24.5 C
ಪುತ್ತೂರು, ಬೆಳ್ತಂಗಡಿ
March 15, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ಕಾಂಗ್ರೇಸ್ ಮಹಿಳಾ ಘಟಕದಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ

ಬೆಳ್ತಂಗಡಿ: ಎಲ್ಲಾ ಕ್ಷೇತ್ರದಲ್ಲೂ ಉತ್ಕೃಷ್ಟ ಮಟ್ಟದ ಶ್ರೇಷ್ಠ ಸಾಧನೆ ಮಾಡಿ ನಾವು ಅಬಲೆಯರಲ್ಲ ಸಬಲೆಯರು ಎಂದು ತೋರಿಸಿಕೊಟ್ಟವರು ನಮ್ಮ ದೇಶದ ಮಾತೆಯರು.ಸಮಾಜವನ್ನು ಪರಿವರ್ತನೆ ಮಾಡಬಲ್ಲ ದೊಡ್ಡ ಶಕ್ತಿ ಮಹಿಳೆಯರಿಗೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಹೇಳಿದರು.

ಅವರು ಮಾ.11ರಂದು ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದಲ್ಲಿ ನಡೆದ ಬೆಳ್ತಂಗಡಿ ಕಾಂಗ್ರೇಸ್ ಮಹಿಳಾ ಘಟಕದಿಂದ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜಗತ್ತಿನಲ್ಲಿ ಭಾರತ ಅತ್ಯಂತ ಮುಂದುವರಿದ ದೇಶ. ಮಹಾನ್ ಸಾಧನೆ ಮಾಡಿದ ಗಾಂಧೀಜಿ ಮತ್ತು ಅಂಬೇಡ್ಕರ್ ಅವರ ಸಾಧನೆಯ ಹಿಂದೆ ಕಸ್ತೂರಿ ಬಾಯಿ,ರಮಾಬಾಯಿ ಅವರ ಶ್ರಮವಿದೆ.ಮಾಜಿ ಪ್ರಧಾನಿ ಇಂದಿರಗಾಂಧಿ ಈ ನೆಲದ ದಿಟ್ಟ ಮಹಿಳೆ ಅವರ ಸಾಧನೆ ಮೆಚ್ಚುವಂತದ್ದು ಎಂದರು.

ಮಹಿಳೆಯರಿಗೆ ವಿವಿಧ ಕ್ಷೇತ್ರದಲ್ಲಿ ಮಿಸಲಾತಿ ಇದೆ.ಮಾತೆಯರ ಸಹಕಾರದಿಂದ ಕಾಂಗ್ರೇಸ್ ಪಕ್ಷ ಜೀವಂತವಾಗಿದೆ. ನಿಮ್ಮ ಯೌವ್ವನ, ಹಿರಿತನವನ್ನು ನೀಡಿದ್ದೀರಿ. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಪಕ್ಷವನ್ನು ಕಟ್ಟಿ ಬೆಳೆಸಿದ್ದೀರಿ.ನಿಮ್ಮ ಮನೆಯಲ್ಲಿ ಬೇಕಾದಷ್ಟು ಸಮಸ್ಯೆಯಿದ್ದರೂ ಇನ್ನೊಬ್ಬರ ಸಮಸ್ಯೆಗೆ ಸ್ಪಂದಿಸುವ ನಿಮ್ಮ‌ಗುಣ ಮೆಚ್ಚುವಂತದ್ದು. ತಾ.ಪಂ,ಜಿ.ಪಂ,ಗ್ರಾ.ಪಂ ಈ ಎಲ್ಲಾ ಚುನಾವಣೆಯಲ್ಲಿ ಮಹಿಳೆಯರು ಸಕ್ರೀಯರಾಗಬೇಕು ಎಂದರು.

ರಾಜಕೀಯ ಒಂದು ಸರ್ಕಸ್ ತರ, ಸಿಂಹ, ಮೊಲ,ಹಾವು,ನರಿ, ಕೋತಿ ಎಲ್ಲವೂ ಇದೆ. ಎಲ್ಲರನ್ನೂ ಒಂದೇ ರೀತಿ ಕಾಣುವುದರಿಂದ ಪಕ್ಷ ಗಟ್ಟಿ ಮಾಡಲು ಸಾಧ್ಯವಿದೆ.ಗ್ಯಾರಂಟಿ ಯೋಜ‌ನೆಯಿಂದ ಮಹಿಳೆಯರು ಆರ್ಥಿಕ ಸಬಲೀಕರಣ ಹೊಂದುತ್ತಿದ್ದಾರೆ.ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸಾಕಷ್ಟು ಪ್ರಮಾಣದಲ್ಲಿ ಮಹಿಳೆಯರು ಬಂದು ದೇವರ ದರ್ಶನ ಪಡೆಯುತ್ತಿದ್ದಾರೆ. ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಮಹಿಳೆಯರನ್ನು ಸೇರಿಸಲಾಗಿದೆ.ಮಹಿಳಾ ಅಭಿವೃದ್ಧಿ ನಿಗಮದಲ್ಲಿ ಸಾಕಷ್ಟು ಕಾರ್ಯಕ್ರಮಗಳಿದ್ದು ಅದರ ಸದುಪಯೋಗ ಪಡಿಸಿಕೊಳ್ಲಬೇಕು. ಮಹಿಳೆಯರು ಕಡ್ಡಾಯವಾಗಿ ಡ್ರೈವಿಂಗ್ ಕಲಿಯಬೇಕು ಎಂದರು.

ಕಾರ್ಯಕರ್ತರ ಮನೆಯಲ್ಲಿ ಸಮಸ್ಯೆ ಆದಾಗ ಅವರಿಗೆ ಸಹಾಯ ಮಾಡುವಂತೆ ನಾವು ತಿಂಗಳಿ ಆರ್ಥಿಕ ಕ್ರೋಡಿಕರಣ ತಂಡ ರಚಿಸುವ ಅನಿವಾರ್ಯತೆ ಇದೆ.ಮಹಿಳಾ ಒಕ್ಕೂಟದ ಮೂಲಕ ಉದ್ಯೋಗ ಸೃಷ್ಟಿ ಇಲ್ಲಿ ಆಗುತ್ತಿಲ್ಲ. ಬಿದಿರಿನ ಬೆತ್ತದಲ್ಲಿ ಸಾಕಷ್ಟು ಕರಕುಶಲತೆ ಮಾಡಬಹುದು, ಇದಕ್ಕೆ ಸರಿಯಾದ ಮಾರುಕಟ್ಟೆ ನಿರ್ಮಾಣವಾಗುತ್ತಿಲ್ಲ.ನಮ್ಮ ಈ ನೆಲದಲ್ಲಿ ಸಾಕಷ್ಟು ಮಹಿಳಾ ಸಾಧಕರಿದ್ದಾರೆ.ಅವರು ನಮಗೆಲ್ಲ ಪ್ರೇರಣೆಯಾಗಬೇಕು ಎಂದರು.

ಬಜ್ಪೆ ಆಪ್ತ ಸಮಾಲೋಚಕಿ ವನಿತಾ ಭಂಡಾರಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಹಿಳೆಯರು ಮನೆ ನಿರ್ವಹಣೆಯಿಂದ ಹಿಡಿದು ಎಲ್ಲಾ ಸ್ತರದಲ್ಲಿಯೂ ಸಾಧನೆ ಮಾಡಿದ ಉದಾಹರಣೆ ನಮ್ಮ ಮುಂದಿದೆ.ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಸ್ವಾವಲಂಬಿ ಜೀವನ ನಡೆಸಬೇಕು ಎಂದರು.

ವೇದಿಕೆಯಲ್ಲಿ ಬೆಳ್ತಂಗಡಿ ಪೃಥ್ವಿ ಜ್ಯುಲೆಲ್ಸ್ ವ್ಯವಸ್ಥಾಪಕ ಅಶೋಕ್ ಬಂಗೇರ, ಬೆಳ್ತಂಗಡಿ ಮಹಿಳಾ ಕಾಂಗ್ರೇಸ್ ಘಟಕದ ಅಧ್ಯಕ್ಷೆ ವಂದನಾ ಭಂಢಾರಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕಾಂಗ್ರೇಸ್ ಪಕ್ಷದ ಮಹಿಳಾ ಘಟಕದ ಮುಖಂಡರಾದ ಉಷಾ ಶರತ್ ಬಾರ್ಯ,ಜೇಸಿಂತಾ ಮೋ‌ನಿಸ್ ಮೇಲಂತಬೆಟ್ಟು, ಲೋಕೇಶ್ವರಿ ವಿನಯಚಂದ್ರ ವಳಂಬ್ರ,ತನುಜಾ ಶೇಖರ್ ನಾವೂರು,ಕೇಶವತಿ ತಣ್ಣೀರುಪಂಥ,ಸುಚಿತ್ರಾ ಕೊಳ್ಳಾಜೆ,ವಸಂತಿ ಕುದ್ಯಾಡಿ,ಯಶೋಧ ಕುತ್ಲೂರು,ಸಲೆಸ್ಟಿನ್ ಮಡಂತ್ಯಾರು,ಹಾಜಿರ ಬೆಳ್ತಂಗಡಿ, ಸೌಮ್ಯ ಲಾಯಿಲ,ಸುಮತಿ ಪ್ರಮೋದ್ ನೂಜೋಡಿ,ಮರಿಟಾ ಪಿಂಟೋ,ಸುಮತಿ ಶೆಟ್ಟಿ,ಸುಶೀಲ ಬರಾಯ,ಗುಣವತಿ ಕುಕ್ಕೇಡಿ,ಜಯಶೀಲಾ ಕುಶಾಲಪ್ಪ ಗೌಡ ಶಿರ್ಲಾಲು ಹಾಗೂ ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಗೌರವಾರ್ಪಣೆ:ಸಮಾರಂಭದಲ್ಲಿ ಕಾಂಗ್ರೇಸ್ ಪಕ್ಷದಲ್ಲಿ ಸಾಧನೆ ಮಾಡಿದ ಸಾಧಕರನ್ನು,ಸಮಿತಿಯ ನಾಮನಿರ್ದೇಶನ ಸದಸ್ಯರನ್ನು,ದೇಗುಲದ ವ್ಯವಸ್ಥಾಪನಾ ಸಮಿತಿ ಸದಸ್ಯರನ್ನು ಫಲಪುಷ್ಪ ನೀಡಿ,ಹಾರ ಹಾಕಿ,ಶಾಲು ಹೊದಿಸಿ ಗೌರವಿಸಲಾಯಿತು.

Related posts

ಬೆಳ್ತಂಗಡಿ: ವಾಣಿ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ

Suddi Udaya

ನ್ಯಾಯತರ್ಪು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ವಿಜಯ ಗೌಡ ಕಲಾಯಿತೊಟ್ಟು ಆಯ್ಕೆ

Suddi Udaya

ಮಾ.18: ಉಜಿರೆಗೆ ನಂದಿ ರಥಯಾತ್ರೆ

Suddi Udaya

ಧರ್ಮಸ್ಥಳದಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಂದ “ನೆನಪುಗಳ ನೇವರಿಕೆ” ಪುಸ್ತಕ ಬಿಡುಗಡೆ

Suddi Udaya

ತಾಲೂಕು ವಿಕಲಚೇತನರ ಪುನರ್ವಸತಿ ಕಾರ್ಯಕರ್ತರ ಪ್ರಗತಿ ಪರಿಶೀಲನಾ ಸಭೆ

Suddi Udaya

ಧರ್ಮಸ್ಥಳ: ಶ್ರೀ ಮಂ.ಅ. ಪ್ರೌಢಶಾಲೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಅಭಿಯಾನ ಹಾಗೂ ಕನಕದಾಸ ಜಯಂತಿ ಕಾರ್ಯಕ್ರಮ

Suddi Udaya
error: Content is protected !!