March 11, 2025
Uncategorized

* ಸೌತಡ್ಕ ದೇವಸ್ಥಾನದದಲ್ಲಿ 24,586 ಕೆ.ಜಿ. ಗಂಟೆ ಹಗರಣ ಆಗಿರುವ ಸಂಶಯವಿದೆ. * ಸವಿಸ್ತಾರ ತನಿಖೆಯನ್ನು ಕೈಗೊಳ್ಳಬಹುದು ಹಿಂದಿನ ತನಿಖಾ ವರದಿಯಲ್ಲಿ ಉಲ್ಲೇಖ. *ಮರು ತನಿಖೆಗೆ ಫೆ.20ರಂದು ಜಿಲ್ಲಾಧಿಕಾರಿಗಳ ಆದೇಶ * ಪತ್ರಿಕಾಗೋಷ್ಠಿಯಲ್ಲಿ ಪ್ರಶಾಂತ್ ಪೂವಾಜೆ


ಬೆಳ್ತಂಗಡಿ: ಸೌತಡ್ಕ ದೇವಸ್ಥಾನದ ಬಂಡಾರದಿಂದ 14,060 ಕೆ.ಜಿ. ಮತ್ತು 10,526 ಕೆ.ಜಿ. ಗಂಟಾ ಮಣಿಗಳು ಸೇರಿದಂತೆ ಒಟ್ಟು 24, 586ಕೆ.ಜಿ. ನಷ್ಟ ಆಗಿರುವ ಬಗ್ಗೆ ಸಂಶಯ ಬರುತ್ತದೆ. ಈ ಹಿಂದೆ ಆಗಿರುವ ಇಲಾಖಾ ವರದಿಯಲ್ಲಿ ಸವಿಸ್ತಾರ ತನಿಖೆಯನ್ನು ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಪತ್ರ ಇಲಾಖೆಯಿಂದ ಅಥವಾ ಮತ್ಯಾವುದೇ ಸೂಕ್ತ ಸಕ್ಷಮ ಪ್ರಾಧಿಕಾರದಿಂದ ಕೈಗೊಳ್ಳುವುದನ್ನು ಪರಿಗಣಿಸಬಹುದು ಎಂದು ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ನಾವು ಸಲ್ಲಿಸಿರುವ ದೂರಿಗೆ ಸ್ಪಂದಿಸಿ ಸಹಾಯಕ ಆಯುಕ್ತರಿಗೆ ದೇವಾಲಯದ ಹರಕೆ ಗಂಟೆ ಹಗರಣ ಮತ್ತು ಹುಂಡಿ ಹಣದ ಅವ್ಯವಹಾರದ ಕುರಿತು ಸೂಕ್ತ ತನಿಖೆ ನಡೆಸಿ ವಿವರವಾದ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಯವರು ಕಳೆದ ಫೆ.20ರಂದು ಆದೇಶಿಸಿರುತ್ತಾರೆ. ಎಂದು ಪ್ರಶಾಂತ ಪೂವಾಜೆ ಹೇಳಿದರು.

ಅವರು ಮಾ.10ರಂದು ಬೆಳ್ತಂಗಡಿ ಸುವರ್ಣ ಆರ್ಕೇಡ್ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾನತಾಡಿ, ದೇವಸ್ಥಾನದಲ್ಲಿ ನಡೆದ ಅವ್ಯವಹಾರದ ಸಮಯದಲ್ಲಿ ಅಸ್ಥಿತ್ವದಲ್ಲಿದ್ದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಮತ್ತು 4ಮಂದಿ ಮಾಜಿ ಸದಸ್ಯರು ಪ್ರಸ್ತುತ ನೂತನ ವ್ಯವಸ್ಥಾಪನಾ ಸಮಿತಿಗೆ ಅರ್ಜಿಯನ್ನು ಸಲ್ಲಿಸಿದ್ದು ಇವರುಗಳನ್ನು ನೂತನ ವ್ಯವಸ್ಥಾಪನಾ ಸಮಿತಿಗೆ ಆಯ್ಕೆ ಮಾಡದಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ, ರಾಜ್ಯ ಧಾರ್ಮಿಕ ಪರಿಷತ್‌ನ ಅಧ್ಯಕ್ಷರು ಹಾಗು ಸದಸ್ಯರುಗಳಿಗೆ ದಾಖಲೆ ಸಮೇತ ಲಿಖಿತ ದೂರು ಸಲ್ಲಿಸಿದ್ದೆವು. ಆದರೂ ನೂತನ ವ್ಯವಸ್ಥಾಪನಾ ಸಮಿತಿಗೆ ಇವರುಗಳು ಆಯ್ಕೆಯಾಗಿದ್ದು ಸಮಿತಿಯಲ್ಲಿ ಕೆಲವು ಮಾರ್ಪಾಡಾಗಿ ಪ್ರಸ್ತುತ ಹೊಸ ಸಮಿತಿಗೆ ಮಾನ್ಯ ಉಚ್ಚ ನ್ಯಾಯಾಲಯದ ತಡೆಯಾಜ್ಞೆಯಿದೆ ಎಂದರು.
ಕಳೆದ ೫ ವರ್ಷದ ಹಿಂದೆ 2019-20 ರ ಸಮಯದಲ್ಲಿ ನಡೆದ ಗಂಟೆ ಹರಾಜು ಅವ್ಯವಹಾರದ ಬಗ್ಗೆ ದೇವಳದಲ್ಲಿ ದಾಖಲೆಯಾಗಿರುವ ಗಂಟೆಯ ದಾಸ್ತಾನು ಇನ್ವೆಂಟರಿ ಪುಸ್ತಕದಲ್ಲಿ ಕಾರ್ಯನಿರ್ವಹಣಾಧಿಕಾರಿಯೊಂದಿಗೆ ಅಧಕ್ಷರ ಸಹಿ ಇರುವುದರಿಂದ, ತನಿಖಾ ವರದಿಯಲ್ಲಿ ದಾಖಲಿಸಿದಂತೆ ದಿನಾಂಕ 05.03.2020 ಕ್ಕೆ 10,523 ಕೆ.ಜಿ. ಗಂಟೆ ದಾಸ್ತಾನು ಉಳಿಕೆ ದಾಖಲಿಸಿದ್ದು, ದಿನಾಂಕ 16.04.2020 ರಂದು ಸಹಾಯಕ ಆಯುಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ತನಿಖೆ ನಡೆಸಿದ ಸಂದರ್ಭದಲ್ಲಿ ಉಗ್ರಾಣದಲ್ಲಿ ಅಧ್ಯಕ್ಷರ ಸಹಿಯೊಂದಿಗೆ ಇರುವ ಇನ್ವೆಂಟರಿ ರಿಜಿಸ್ಟರಿನಲ್ಲಿ ನಮೂದಿಸಿದಂತೆ 10,523 ಕೆ.ಜಿ. ಗಂಟೆಗಳು ಇಲ್ಲದಿರುವುದನ್ನು ಗಮನಿಸಲಾಯಿತು ಎಂದು ತನಿಖಾ ವರದಿಯಲ್ಲಿ 25ಕ್ರಮಾಂಕದಲ್ಲಿ ದಾಖಲಿಸಿರುತ್ತಾರೆ ಎಂದು ವಿವರಿಸಿದರು.
ತನಿಖಾ ವರದಿಯಲ್ಲಿ ಕ್ರಮ ಸಂಖ್ಯೆ 21ರಂತೆ, ತನಿಖೆಯಲ್ಲಿ ಅವಧಿ ಪೂರ್ಣಗೊಂಡ ಆಡಳಿತ ಮಂಡಳಿಯ ಎಲ್ಲಾ 8ಸದಸ್ಯರುಗಳ ಲಿಖಿತ ಹೇಳಿಕೆಯಲ್ಲಿ ದಿನಾಂಕ ೦3.೦3.2020ರಂದು ಹುಂಡಿ ಎಣಿಕೆಯಂದು ಹುಂಡಿ ಎಣಿಕೆ ಮಾಡುವ ಸಮಯದಲ್ಲಿ ಕಾರ್ಯನಿರ್ವಹಣಾಧಿಕಾರಿಯವರು ದಾಸ್ತಾನು ಗಂಟೆಗಳನ್ನು ಈ ಟೆಂಡರಿನಂತೆ ಮಾರಾಟ ಮಾಡಿದ ಬಗ್ಗೆ ನಮಗೆ ತಿಳಿಸಿದ್ದಾರೆ ಎಂಬ ಹೇಳಿಕೆಗೆ, ಅಂದು ನಡೆದ ಹುಂಡಿ ಎಣಿಕೆಯ ರಿಜಿಸ್ತರ್ ಪುಸ್ತಕದಲ್ಲಿ ಈ ೮ ಮಂದಿಯಲ್ಲಿ ಅಧ್ಯಕ್ಷರು ಮಾತ್ರ ಹುಂಡಿ ಎಣಿಕೆಯಂದು ಹಾಜರಿದ್ದ ಬಗ್ಗೆ ದಾಖಲೆ ಇರುವುದು, ಇವರುಗಳ ಲಿಖಿತ ಸಹಿ ಇಲ್ಲದ ಹೇಳಿಕೆಯ ಬಗ್ಗೆ ನೂರೆಂಟು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ ಎಂದು ತಿಳಿಸಿದರು.

ತನಿಖಾ ವರದಿಯ ಕ್ರಮಾಂಕ 18 ರಂತೆ ದೇವಳದ ಸಿಬ್ಬಂದಿಗಳು ( ನೌಕರರು)ಇವರಲ್ಲಿ ಅಂದಿನ ಅಧ್ಯಕ್ಷರ ತಮ್ಮನಾದ ರಾಘವೇಂದ್ರ ಶಬರಾಯ ಎಂಬವರನ್ನು ಬಿಟ್ಟು ದಿನಾಂಕ 02.01.2020ರಂದು ದೇವಳದಲ್ಲಿ ದಾಸ್ತಾನಿದ್ದ ಗಂಟೆಗಳನ್ನು ಅಬೂಬಕ್ಕರ್ ರಿಫಾಯಿ ಟ್ರೇಡಿಂಗ್ ಕಂಪೆನಿ ಅವರು ಅವರದೇ ಕೂಲಿ ಆಳುಗಳನ್ನು ಕರೆ ತಂದು ಗಂಟಾ ಮಣಿಗಳನ್ನು ಸಾಗಿಸಿರುವುದನ್ನು ಗಮನಿಸಿರುತ್ತೇವೆ ಎಂದು ಲಿಖಿತ ಹೇಳಿಕೆಯಲ್ಲಿ ತಿಳಿಸಿರುತ್ತಾರೆ ಎಂದು ತನಿಖಾ ವರದಿಯಲ್ಲಿ ದಾಖಲಿದ್ದು, ಇದರ ಪ್ರಕಾರ ದೇವಳದ ಸಿಬ್ಬಂದಿಗಳು ನೌಕರರ ಲಿಖಿತ ಹೇಳಿಕೆಯಲ್ಲಿ ಗಂಟಾ ಮಣಿ ದೇವಸ್ಥಾನದಿಂದ ಹೋಗಿರುವ ಬಗ್ಗೆ ನನಗೆ ತಿಳಿದಿರುತ್ತದೆ ಎಂಬ ಹೇಳಿಕೆಯನ್ನು ಗಮನಿಸಿದಾಗ ವರದಿಯ ಬಗ್ಗೆಯೂ ಅನುಮಾನ ವ್ಯಕ್ತವಾಗುತ್ತಿದೆ.
ದೇವಸ್ಥಾನದಲ್ಲಿ ದಿನಾಂಕ 12.09.2017 ರ ಸಭೆಯ ನಿರ್ಣಯ ಸಂಖ್ಯೆ ೩, ಅಂದಿನ ವ್ಯವಸ್ಥಾಪನಾ ಸಮಿತಿಯವರ ಉಲ್ಲೇಖಿತ ನಿರ್ಣಯದಂತೆ ಅನುಮತಿ ನೀಡಲಾದ ಸಿ.ಸಿ.ಕ್ಯಾಮರಾ ಅಳವಡಿಸಿ ನಿರ್ವಹಣೆಯೊಂದಿಗೆ ಚಾಲ್ತಿಯಲ್ಲಿದ್ದರೂ ತನಿಖಾ ವರದಿಯಲ್ಲಿ ಸಿ,ಸಿ.ಕ್ಯಾಮರಾದ ಉಲ್ಲೇಖವೇ ಇಲ್ಲದಿರುವುದು ಮತ್ತು ಸಿ.ಸಿ.ಕ್ಯಾಮರಾಗಳ ಅಡ್ಡಿನ್, ಯೂಸರ್ ನೇಮ್, ಹಾಗು ಪಾಸ್ವಾರ್ಡ್, ಡಿ ವಿ.ಆರ್ ಪೆಟ್ಟಿಗೆಗಳ ಕೀ ಗಳನ್ನು ದೇವಾಲಯಕ್ಕೆ ನೀಡದೇ ನಿರ್ವಹಣೆ ಮಾಡುವವರೇ ನಿಯಂತ್ರಿಸುತ್ತಿದ್ದುದು ಸಂಶಯಾಸ್ಪದವಾಗಿದೆ ಎಂದರು.
ತನಿಖಾ ವರದಿಯ ಕ್ರಮಾಂಕ 20 ರಂತೆ ವೇ ಬಿಲ್ ಗಳನ್ನು ಪರಿಶೀಲಿಸಿದಾಗ ಬಿಡ್ಡುದಾರ 02.02.2020 ರಂದು ಗಂಟಾ ಮಣಿಗಳು ಸಾಗಿಸಿದ ೩ ವಾಹನಗಳಲ್ಲಿ ಒಟ್ಟು ತೂಕ 26,069 ಕೆ.ಜಿ.ಹಾಗು ಬಿಡುದಾರ ಪಾವತಿಸಿದ್ದು 12 ಸಾವಿರ ಕೆ.ಜಿ.ಗಂಟಾ ಮಣಿಗೆ ಮಾತ್ರ ಆಗಿರುತ್ತದೆ. ಸಂಬಂಧದಲ್ಲಿ ವ್ಯತ್ಯಾಸವಾದ 14,060, ಕೆ.ಜಿ. ಗಂಟಾ ಮಣಿಗಳ ಬಗ್ಗೆ ತನಿಖೆಯಲ್ಲಿ ನಿರ್ಧಿಷ್ಟವಾದ ದಾಖಲೆ, ಸಾಕ್ಷ್ಯಗಳು ಮೇಲ್ನೋಟಕ್ಕೆ ಕಂಡ ಬರುತ್ತಿಲ್ಲ ಎಂಬ ವರದಿಯೊಂದಿಗೆ ಇರುವುದು ದೇವಳದ ಒಟ್ಟು ಗಂಟಾಮಣಿಗಳ ತೂಕದ ದಾಖಲೆ ಪುಸ್ತಕದ ದಾಖಲೆಯಲ್ಲಿ ಇಲ್ಲದೇ ಬಿಡ್ಡುದಾರ ಬಿಲ್ಲು ನೀಡಿರುವುದು ತನಿಖೆಯಲ್ಲಿಸಂಶಯಾಸ್ಪದವಾಗಿದೆ.
ತನಿಖಾ ವರದಿಯಲ್ಲಿ ದಿನಾಂಕ ೦4.೦2.2020ರಂದು ಕ್ಷೇತ್ರದ ಶಾಸಕರಾದ ಹರೀಶ್ ಪೂಂಜಾ ರವರು ವಿಧಾನ ಸಭೆಯಲ್ಲಿ ಗಮನ ಸೆಳೆಯು ಸೂಚನೆಯ ಮೇಲೆ ಪ್ರಶ್ನಿಸಿದಾಗ ದಿನಾಂಕ 21.೦1.2004 ನೇ ಸಾಲಿನಲ್ಲಿ ಟೆಂಡರ್ ಅಂಗೀಕಾರವಾದ 12,೦೦೦ ಕೆ.ಜಿ. ಗಂಟೆಗೆ 37,33,320 ರೂ. ಮಾರಾಟವಾದ ದಾಖಲೆಯನ್ನು ನೀಡಿದರೂ ಇದು ತನಿಖಾ ವರದಿಯಲ್ಲಿ ಉಲ್ಲೇಖಿಸದೇ ತನಿಖೆಯಾಗಿರುತ್ತದೆ.
ಪ್ರಥಮ ವರ್ತಮಾನ ವರದಿ ಘನ ನ್ಯಾಯಾಲಯ ಬೆಳ್ತಂಗಡಿ ಪೋಲೀಸ್ ಠಾಣೆ ಧರ್ಮಸ್ಥಳ ಇಲ್ಲಿ ದಾಖಲಾಗಿರುವ ಅಪರಾಧ ಸ ೦೦15/2022 ರಂತೆ ಸುಮಾರು ೨೬,೦೬೦ ಕೆ.ಜಿ.ಗಂಟಾ ಮಣಿಗಳನ್ನು ಬಿಡ್ಡು ಮಾಡಿದ್ದು ಲೆಕ್ಕ ಪ್ರಕಾರ 12 ಸಾವಿರ ಕೆ.ಜಿ.ವ್ಯಾಪಾರ ಮಾಡಿರುವ ಲೆಕ್ಕ ಪತ್ರವಿರುವುದು ಕಂಡುಬರುತ್ತದೆ. ಆದರೆ 14,060 ಕೆ,ಜಿ. ಗಂಟಾ ಮಣಿಗಳ ಅವ್ಯವಹಾರ ನಡೆದಿರುವುದು ಕಂಡುಬರುತ್ತದೆ. ಇದರ ಮೌಲ್ಯ ರೂ. 44,69,೦೦೦ ಹಣ ಪಾವತಿಸಬೇಕಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ ಎಂದು ಪ್ರಥಮ ವರ್ತಮಾನ ವರದಿಯ ವಿವರದಲ್ಲಿದೆ.
ಆದುದರಿಂದ ಇಷ್ಟೊಂದು ದೊಡ್ಡ ಮಟ್ಟದ ಅವ್ಯವಹಾರ ಸಮಯದಲ್ಲಿ ಇದ್ದ ಸಮಿತಿಯ ಸದಸ್ಯರಾದ ಸುಬ್ರಹ್ಮಣ್ಯ ಶಬರಾಯ, ವಿಶ್ವನಾಥ ಕೊಲ್ಲಾಜೆ, ಸಿನಿ ಗುರು ದೇವನ್, ಪ್ರಶಾಂತ್ ರೈ, ಇವರುಗಳನ್ನು ಮರು ನೇಮಕ ಮಾಡಿದ್ದು ಭಕ್ತರ ನಂಬಿಕೆ ಮತ್ತು ಭಕ್ತಿಗೆ ಘಾಸಿಯಾಗಿದೆ ಎಂದರೂ ತಪ್ಪಾಗದು.
ಬೆಂಗಳೂರಿನಲ್ಲಿ ನಾವು ಮಾತನಾಡಿದಾಗ ಅಧಿಕಾರಿಗಳು ರಕ್ಷಿತ್ ಶಿವರಾಂ ಅವರಲ್ಲಿ ಮಾತನಾಡಿ ಎಂದು ಹೇಳುತ್ತಾರೆ. ಅವರೇ ನ್ಯಾಯ ಕೊಡಬೇಕು ಎಂದು ಈ ಸಂದರ್ಭ ತಿಳಿಸಿದರು.
ಪುರಂದರ ಕಡೀರ ಕೊಕ್ಕಡ ಅವರು ಮಾತನಾಡಿ, ಕಳೆದ ಪತ್ರಿಕಾಗೋಷ್ಠಿಯಲ್ಲಿ ನಾವು ಅವರನ್ನು ಗಂಟೆಕಳ್ಳರು ಎಂದು ಎಲ್ಲಿಯೂ ಹೇಳಿಲ್ಲ. ಆದರೆ ನಾವು ಆ ರೀತಿ ಹೇಳಿದ್ದೇವೆ ಎಂದು ಆರೋಪಿಸಿ, ಅವರು ಕಾನತ್ತೂರು ಮೊದಲಾದ ಕಡೆಗಳಲ್ಲಿ ಹೋಗಿ ಪ್ರಾರ್ಥನೆ ಮಾಡಿದ್ದಾರೆ. ನಾವು ಆ ಮಾತನನ್ನು ಎಲ್ಲಿಯೂ ಹೇಳಿಲ್ಲ ಎಂದು ಸ್ವಷ್ಟಪಡಿಸಿದರು.

Related posts

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ವತಿಯಿoದ ಡಾ. ಹೆಗ್ಗಡೆ ರವರಿಗೆ ಪಟ್ಟಾಭಿಷೇಕ ವಧ೯ಂತ್ಯುತ್ಸವ‌ ಅಭಿನಂದನೆ

Suddi Udaya

ರಾಜ್ಯಮಟ್ಟದ ಕರಾಟೆ ಸ್ಪರ್ಧೆ

Suddi Udaya

ಡಾ. ಹೆಗ್ಗಡೆಯವರ 57ನೇ ಪಟ್ಟಾಭೀಷೇಕ ವಧ೯ಂತ್ಯುತ್ಸವ‌ ಸುದ್ದಿ ಉದಯ ಪತ್ರಿಕೆ ವತಿಯಿಂದ ಗೌರವಾರ್ಪಣೆ

Suddi Udaya

ಉಜಿರೆ: ಶ್ರೀ ಧ.ಮಂ. ಪ.ಪೂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಉಜಿರೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘಗಳ ಸಹಯೋಗದಲ್ಲಿ ಸ್ವಚ್ಛತಾ ಅಭಿಯಾನದ ಬೀದಿ ನಾಟಕ

Suddi Udaya

ಬೆಳ್ತಂಗಡಿ 3 ಸ್ಟಾರ್ ವೈನ್ಸ್’ ಶಾಪ್ ಗೆ ಅಬಕಾರಿ ಇಲಾಖೆಯಿಂದ ಬೀಗ

Suddi Udaya

ಅರಸಿನಮಕ್ಕಿ ಗ್ರಾ.ಪಂ. ಪ್ರಥಮ ಸುತ್ತಿನ ಗ್ರಾಮಸಭೆ

Suddi Udaya
error: Content is protected !!