March 14, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಮಾ.15-19: ಕೊಯ್ಯೂರು ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನ ಪ್ರತಿಷ್ಠಾ ವರ್ಧಂತಿ ಮತ್ತು ವರ್ಷಾವಧಿ ಜಾತ್ರೆ

ಕೊಯ್ಯೂರು: ಇಲ್ಲಿಯ ಇತಿಹಾಸಪ್ರಸಿದ್ದ ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನದ ಪ್ರತಿಷ್ಠಾ ವರ್ಧಂತಿ ಮತ್ತು ವರ್ಷಾವಧಿ ಜಾತ್ರೆಯು ಶ್ರೀ ವೇದಮೂರ್ತಿ ನಂದಕುಮಾರ ತಂತ್ರಿ ರವರ ನೇತೃತ್ವದಲ್ಲಿ ಮಾ.15 ರಿಂದ ಮಾ.19 ರವರೆಗೆ ವಿದ್ಯುಕ್ತವಾಗಿ ನಡೆಯಲಿದೆ ಎಂದು ಅನುವಂಶಿಕ ಆಡಳಿತ ಮೊಕ್ತೇಸರ ಕೆ.ಬಿ. ಹರಿಶ್ಚಂದ್ರ ಬಲ್ಲಾಳ್ ಕೊಯ್ಯೂರುಗುತ್ತು ತಿಳಿಸಿದ್ದಾರೆ.

ಮಾ.15ರಂದು ಬೆಳಿಗ್ಗೆ ವೈದಿಕ ವಿಧಿವಿಧಾನಗಳು, ರಾತ್ರಿ ಉತ್ಸವ, ಮಹಾಪೂಜೆ, ಬಲಿ. ಮಾ.16ರಂದು ಬೆಳಿಗ್ಗೆ ಉತ್ಸವ, ಕಲಶಾಭಿಷೇಕ, ಮಹಾಪೂಜೆ, ರಾತ್ರಿ ಉತ್ಸವ, ಪಡಿಯಕ್ಕಿ, ಮಹಾಪೂಜೆ, ಬಲಿ. ಮಾ.17ರಂದು ಬೆಳಿಗ್ಗೆ ದರ್ಶನ ಬಲಿ, ಕಲಶಾಭಿಷೇಕ, ಮಹಾಪೂಜೆ, ಚಂಡಿಕಾ ಹೋಮ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ ಕೊಟ್ಟಿಗೆ ಕೆಲಸ, ಮಹಾರಥೋತ್ಸವ ಮಹಾಪೂಜೆ, ಭೂತಬಲಿ, ಕವಾಟ ಬಂಧನ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕುಮಾರಿ ನಂದನ ಮಾಲೆಂಕಿ ರವರಿಂದ ಸಂಗೀತ ಕಚೇರಿ ನಡೆಯಲಿದೆ. ಕೊಯ್ಯೂರು ಸುಂದರ ದೇವಾಡಿಗ ಮತ್ತು ಬಳಗದಿಂದ ಚೆಂಡೆ ವಾದನ, ಉಮಾನಾಥ ದೇವಾಡಿಗ ಅಶ್ವಥಪುರ ಮತ್ತು ಬಳಗದಿಂದ ನಾದಸ್ವರ ವಾದನ ನಡೆಯಲಿದೆ.

ಮಾ.18ರಂದು ಬೆಳಿಗ್ಗೆ ಕವಾಟ ಉದ್ಘಾಟನೆ, ಅಭಿಷೇಕ, ಪ್ರಸನ್ನಪೂಜೆ, ಮೂಲಸ್ಥಾನ ಗುಂಡದಿಂದ ಭಂಡಾರದ ಆಗಮನ, ಮಹಾಪೂಜೆ ಹಾಗೂ ಶ್ರೀಮತಿ ಸುಕನ್ಯಾ ದಿನೇಶ್ ಮತ್ತು ಬಳಗದಿಂದ ಸಂಗೀತ ಕಛೇರಿ, ಶ್ರೀ ಪಂಚದುರ್ಗಾ ಭಜನಾ ತಂಡದವರಿಂದ ಭಜನಾ ಕಾರ್ಯಕ್ರಮ, ಕೊಲ್ಯೂರು ಭಾಸ್ಕರ ಮತ್ತು ಬಳಗದಿಂದ ವಿಶೇಷ ಚೆಂಡೆ ಸೇವೆ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ ಬೆಳ್ತಂಗಡಿ ‘ಶೆಟ್ಟಿ ಆರ್ಟ್ಸ್’ ಗಿರಿಧರ ಶೆಟ್ಟಿ ಬಳಗದವರಿಂದ ವಿನೂತನ ಶೈಲಿಯ ನೃತ್ಯ, ಶ್ರೀ ಪಂಚದುರ್ಗಾಪರಮೇಶ್ವರಿ ಗೆಳೆಯರ ಬಳಗ ಕೊಯ್ಯೂರು ಇವರಿಂದ ಚೇತನ್ ವರ್ಕಾಡಿ ವಿರಚಿತ “ಏರಾದುಪ್ಪು” ತುಳು ಹಾಸ್ಯ ಸಾಂಸಾರಿಕ ನಾಟಕ, ರಾತ್ರಿ 9ರಿಂದ ಧರ್ಮದೈವಗಳ ನೇಮೋತ್ಸವ, ಶ್ರೀ ದೇವರ ಉತ್ಸವ, ಶ್ರೀ ಉಳ್ಳಾಲ್ತಿ ನೇಮೋತ್ಸವ, ಮಹಾಪೂಜೆ ನಡೆಯಲಿದೆ.ಮಾ.19ರಂದು ಬೆಳಿಗ್ಗೆ ವೈದಿಕ ವಿಧಿವಿಧಾನಗಳು ಜರುಗಲಿದೆ.

ಮಾ.25 ರಂದು ಜಾತ್ರಾ ಪ್ರಯುಕ್ತ ಸಂಜೆ 6:30ರಿಂದ ಬಪ್ಪನಾಡು ಮೇಳದವರಿಂದ ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟ ಜರುಗಲಿದೆ.

Related posts

ಮಚ್ಚಿನ ಅನಂತೇಶ್ವರ ಸಂಜೀವಿನಿ ಮಹಿಳಾ ಒಕ್ಕೂಟದ ವತಿಯಿಂದ ಸ್ವಸಹಾಯ ಸಂಘದ ಸದಸ್ಯರಿಗೆ ಫಿನೈಲ್ ಹಾಗೂ ಸೋಪ್ ಆಯಿಲ್ ತರಬೇತಿ

Suddi Udaya

ಬೆಳ್ತಂಗಡಿ ಶ್ರಮಿಕ ಕಚೇರಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಭೇಟಿ

Suddi Udaya

ಬೆಳ್ತಂಗಡಿ ರೋಟರಿ ಕ್ಲಬ್, ರೋಟರಿ ಕ್ಲಬ್ ಬೆಂಗಳೂರು ಇಂದಿರಾನಗರ ಮತ್ತು ರೋಟರಿ ಸೇವಾ ಟ್ರಸ್ಟ್ ಸಹಯೋಗದೊಂದಿಗೆ ಆರ್ಥಿಕವಾಗಿ ಹಿಂದುಳಿದಿರುವ ತಾಲೂಕಿನ ಪ್ರತಿಭಾವಂತ 258 ವಿದ್ಯಾರ್ಥಿಗಳಿಗೆ ರೂ.10.32 ಲಕ್ಷ ಸ್ಕಾಲ‌ರ್ ಶಿಪ್ ವಿತರಣೆ

Suddi Udaya

ಕೊಕ್ಕಡದಲ್ಲಿ ಜನಜಾಗೃತಿಗಾಗಿ ಅಖಂಡ ಭಾರತ ಸಂಕಲ್ಪ ದಿನ ಪಂಜಿನ ಮೆರವಣಿಗೆ

Suddi Udaya

ಮಂಜೊಟ್ಟಿ: ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆ

Suddi Udaya

ಗರ್ಡಾಡಿ ನಂದಿಬೆಟ್ಟು ಶ್ರೀ ನಂದಿಕೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಅಧ್ಯಕ್ಷರು, ಸದಸ್ಯರ ನೇಮಕ

Suddi Udaya
error: Content is protected !!