ಗೇರುಕಟ್ಟೆ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ, ಕೇಂದ್ರ ಕಛೇರಿ ತುಮಕೂರು, ನೇತ್ರಾವತಿ ವಲಯ, ದಕ್ಷಿಣಕನ್ನಡ ಜಿಲ್ಲೆಯ ಸಹಯೋಗದಲ್ಲಿ ಕ್ಷೀರಸಂಗಮ ಸಭಾಭವನ ಕಳಿಯ, ಇಲ್ಲಿಯ ಯೋಗಬಂಧುಗಳು ಮಾ. 12 ರಂದು ವಿಶ್ವ ಅಗ್ನಿಹೋತ್ರ ದಿನದ ಅಂಗವಾಗಿ ಸಾಮೂಹಿಕವಾಗಿ ಅಗ್ನಿಹೋತ್ರ ವನ್ನು ಮಾಡಿದರು.
ಯೋಗ ಶಿಕ್ಷಕಿ ಪ್ರೇಮಲತಾ ಇವರು ಅಗ್ನಿಹೋತ್ರದ ಮಹತ್ವ, ವೈಜ್ಞಾನಿಕ ಹಿನ್ನೆಲೆ, ಪ್ರಸ್ತುತ ದಿನಗಳಲ್ಲಿ ಅದರ ಅವಶ್ಯಕತೆಯ ಬಗ್ಗೆ ಮಾಹಿತಿ ನೀಡಿ ಮಾರ್ಗದರ್ಶನ ಮಾಡಿದರು.