
ಶಿಶಿಲ: ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲದ ಭಗವಾನ್ ೧೦೦೮ ಶ್ರೀ ಚಂದ್ರನಾಥ ಸ್ವಾಮಿ ಜಿನಮಂದಿರದಲ್ಲಿ ಪರಮ ಪೂಜ್ಯ ಸ್ವಸ್ತಿಶ್ರೀ ಸೌರಭಸೇನಾ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾ ಸ್ವಾಮೀಜಿ ಸಂಸ್ಥಾನ ಮಠ ತಿಜಾರ ರಾಜಸ್ಥಾನ ಇವರ ಪಾವನ ಸಾನಿಧ್ಯ ಹಾಗೂ ಮಾರ್ಗ ದರ್ಶನದೊಂದಿಗೆ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಮಾತ್ರಶ್ರೀ ಹೇಮಾವತಿ ವಿ. ಹೆಗ್ಗಡೆ ಯವರ ಮಾರ್ಗದರ್ಶನ ದೊಂದಿಗೆ ಊರ ಪರವೂರ ಸಹದಯಿ ಧರ್ಮಾಭಿಮಾನಿ ಸರ್ಮ ಬಂಧುಗಳ ಸಹಕಾರದೊಂದಿಗೆ ಮಾ.೧೧ ರಂದು ವಿಜೃಂಭಣೆಯಿಂದ ವಾರ್ಷಿಕೋತ್ಸವ ಹಾಗೂ ಶಾಂತಿ ಚಕ್ರ ಆರಾಧನೆ, ಪದ್ಮಾವತಿ ಅಮ್ಮನವರ ಆರಾಧನ, ಲಕ್ಷ ಹೂವಿನ ಪೂಜೆ, ೨೪ ಕಲಶಾಭಿಷೇಕ ಉತ್ಸವ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಪ್ರತಿಷ್ಠಾ ಪುರೋಹಿತರಾದ ಜಯರಾಜ್ ಇಂದ್ರ ಮತ್ತು ಅರಹಂತ ಇಂದ್ರ ಹಾಗೂ ತಂಡದವರಿಂದ ಜರುಗಿತು.

ಈ ಸಂದರ್ಭದಲ್ಲಿ ವಿಶೇಷ ಸಾಧನೆ ಮಾಡಿದ ಆಡಳಿತ ಮಂಡಳಿ ಸದಸ್ಯರಾದ ಎಚ್. ವಿಜಯ ಕುಮಾರ್, ಶ್ರೀಮತಿ ಮನೋರಮಾ, ಶ್ರೀಮತಿ ವಿಮಲ, ಅಜಿತ್ ಕುಮಾರ್, ಶ್ರೀಮತಿ ಶೋಭಾ, ಶ್ರೀಮತಿ ಚಂದನಾ, ಸುಮಂತ್ ಜೈನ್ ಮುಂತಾದವರನ್ನು ಸ್ವಾಮೀಜಿಯವರು ಅಭಿನಂದಿಸಿ ಆಶಿರ್ವದಿಸಿದರು. ಸ್ವಾಮೀಜಿಯವರು ಮಾತನಾಡುತ್ತಾ ಶ್ರೀ ಕ್ಷೇತ್ರ ಚಂದ್ರಪುರವು ಅತೀ ಪ್ರಾಚೀನವಾದ ಕ್ಷೇತ್ರವಾಗಿದ್ದು ಈ ಕ್ಷೇತ್ರವು ಅತಿಶಯವಾಗಿರುತ್ತದೆ. ಈ ಕ್ಷೇತ್ರ ದರ್ಶನ ಮಾಡಿದವರ ಪಾಪವು ನಾಶವಾಗಿ ಪುಣ್ಯ ಪ್ರಾಪ್ತಿಯಾಗುತ್ತದೆ. ಕ್ಷೇತ್ರದಲ್ಲಿ ನಿರಂತರವಾಗಿ ಆರಾಧನೆಗಳು, ಪೂಜೆಗಳು ನಡೆದು ಲೋಕ ಕಲ್ಯಾಣವಾಗಲಿ. ಈ ಕ್ಷೇತ್ರಕ್ಕೆ ಇನ್ನೊಮ್ಮೆ ಭೇಟಿ ನೀಡಿ ಈ ಕ್ಷೇತ್ರದಲ್ಲಿ ಎರಡು ದಿನ ಇದ್ದು ಧಾರ್ಮಿಕ ಕಾರ್ಯಕ್ರಮ ನಡೆಸುವುದಾಗಿ ಆಶೀರ್ವಚನ ನೀಡಿದರು. ಸಮಿತಿಯ ಸಂಚಾಲಕರಾದ ಡಾ. ಕೆ. ಜಯಕೀರ್ತಿ ಜೈನ್ ಕಾರ್ಯಕ್ರಮ ನಿರ್ವಹಿಸಿದರು.