ಮಂಗಳೂರು: ಮುಕ್ಕ ಶ್ರೀನಿವಾಸ್ ಯೂನಿವರ್ಸಿಟಿ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಯಲ್ಲಿ ಎರಡು ದಿನಗಳ ರಾಷ್ಟ್ರೀಯ ಮಟ್ಟದ ತಾಂತ್ರಿಕ, ಸಾಂಸ್ಕೃತಿಕ ಮತ್ತು ಕ್ರೀಡಾ ಉತ್ಸವ ‘ಟೆಕ್ ಯುವ – 25’ ಮಾ.12 ರಂದು ಉದ್ಘಾಟನೆಗೊಂಡಿತು.

ಬೆಂಗಳೂರಿನ ಐಸ್ಪಿ ಆಕ್ರೋ ರೋಬೋಟಿಕ್ಸ್ ಹಾಗೂ ಮಂಗಳೂರಿನ ಅಗ್ರಿಲೀಫ್ ಪೈವೇಟ್ ಲಿಮಿಟೆಡ್ ಸಂಸ್ಥೆ ಮುಖ್ಯಸ್ಥ, ಸಿಇಒ ಅವಿನಾಶ್ ರಾವ್, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ನಿಮ್ಮ ಸುತ್ತಮುತ್ತಲಿರುವ ಜನರೊಂದಿಗೆ ಸಂವಹನ ನಡೆಸಿ, ಅವರ ಜೀವನ ಅನುಭವಗಳಿಂದ ಪ್ರೇರಿತರಾಗಿರಿ. ಉತ್ತಮ ನಾಯಕನಾಗಲು ತಂಡದೊಂದಿಗೆ ಕೆಲಸ ಮಾಡುವುದು ಅಗತ್ಯ. ಉತ್ತಮ ಸಂವಹನವು ವ್ಯವಹಾರ ಅಭಿವೃದ್ಧಿಗೆ ಅತ್ಯಗತ್ಯ ಎಂದರು.

ಶ್ರೀನಿವಾಸ್ ವಿವಿ ಉಪಕುಲಪತಿ ಡಾ. ಕೆ. ಸತ್ಯನಾರಾಯಣ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಮುಖ್ಯಸ್ಥ ಡಾ. ರಾಮಕೃಷ್ಣಎನ್. ಹೆಗಡೆ ಸ್ವಾಗತಿಸಿದರು. ಟೆಕ್ ಯುವ ಕಾರ್ಯಕ್ರಮದ ಸಂಚಾಲಕ ಪ್ರೊ. ಕೆ.ಶ್ರೀನಾಥ್ ರಾವ್ ಅತಿಥಿ ಪರಿಚಯ ಮಾಡಿದರು. ವಿವಿ ತರಬೇತಿ ಮತ್ತು ಉದ್ಯೋಗ ಅಧಿಕಾರಿ ಡಾ. ಶ್ವೇತಾ ಪೈ ವಂದಿಸಿದರು. ವಿವಿ ಸಂಶೋಧನಾ ವಿಭಾಗದ ನಿರ್ದೇಶಕ ಡಾ. ಪ್ರವೀಣ್ ಬಿ.ಎಂ., ಟೆಕ್ ಯುವ-25 ರ ವಿದ್ಯಾರ್ಥಿ ಸಮನ್ವಯ ಕಾರರಾದ ಮೊಹಮ್ಮದ್ ಸೈಫಾಜ್, ಆಕಾಶ್ ಕುಲಾಲ್, ಚೈತ್ರಾ ರಾವ್, ಕಿರಣ್ ಶೆಟ್ಟಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಸ್ಯಾಮ್ ಅವಿನ್ ಬಂಗೇರಾ ನಿರೂಪಿಸಿದರು.