25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಉಜಿರೆ ನಿನ್ನಿಕಲ್ಲು ಬಳಿ 30ಕೆ.ವಿ ವಿದ್ಯುತ್ ಘಟಕ ಸ್ಥಾಪನೆಯ ಬಗ್ಗೆ ವಿಧಾನ ಪರಿಷತ್ ಅಧಿವೇಶನಲ್ಲಿ ಪ್ರಶ್ನಿಸಿದ ವಿ.ಪ. ಸದಸ್ಯ ಪ್ರತಾಪ್ ಸಿಂಹ ನಾಯಕ್

ಬೆಳ್ತಂಗಡಿ : ಉಜಿರೆ ನಿನ್ನಿಕಲ್ಲು ಬಳಿ 30ಕೆ.ವಿ ವಿದ್ಯುತ್ ಘಟಕ ಕೇಂದ್ರ ಸ್ಥಾಪನೆಯ ಬಗ್ಗೆ ರಾಜ್ಯ ವಿಧಾನ ಮಂಡಲದ ಅಧಿವೇಶನಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ರವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಇಂಧನ ಸಚಿವ ಕೆ ಜೆ.ಜಾರ್ಜ್ ರವರು ಉಜಿರೆ ಗ್ರಾಮದ ನಿನ್ನಿಕಲ್ಲು ಬಳಿ 33/11ಕೆವಿ ಸಾಮರ್ಥ್ಯದ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪಿಸಲಾಗುವುದು, ಹಾಗೂ ಉಜಿರೆ ಗ್ರಾಮದ ಸರ್ವೆ ನಂ:393/3 ರಲ್ಲಿ 0.96 ಎಕರೆ ಸರಕಾರಿ ಜಮೀನಿಗೆ ಮಂಜೂರಾತಿ ದೊರೆತಿದ್ದು, ಜಮೀನು ಹಸ್ತಾಂತರ ಪ್ರಕ್ರಿಯೆ ಪ್ರಗತಿಯಲ್ಲಿದೆ.

ಟೆಂಡ‌ರ್ ನಿಬಂಧನೆಯಂತೆ ಸದರಿ ಕಾಮಗಾರಿಯನ್ನು ಕೆಲಸದ ವಿವರ ನೀಡಿದ ದಿನದಿಂದ 12 ತಿಂಗಳೊಳಗೆ ಪೂರ್ಣಗೊಳಿಸಲು ಕಾಲಮಿತಿಯನ್ನು ನಿಗದಿಪಡಿಸಲಾಗುವುದು ಎಂದರು.

Related posts

ನಂದಿನಿ ಹಾಲಿನ ದರ 4 ರೂ. ಏರಿಕೆ

Suddi Udaya

ಅರಸಿನಮಕ್ಕಿ: ಶೌರ್ಯ ವಿಪತ್ತು ಘಟಕದ ಸದಸ್ಯರಿಂದ ವಾತ್ಸಲ್ಯ ಮನೆ ನಿರ್ಮಾಣದ ಶ್ರಮದಾನ

Suddi Udaya

ಪಟ್ರಮೆ: ಸಂಕೇಶ ಮನೆ ನಿವಾಸಿ ಸುದೇಶ್ ನಿಧನ

Suddi Udaya

ಕಾಶಿಪಟ್ಣ: ನಾರಾವಿ ಸಂತ ಅಂತೋನಿ ಕಾಲೇಜಿನ ಎನ್ನೆಸ್ಸೆಸ್ ಶಿಬಿರದ ಉದ್ಘಾಟನೆ

Suddi Udaya

ನಾರಾವಿ: ಮಧುವನ ಕಾಂಪ್ಲೆಕ್ಸ್ ನಲ್ಲಿ ವಕ್ರಾಂಗಿ ಯುಪಿಐ ಮಿನಿ ಎಟಿಎಂ ಕೇಂದ್ರ ಶುಭಾರಂಭ

Suddi Udaya

ನಾವೂರು ವ್ಯಾಪ್ತಿಯಲ್ಲಿ 20 ಕ್ಕೂ ಮಿಕ್ಕಿ ವಿದ್ಯುತ್ ಕಂಬಗಳು ಧರಾಶಾಹಿ

Suddi Udaya
error: Content is protected !!