March 14, 2025
Uncategorized

ಕೊಯ್ಯೂರು ಬಜಿಲ ಶಾಲಾ ಕಟ್ಟಡ ದುರಸ್ತಿಗಾಗಿ ಧರ್ಮಸ್ಥಳದಿಂದ 50 ಸಾವಿರ ದೇಣಿಗೆ

ಕೊಯ್ಯೂರು : ಕೊಯ್ಯೂರು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಕಟ್ಟಡದ ದುರಸ್ತಿ ಗಾಗಿ 50 ಸಾವಿರ ದೇಣಿಗೆಯನ್ನು ಮಾ.12 ರಂದು
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್ ಬೆಳ್ತಂಗಡಿ ವತಿಯಿಂದ ವಲಯ ಯೋಜನಾಧಿಕಾರಿ ಸುರೇಂದ್ರ ಕುಮಾರ್ ಅವರು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೊಯ್ಯೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಹರೀಶ್ ಗೌಡರಿಗೆ ಹಸ್ತಾಂತರ ಮಾಡಿದರು.
ಯೋಜನಾ ಕೃಷಿ ಅಧಿಕಾರಿ ರಾಮ್ ಕುಮಾರ್, ಕೊಯ್ಯೂರು ಪ್ರಗತಿಬಂಧು ಒಕ್ಕೂಟದ ಅಧ್ಯಕ್ಷ ಲಿಂಗಪ್ಪ ಗೌಡ ಬೆರ್ಕೆ,ಉಪಾಧ್ಯಕ್ಷ ರಾಮಣ್ಣ ಗೌಡ, ಕೊಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಂಘದ ನಿರ್ದೇಶಕ ದಾಮೋಧರ ಗೌಡ ಬೆರ್ಕೆ,ಶಾಲಾ ಪೋಷಕಪಾದ ಶಿವಪ್ಪ ಗೌಡ, ಓಬಯ್ಯ ಪೂಜಾರಿ ಉಪಸ್ಥಿತರಿದ್ದರು.
ಶಾಲಾ ಮೇಲುಸ್ತುವಾರಿ ಸಮಿತಿ ಮಾಜಿ ಅಧ್ಯಕ್ಷ ಜಾರಪ್ಪ ಗೌಡ ಬೇರ್ಕೆ,ಮುಖ್ಯ ಶಿಕ್ಷಕಿ ಜಯಶ್ರೀ, ಸಹ ಶಿಕ್ಷಕರಾದ ಸೌಮ್ಯ, ದೀಪಿಕಾ ಟಿ,ಸೇವಾ ಪ್ರತಿ‍ ಕುಸುಮಾವತಿ,ಮೇಲುಸ್ತುವಾರಿ ಸಮಿತಿ ಸದಸ್ಯರು, ಮಕ್ಕಳ ಪೋಷಕರು ಮತ್ತಿತರ ರಿದ್ದರು.

Related posts

ಮುಂಡೂರು ಶ್ರೀ ನಾಗಕಲ್ಲುರ್ಟಿ ದೈವಸ್ಥಾನ, ಶ್ರೀ ನಾಗಂಬಿಕಾ ದೇವಸ್ಥಾನ ಶ್ರೀ ಕ್ಷೇತ್ರ ಮಂಗಳಗಿರಿ, ವತಿಯಿಂದ 10ನೇ ವರ್ಷದ ಶ್ರೀ ಗಣೇಶೋತ್ಸವ

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ಪ್ರಕಾಶ್ ರವರಿಗೆ ಕೃತಕ ಕಾಲಿನ ವ್ಯವಸ್ಥೆ

Suddi Udaya

ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯದಲ್ಲಿ ಜೋಹಾನ್ಸ್ ಗುಟೆನ್‌ಬರ್ಗ್ ಯೂನಿವರ್ಸಿಟಿಯ ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳಿಗೆ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ತರಬೇತಿ

Suddi Udaya

ಗುರುವಾಯನಕೆರೆ ಎಕ್ಸೆಲ್ ವಿದ್ಯಾಸಂಸ್ಥೆಯಲ್ಲಿ ವಾಣಿಜ್ಯ ತರಗತಿಗಳ ಪ್ರಾರಂಭೋತ್ಸವ ಕಾರ್ಯಕ್ರಮ

Suddi Udaya

ಭಾರಿ ಗಾಳಿ ಮಳೆ: ಮುಂಡ್ರುಪ್ಪಾಡಿ ಶಾಲೆತಡ್ಕ ರಾಮಣ್ಣ ಗೌಡರವರ ಮನೆ ಹಾಗೂ ಕೊಟ್ಟಿಗೆಗೆ ಹಾನಿ

Suddi Udaya

ಬೆಳ್ತಂಗಡಿ ವಿಷ್ಣು ಸೇಲ್ಸ್ ನಲ್ಲಿ ದೀಪಾವಳಿ ಪ್ರಯುಕ್ತ ವಿಶೇಷ ಮಾರಾಟ

Suddi Udaya
error: Content is protected !!
ಸುದ್ದಿ ಉದಯ ವಾಟ್ಸಪ್‌ ಗ್ರೂಪ್‌ಗೆ ಸೇರಿ