September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನಿಡಿಗಲ್ ಹೊಸ ಸೇತುವೆ ಬಳಿ ಕಸ ಹಾಕಿದವರಿಂದಲೇ ಕಸ ವಿಲೇವಾರಿ ಮಾಡಿಸಿ ದಂಡ ವಿಧಿಸಿದ ಮುಂಡಾಜೆ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಗಾಯತ್ರಿ ಪಿ ಅವರ ಕೆಲಸಕ್ಕೆ ಸಾರ್ವಜನಿಕರಿಂದ ಶ್ಲಾಘನೆ

ಮುಂಡಾಜೆ:ಕಳೆದ ವಾರವಷ್ಟೇ ನಿಡಿಗಲ್ ಹಳೇ ಸೇತುವೆ ಬಳಿ ಕಸ ಹಾಕಿದವರಿಂದಲೇ ಕಸ ವಿಲೇವಾರಿ ಮಾಡಿಸಿ ರೂ‌.2000 ದಂಡ ವಿಧಿಸಿದ ಘಟನೆ ಮುಂಡಾಜೆ ಗ್ರಾಮ ಪಂಚಾಯತ್ ನಲ್ಲಿ ನಡೆದಿದ್ದು ಅಂಥದ್ದೇ ಘಟನೆ ಮತ್ತೆ ಮರುಕಳಿಸಿದೆ.

ಮಾ.11 ರಂದು ಬೆಳಗ್ಗಿನ ಹೊತ್ತು ನಿಡಿಗಲ್ ಹೊಸ ಸೇತುವೆಯ ಬಳಿ ತ್ಯಾಜ್ಯ ಕಂಡುಬಂದಿದ್ದು ಯಾರೋ ನದಿಯನ್ನು ಗುರಿಯಾಗಿಸಿ ಎಸೆದ ತ್ಯಾಜ್ಯವು ಸೇತುವೆಯ ಮೇಲೆ ಬಿದ್ದಿರುತ್ತದೆ. ಕೂಡಲೇ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ತಿಳಿಸಿದ್ದು, ಸ್ಥಳಕ್ಕೆ ಆಗಮಿಸಿದ ಅವರು ಕಸದ ಚೀಲವನ್ನು ತೆರೆದು ಪರಿಶೀಲಿಸಿದಾಗ ಅದರಲ್ಲಿ ಕೆಲವು ದಾಖಲೆಗಳು ಸಿಕ್ಕಿದ್ದು ಅದು ಉಜಿರೆಯ ವ್ಯಕ್ತಿಗಳದ್ದೆಂದು ತಿಳಿದು ಬಂದಿದೆ.

ಕೂಡಲೇ ಅವರನ್ನು ದೂರವಾಣಿ ಮೂಲಕ ಸ್ಥಳಕ್ಕೆ ಕರೆಸಿ ಅವರಿಂದಲೇ ಕಸ ವಿಲೇವಾರಿ ಮಾಡಿಸಿ ರೂ. 1000 ದಂಡ ವಿಧಿಸಿ ಎಚ್ಚರಿಕೆ ನೀಡಿದ ಮುಂಡಾಜೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಾಯತ್ರಿ ಪಿ ಅವರ ಕೆಲಸಕ್ಕೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದರು.

Related posts

ಕಡಿರುದ್ಯಾವರ: ಎರ್ಮಾಲ್ ಪಲ್ಕೆಯಲ್ಲಿ ನೆಟ್ವರ್ಕ್ ಸಮಸ್ಯೆಯಿಂದ ಸಂಕಷ್ಟಕ್ಕೆ ಒಳಗಾದ ಜನಸಾಮಾನ್ಯರು

Suddi Udaya

ಜಿನಭಜನಾ ಸ್ಪರ್ಧೆ :ಮಂಗಳೂರು ವಲಯ ಮಟ್ಟದಲ್ಲಿ ಅಳದಂಗಡಿ ತಂಡ ತೃತೀಯ ಸ್ಥಾನ

Suddi Udaya

ಗುರಿಪಳ್ಳ ಸ.ಉ.ಹಿ.ಪ್ರಾ. ಶಾಲೆಯಲ್ಲಿ ಗಿಡನಾಟಿ, ಹಾಗೂ ಮಾಹಿತಿ ಕಾರ್ಯಕ್ರಮ

Suddi Udaya

ಸವಣಾಲು: ಪಲ್ಗುಣಿ ಮಹಿಳಾ ಮಂಡಲದ ವತಿಯಿಂದ ಮಕ್ಕಳ ಕುಣಿತ ಭಜನಾ ತರಬೇತಿ ಉದ್ಘಾಟನೆ

Suddi Udaya

ಮುಂಡಾಜೆ ಸಹಕಾರ ಸಂಘದ ಚಾರ್ಮಾಡಿ ಪೂರ್ಣಾವಧಿ ಶಾಖೆಯ ಉದ್ಘಾಟನೆ ಸಮಾರಂಭ

Suddi Udaya

ನೈಮಿಷರವರ ಕೋಕೋ ಡ್ಯೂ ಶುದ್ದ ಗಾಣದ ಕೊಬ್ಬರಿ ಎಣ್ಣೆ ಬಿಡುಗಡೆ

Suddi Udaya
error: Content is protected !!