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ರಿಂದ ಕಾರ್ಯಕರ್ತರ ಸಭೆ

Suddi Udaya

ಕನ್ಯಾಡಿ: ಯಕ್ಷಭಾರತಿ ದಶಮಾನೋತ್ಸವ ಸಮಿತಿ ರಚನೆ

Suddi Udaya

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವ್ಯವಸ್ಥೆ ಕಾಶಿಬೆಟ್ಟು ಹೆದ್ದಾರಿಯಲ್ಲಿ ನಿಮಾ೯ಣವಾದ ಬಾವಿಯಾಕಾರದ ಹೊಂಡ, ಗುಂಡಿಗಳು ಸಂಚಾರಕ್ಕೆ ವಾಹನಗಳ ಪರದಾಟ, ಪ್ರತಿದಿನ ವಾಹನ ಬ್ಲಾಕ್

Suddi Udaya

ಸುಲ್ಕೇರಿಮೊಗ್ರು ಸ. ಹಿ. ಪ್ರಾ. ಶಾಲಾ ಶೌಚಾಲಯ ಕುಸಿತ

Suddi Udaya

ನಾರಾವಿ ಮಾಂಡೋವಿ ಮೋಟಾರ್ಸ್ ನಲ್ಲಿ 100 ನೇ ಕಾರಿನ ಕೀ ಹಸ್ತಾಂತರ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ಕಬ್ ಬುಲ್ ಬುಲ್, ರೇಂಜರ್ ರೋವರ್, ಮಕ್ಕಳಿಗೆ ದೇಶ ಭಕ್ತಿ ಗೀತ ಗಾಯನ ಸ್ಪರ್ಧೆ

Suddi Udaya
error: Content is protected !!