25.1 C
ಪುತ್ತೂರು, ಬೆಳ್ತಂಗಡಿ
April 30, 2025
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿ

ಮಾ.18: ಉಜಿರೆಗೆ ನಂದಿ ರಥಯಾತ್ರೆ

ಉಜಿರೆ: ಗೋ ಸೇವಾ ಗತಿವಿಧಿ ಕರ್ನಾಟಕ, ರಾಧಾ ಸುರಭಿ ಗೋಮಂದಿರ, ರಾಷ್ಟ್ರೀಯ ಗೋಸೇವಾ ಸಂಸ್ಥಾನ ಟ್ರಸ್ಟ್‌ ಇದರ ನಂದಿ ರಥಯಾತ್ರೆಯು. ಡಿ.31 ಪ್ರಾರಂಭಗೊಂಡು ರಾಜ್ಯಾದ್ಯ0ತ ನಡೆಯುತ್ತಿದ್ದು, ಮಾ.18 ರಂದು ಸಂಜೆ 5 ಕ್ಕೆ  ಉಜಿರೆಗೆ ಪ್ರವೇಶಿಸಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಸಂಜೆ 5.30ಕ್ಕೆ ಉಜಿರೆ ಬೆಳಾಲ್ ಕ್ರಾಸ್‌ನಿಂದ ಭವ್ಯ ರಥಯಾತ್ರೆ, ನಂದಿ ರಥಯಾತ್ರೆಗೆ ಬೆಳ್ತಂಗಡಿ ದೇಸೀ ಗೋಸಂರಕ್ಷಕ ರಮೇಶ್ ಎಸ್. ಚಾಲನೆ ನೀಡಲಿದ್ದಾರೆ. ನಂತರ ಸಾಮೂಹಿಕ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ, ಸಂಜೆ ಗಂಟೆ 6-30ರಿಂದ ಉಜಿರೆ ಶಾರದಾ ಮಂಟಪದಲ್ಲಿ ಸಭಾ ಕಾರ್ಯಕ್ರಮ, ಸಭಾಧ್ಯಕ್ಷತೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನ ಆನುವಂಶಿಕ ಆಡಳಿತ ಮೊಕ್ತಸರರು ಶರತ್‌ಕೃಷ್ಣ ಪಡ್ಡೆಟ್ನಾಯ ವಹಿಸಲಿದ್ದಾರೆ. ನಂದಿ ರಥಯಾತ್ರೆ ರಾಧಾ ಸುರಭಿ ಗೋಮಂದಿರ ರಾಷ್ಟ್ರೀಯ ಗೋಸೇವಾ ಸಂಸ್ಥಾನ ಟ್ರಸ್ಟ್ ಅಧ್ಯಕ್ಷ ಭಕ್ತಿ ಭೂಷಣ್ ದಾಸ್ ದಿಕ್ಕೂಚಿ ಭಾಷಣ ಮಾಡಲಿದ್ದಾರೆ.

ಕಳೆಂಜ ಸ್ವಾಮಿಶ್ರೀ ವಿವೇಕಾನಂದ ಸೇವಾಶ್ರಮ ಟ್ರಸ್ಟ್ ನಂದಗೋಕುಲ, ಅಧ್ಯಕ್ಷ ಡಾ| ಎಂ.ಎಂ. ದಯಾಕರ್ ಉಪಸ್ಥಿತರಿರುವರು.

ನಂದಿ ರಥಯಾತ್ರೆ ಗುರಿ: ಒಂದು ಕೋಟಿ ಗೋಮಯ ಹಣತೆ, 1,11,108 ವಿಷ್ಣು ಸಹಸ್ರನಾಮ ಪಾರಾಯಣ, 108 ಸ್ಥಾನಗಳಲ್ಲಿ ಗವ್ಯ ಉತ್ಪನ್ನ ಮಾರಾಟ ಕೇಂದ್ರ ಉದ್ಘಾಟನೆ, ಆರೋಗ್ಯಯುತ, ಸ್ವಾವಲಂಬಿ, ಸುಸಂಪನ್ನ, ಸಮೃದ್ಧ, ವಿಶ್ವಗುರು ಭಾರತ. ನಂದಿಯಿಂದ ಫಲವತ್ತಾದ ಮಣ್ಣು, ಶುದ್ಧ ನೀರು & ಗಾಳಿ, ಪರಿಸರ ಸಂರಕ್ಷಣೆ.

Related posts

ಬೆಳ್ತಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಾನಪದ ವೈಭವ

Suddi Udaya

ಬೆಳ್ತಂಗಡಿ: ವಾಣಿ ಕಾಲೇಜಿನಲ್ಲಿ ಎನ್.ಎಸ್.ಎಸ್ ಘಟಕದಿಂದ ವಿಶ್ವ ಯೋಗ ದಿನಾಚರಣೆ

Suddi Udaya

ಕೋಲ್ಕತ್ತಾದ ಮೆಡಿಕಲ್ ವಿದ್ಯಾರ್ಥಿನಿಯ ಹತ್ಯೆ ಖಂಡಿಸಿ ಉಜಿರೆಯಲ್ಲಿ ಎನ್ ಎಸ್ ಯು ಐ ಹಾಗೂ ಸರ್ವ ಕಾಲೇಜು ವಿದ್ಯಾರ್ಥಿ ಸಂಘದಿಂದ ಪ್ರತಿಭಟನೆ

Suddi Udaya

ಬೆಳ್ತಂಗಡಿ: ಪವರ್ ಆನ್ ಸಂಸ್ಥೆಯ ಕ್ಯಾಲೆಂಡರ್ ಬಿಡುಗಡೆಗೊಳಿಸಿದ ಪೌರ ಕಾರ್ಮಿಕರು

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ದಾಖಲೆ ಪ್ರಮಾಣದ ಪಂಚಕಜ್ಜಾಯ ಸೇವೆ

Suddi Udaya

ಮಾ.31-ಎ.4: ಸುಲ್ಕೇರಿ ನಾವರ ಶ್ರೀ ಮಹಾಲಿಂಗೇಶ್ವರ ದೇವರಿಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ: ಮಾ.31 ವೈಭವಯುತ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

Suddi Udaya
error: Content is protected !!