ಸುಲ್ಕೇರಿ : ಶ್ರೀ ಮಹಿಷಮರ್ದಿನಿ ಭಜನಾ ಮಂಡಳಿ ಸುಲ್ಕೇರಿಮೊಗ್ರು ಇದರ ನೂತನ ಪದಾಧಿಕಾರಿಗಳ ಆಯ್ಕೆಯು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಸಭಾಂಗಣದಲ್ಲಿ ಮಂಡಳಿಯ ನಿಕಟಪೂರ್ವ ಅಧ್ಯಕ್ಷ ಸದಾನಂದ ಪಿಲತ್ತಡಿ ಇವರ ಅಧ್ಯಕ್ಷತೆಯಲ್ಲಿ ಜರಗಿತು.
ಹಿಂದಿನ ಎರಡು ವರ್ಷದ ಅವಧಿಯಲ್ಲಿ ಮಾಡಿದ ಸಾಧನೆಗಳ ವರದಿಯನ್ನು ಕಾರ್ಯದರ್ಶಿ ದಯಾನಂದ ಕಂಬಲದಡ್ಡ ವಾಚಿಸಿದರು. ಗೌರವ್ಯಾಧ್ಯಕ್ಷರಾಗಿ ಕಿರಣ್ ಕುಮಾರ್ ಪುನರಾಯ್ಕೆಯಾಗುವುದರೊಂದಿಗೆ, ನೂತನ ಅಧ್ಯಕ್ಷರಾಗಿ ನಂದನ್ ಕುಮಾರ್, ಕಾರ್ಯದರ್ಶಿಯಾಗಿ ಗೇತನ್ ಮಡಿವಾಳ, ಉಪಾಧ್ಯಕ್ಷರಾಗಿ ರಂಜಿತ್, ಜೊತೆ ಕಾರ್ಯದರ್ಶಿಯಾಗಿ ದಯಾನಂದ ಕಂಬಳದಡ್ಡ, ಕೋಶಾಧಿಕಾರಿಯಾಗಿ ಶ್ರೇಯಸ್ ಕೋಟ್ನೊಟ್ಟು, ಸಂಘಟನಾ ಕಾರ್ಯದರ್ಶಿಯಾಗಿ ಆನಂದ ಮುಂಡಲದಡ್ಡ,
ಗೌರವ ಸಲಹೆಗಾರರಾಗಿ ರವಿ ಸಾಲಿಯಾನ್, ಚಂದಯ್ಯ ಮಡಿವಾಳ, ಜಗದೀಶ್ ಗೋಳಿತ್ಯಾರು, ಯೋಗೇಶ್ ಮುಂಗಾಜೆ ಆಯ್ಕೆಯಾದರು.
ನಂದನ್ ಕುಮಾರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.