September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕವರದಿ

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ 108 ಕಾಯಿ ಗಣಹೋಮ: ರಾತ್ರಿ ಮೂಡಪ್ಪ ಸೇವೆ

ಕೊಕ್ಕಡ: ಬಯಲು ಆಲಯ ಖ್ಯಾತಿಯ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದ ಶ್ರೀ ದೇವರ ಸನ್ನಿಧಿಯಲ್ಲಿ ಪ್ರತಿ ವರ್ಷದಂತೆ ಬ್ರಹ್ಮಶ್ರೀ ವೇದಮೂರ್ತಿ ಕೆಮ್ಮಿಂಜೆ ನಾಗೇಶ ತಂತ್ರಿಗಳವರ ನೇತೃತ್ವದಲ್ಲಿ ಇಂದು ಬೆಳಿಗ್ಗೆ 108 ತೆಂಗಿನಕಾಯಿ ಗಣಹೋಮ ನಡೆಯಿತು.

ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಪೃಥ್ವಿ ಸಾನಿಕಂ, ಕಾರ್ಯನಿರ್ವಹಣಾಧಿಕಾರಿ ಕೆ.ವಿ ಶ್ರೀನಿವಾಸ , ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪ್ರಶಾಂತ್ ಪಕ್ಕಳ, ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ ಹರೀಶ್ ರಾವ್ ಮುಂಡ್ರುಪ್ಪಾಡಿ, ಸಮಿತಿಯ ಮಾಜಿ ಸದಸ್ಯರು, ಅರ್ಚಕ ವೃಂದ ಹಾಗೂ ಸಿಬ್ಬಂದಿ ವರ್ಗದವರು, ಭಕ್ತಾದಿಗಳು ಉಪಸ್ಥಿತರಿದ್ದರು.

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಇಂದು ರಾತ್ರಿ 9 ಕ್ಕೆ ಮೂಡಪ್ಪ ಸೇವೆ ನಡೆಯಲಿದೆ.

ಬೆಳಿಗ್ಗೆನಿಂದ ಸಂಜೆ 5ರ ವರೆಗೆ ವಿವಿಧ ಭಜನಾ ತಂಡಗಳಿಂದ ಉಪ್ಪಿನಂಗಡಿಯ ವಾಮನ ನಾಯಕ್ ನೇತೃತ್ವದಲ್ಲಿ ಭಜನಾ ಸೇವೆ, ಸಂಜೆ 5.30ರಿಂದ ಶ್ರೀ ಕ್ಷೇತ್ರ ಸೌತಡ್ಕದ ಪುಟಾಣಿ ವಿದ್ಯಾರ್ಥಿಗಳಿಂದ “ಚಿಣ್ಣರ ಚಿಲಿಪಿಲಿ”, ಸಂಜೆ 6.30ರಿಂದ ಪುತ್ತೂರು ಶ್ರೀ ಮೂಕಾಂಬಿಕಾ ಕಲ್ಬರಲ್ ಅಕಾಡೆಮಿಯ ಕೊಕ್ಕಡ ಶಾಖೆಯ ವಿದ್ಯಾರ್ಥಿಗಳಿಂದ ವಿದ್ವಾನ್ ದೀಪಕ್ ಕುಮಾರ್, ವಿದುಷಿ ಪ್ರೀತಿ ಕಲಾ ಮತ್ತು ವಿದ್ವಾನ್ ಗಿರೀಶ್ ಕುಮಾರ್ ನಿರ್ದೇಶನದಲ್ಲಿ “ನೃತ್ಯಾಂಜಲಿ “, ರಾತ್ರಿ 8ರಿಂದ ಝೀ ಕನ್ನಡ ವಾಹಿನಿಯ ದ.ಕ.ಜಿಲ್ಲೆಯ ಬಿ.ಸಿ ರೋಡಿನ ನೃತ್ಯ ತಂಡದ ತುಳು ಚಲನಚಿತ್ರ ನಿರ್ದೇಶಕ ವಿನೋದ್ ರಾಜ್ ನೇತೃತ್ವದ “ಎಕ್ಸ್ಟೀಮ್ ಡ್ಯಾನ್ಸ್ ಕ್ರೂ” ತಂಡದಿಂದ “ಡಾನ್ಸ್ ಕರ್ನಾಟಕ ಡಾನ್ಸ್‌ ” ನೃತ್ಯ-ಗಾನ -ಸಂಭ್ರಮ ನಡೆಯಲಿದೆ.

Related posts

ಇಂದು (ಸೆ.25): ಬೆಳ್ತಂಗಡಿಯಲ್ಲಿ ಅರಿಹಂತ್ ಜೈನ್ ಮಾಲೀಕತ್ವದ ಅಯಾನ್ಶ್ ಮೊಬೈಲ್ ಮಳಿಗೆ ನವೀಕರಣಗೊಂಡು ಶುಭಾರಂಭ

Suddi Udaya

ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ನೀಲೇಶ್ವರದ ತಂತ್ರಿವರ್ಯರಾದ ಉಚ್ಚಿಲ ಪದ್ಮನಾಭ ತಂತ್ರಿಗಳ ಭೇಟಿ

Suddi Udaya

ಆ.19: ಧರ್ಮಸ್ಥಳದಲ್ಲಿ ನೈತಿಕ ಮೌಲ್ಯಾಧಾರಿತ ಪುಸ್ತಕಗಳ ಲೋಕಾರ್ಪಣೆ, ರಾಜ್ಯಮಟ್ಟದ ಅಂಚೆ-ಕುಂಚ ಸ್ಪರ್ಧಾ ವಿಜೇತರಿಗೆ ಪುರಸ್ಕಾರ ಸಮಾರಂಭ

Suddi Udaya

ಧರ್ಮಸ್ಥಳದಲ್ಲಿ ಗೀತ ನೃತ್ಯಾಲಯ ವಾರ್ಷಿಕೋತ್ಸವ

Suddi Udaya

ಉಜಿರೆ: ಇಂಟರಾಕ್ಟ್ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

Suddi Udaya

ನಾವೂರು ರಿಕ್ಷಾ ನಿಲ್ದಾಣ ಎದುರು ಅಳವಡಿಸಿದ ಇಂಟರ್ ಲಾಕ್ ಹಾಳಾಗದಂತೆ ಅಡ್ಡವಾಗಿ ಇಟ್ಟ ಅಡಿಕೆ ಮರ: ತೆರವುಗೊಳಿಸುವಂತೆ ಸಾರ್ವಜನಿಕರ ಒತ್ತಾಯ

Suddi Udaya
error: Content is protected !!