
ಬೆಳ್ತಂಗಡಿ: ಬಿಸಿಲ ಬೇಗೆಯಿಂದ ತತ್ತರಿಸಿ ಹೋಗಿ ಬಸವಳಿದಿದ್ದ ಬೆಳ್ತಂಗಡಿ ತಾಲೂಕಿನ ಮಂದಿಗೆ ವರುಣ ಬಂದು ತಂಪೆರೆದಿದ್ದ ಈ ವರ್ಷದ ಮೊದಲ ಮಳೆ ಸುರಿದಿದೆ. ತಾಲೂಕಿನ ಹಲವೆಡೆ ದಿಢೀರ್ ಮಳೆಯಾಗಿದ್ದು, ಜನ ಝಳ ಝಳ ಬಿಸಿಲಿನಿಂದ ಚುಮು ಚುಮು ಚಳಿಯ ಆನಂದ ಕ್ಷಣಗಳ ಕಂಡು ಬಂತು. ಮಾ.11 ರಂದು 41 ಡಿಗ್ರಿ:ಸಿ ತಾಪಮಾನವಿದ್ದು ಜನತೆ ಬಿಸಿಲ ಝಳಕ್ಕೆ ಬೆಂದು ಬಸವಳಿದಿದ್ದರು, ಮಾ.12 ರಂದು ಬಿಸಿಲ ತಾಪ ಅಧಿಕವಾಗಿತ್ತು ಆದರೆ ಸಂಜೆ ವೇಳೆ ವರುಣ ಕೃಪೆಯಿಂದ ಬಿಸಿಲ ಕಾವಿಗೆ ಬೆಂದಿದ್ದ ಇಳೆ, ಜನತೆಗೆ ಮಳೆಯ ಸಿಂಚನದಿಂದ ತಂಪೆರೆದಿದೆ. ಮಾ.12ರಂದು ಮೋಡ ಕವಿದ ವಾತವಾರಣ ತಾಲೂಕಿನ ನಾನಾ ಕಡೆಗಳಲ್ಲಿತ್ತು. ಜನರ ಮಳೆಯ ನೀರಿಕ್ಷೆಯನ್ನು ಆಪೇಕ್ಷಿಸುತ್ತಿದ್ದ ಘಟನೆಗಳು ಕಂಡು ಬಂತು.

ಬಿಸಿಲ ಕಾವು ಕೃಷಿ ಭೂಮಿಗೂ ವ್ಯಾಪಿಸಿ ಬಿಸಿಮುಟ್ಟಿಸಿತ್ತು. ಕೃಷಿಕ ಮೊದಲೇ ಲೋ ವಾಲ್ಟೆಜ್ ಬಾದೆಯಿಂದ ಕಂಗೆಟ್ಟು ಹೋಗಿದ್ದು ಇದರ ನಡುವೆ ಬಿಸಿಲ ಪ್ರತಪಕ್ಕೆ ಬೇಸತ್ತು ಹೋಗಿದ್ದರು. ವರುಣ ಆಗಮನದಿಂದ ಧರೆ ತಂಪೆರದ್ದಂತಾಗಿದೆ.
ಶಿಶಿಲ, ಶಿಬಾಜೆ, ಅರಸಿನಮಕ್ಕಿ, ರೆಖ್ಯಾ, ಕಳೆಂಜ, ನೆರಿಯ, ಉಜಿರೆ ಗಡುಗು ಸಹಿತ ಗಾಳಿ ಮಳೆ ಸುರಿದಿದೆ. ಕೊಕ್ಕಡ ಸಹಿತ ವಿವಿಧೆಡೆ ತುಂತುರು ಮಳೆಯಾಗಿದೆ. ಧರ್ಮಸ್ಥಳ ಭಾಗದಲ್ಲಿ ಅಲಿಕಲ್ಲು ಮಳೆಯಾಗಿದೆ. ಬೆಳ್ತಂಗಡಿ ಭಾಗದಲ್ಲಿ ಸಂಜೆ ಹೊತ್ತಿಗೆ ಗಾಳಿ ಸಹಿತ ಸಡಿಲುನೊಂದಿಗೆ ಮಳೆಯಾಗಿದೆ.