ಬಳಂಜ: ನಾಲ್ಕೂರು ಗ್ರಾಮದ ಮಜಲಡ್ಡ ಮನೆಯ, ಕೃಷಿಕ ಕರಿಯ ಪೂಜಾರಿ (68 ವರ್ಷ) ಅವರು ಅಲ್ಪಕಾಲದ ಅಸೌಖ್ಯದಿಂದ ಮಾ13 ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು.
ಕಳೆದೊಂದು ತಿಂಗಳ ಹಿಂದೆ ಇವರ ಪುತ್ರ ಕಿರಣ್ (35ವ) ಅವರು ಮೈಸೂರಿನಲ್ಲಿ ಆಕಸ್ಮಿಕವಾಗಿ ನಿಧನ ಹೊಂದಿದ್ದು, ತಿಂಗಳೊಳಗೆ ಅಪ್ಪ,ಮಗ ನಿಧನರಾಗಿ ಕುಟುಂಬವನ್ನು ಕಣ್ಣೀರ ಸಾಗರದಲ್ಲಿ ಮುಳುಗಿಸಿದೆ.
ಮೃತರು ಪತ್ನಿ ಭಾರತಿ, ಒರ್ವ ಪುತ್ರ ರಂಜಿತ್ ಪೂಜಾರಿ, ಪುತ್ರಿ ಗುಣವತಿ, ಅಳಿಯ, ಸೊಸೆ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.
ಮೃತರ ಮನೆಗೆ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಆಗಮಿಸಿ ಅಂತಿಮ ನಮನ ಸಲ್ಲಿಸಿದರು.