26.5 C
ಪುತ್ತೂರು, ಬೆಳ್ತಂಗಡಿ
March 14, 2025
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿ

ಬೆಳ್ತಂಗಡಿ ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ಸಂಘ ಉಜಿರೆಯಲ್ಲಿ ನಿರ್ದೇಶಕರಾದ ದಿ| ಪದ್ಮನಾಭ ಎನ್. ಮಾಣಿಂಜ ರವರಿಗೆ ನುಡಿನಮನ

ಉಜಿರೆ: ಬೆಳ್ತಂಗಡಿ ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ಸಂಘ (ನಿ.), ಉಜಿರೆ ಇದರ ಮಾಜಿ ಉಪಾಧ್ಯಕ್ಷರು ಹಾಗೂ ಹಾಲಿ ನಿರ್ದೇಶಕರು ದಿ| ಪದ್ಮನಾಭ ಎನ್. ಮಾಣಿಂಜ ಇವರ ಸಂಘಕ್ಕೆ ನೀಡಿದ ಮಾರ್ಗದರ್ಶಕ ಸೇವೆಯನ್ನು ಸ್ಮರಿಸಿ ನುಡಿನಮನ ಕಾರ್ಯಕ್ರಮ ಸಂಘದ ದಿ| ಜಿ.ಎನ್. ಭಿಡೆ ಸಭಾಭವನದಲ್ಲಿ ನಡೆಸಲಾಯಿತು.


ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಶ್ರೀಧರ ಜಿ ಭಿಡೆ ಯವರು ಮಾತನಾಡಿ ಮಿತಭಾಷಿಯಾಗಿದ್ದ ಶ್ರೀಯುತರು ಸರಕಾರಿ ಉನ್ನತ ಸೇವೆಯ ಅನುಭವವನ್ನು ಸಂಘಕ್ಕೆ ಅನೇಕ ಅವಧಿಗೆ ಉಪಾಧ್ಯಕ್ಷರಾಗಿ ಮತ್ತು ನಿರ್ದೇಶಕರಾಗಿ ನೀಡಿದ್ದರು ಹಾಗೂ ಸಮಾಜದಲ್ಲಿ ಉನ್ನತ ಗೌರವಕ್ಕೆ ಪಾತ್ರರಾಗಿದ್ದರು ಎಂದು ನೆನಪಿಸಿಕೊಂಡರು. ಉಪಾಧ್ಯಕ್ಷ ಎಂ. ಅನಂತ ಭಟ್ ಇವರು ಶ್ರೀಯುತರ ಕಾರ್ಯಸಾಧನೆಯಲ್ಲಿನ ಧೀಮಂತಿಕೆಯನ್ನು ಮತ್ತು ಒಡನಾಟ ನೆನಪಿಸಿಕೊಂಡು ಗೌರವ ಸಮರ್ಪಿಸಿದರು.

ಮುಖ್ಯಕಾರ್ಯನಿರ್ವಾಹಣಾಧಿಕಾರಿ ರಾಜು ಶೆಟ್ಟಿಯವರು ಕಾರ್ಯಕ್ರಮ ನಿರ್ವಹಿಸಿ ಸಂಘದಲ್ಲಿ ಆರಂಭ ದಿನಗಳಲ್ಲೇ ಸದಸ್ಯರಾಗಿದ್ದ ದಿ| ಪದ್ಮನಾಭ ಎನ್. ಮಾಣಿಂಜ ರವರು ಸಂಘದಲ್ಲಿ 2005 ರಿಂದ 2020 ರ ಅವಧಿಗೆ ಉಪಾಧ್ಯಕ್ಷರಾಗಿ ಹಾಗೂ 1996 ರಿಂದ ಈವರೆಗೂ ಆಡಳಿತ ಮಂಡಳಿಯಲ್ಲಿ ನಿರ್ದೇಶಕರಾಗಿ ಸಂಘದ ಬೆಳವಣಿಗೆಯಲ್ಲಿ ದೊಡ್ಡ ಪಾತ್ರವಹಿಸಿದವರು ಎಂದು ನೆನೆದು ನುಡಿನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರುಗಳಾದ ಶ್ರೀಮತಿ ಜಯಶ್ರೀ ಡಿ.ಎಂ., ಗ್ರೇಸಿಯನ್ ವೇಗಸ್, ಸೋಮನಾಥ ಬಂಗೇರ, ಕೆ.ಜೆ. ಅಗಸ್ಟಿನ್, ವಿ.ವಿ. ಅಬ್ರಾಹಂ, ಬಾಲಕೃಷ್ಣ ಗೌಡ ಕೆ., ಅಬ್ರಾಹಂ ಬಿ.ಎಸ್., ಶಶಿಧರ ಡೋಂಗ್ರೆ, ರಾಮ ನಾಯ್ಕ, ಬೈರಪ್ಪ, ಶ್ರೀಮತಿ ಆರ್. ಸುಭಾಷಿಣಿ ಹಾಗೂ ಸಂಘದ ಸಿಬ್ಬಂದಿ ವರ್ಗ ಭಾಗವಹಿಸಿ ಭಾವಚಿತ್ರಕ್ಕೆ ಗೌರವ ಸಮರ್ಪಿಸಿದರು.

Related posts

ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಕವನ ವಾಚನ ಸ್ಪರ್ಧೆ : ಕು | ನಿತ್ಯಶ್ರೀ ಖಂಡಿಗ ರಾಜ್ಯ ಮಟ್ಟಕ್ಕೆ ಆಯ್ಕೆ

Suddi Udaya

ರಕ್ತೇಶ್ವರಿಪದವು ಭಜನಾ ಮಂಡಳಿ ವತಿಯಿಂದ ನಗರ ಭಜನೆಗೆ ಚಾಲನೆ

Suddi Udaya

” ಗೃಹಲಕ್ಷ್ಮಿ” ಯೋಜನೆಯ ನೋಂದಾವಣೆ : ರಜಾ ದಿನದಲ್ಲೂ ಕಾರ್ಯನಿರ್ವಹಿಸಿದ ಕಳಿಯ ಗ್ರಾ.ಪಂ.

Suddi Udaya

ಜು.2: ಭಾರತೀಯ ಜನತಾ ಪಾರ್ಟಿ ದ.ಕ. ಜಿಲ್ಲೆ ಹಾಗೂ ಬೆಳ್ತಂಗಡಿ ಮಂಡಲ ರೈತ ಮೋರ್ಚಾ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಬೃಹತ್ ಪ್ರತಿಭಟನೆ ನಡೆಸುವ ಬಗ್ಗೆ ವಿಶೇಷ ಬೈಠಕ್ ಸಭೆ

Suddi Udaya

ಕಲ್ಮಂಜ ನಿವಾಸಿ ರಘು ನಿಧನ

Suddi Udaya

ಬೆಳಾಲು ಶ್ರೀ ಧ.ಮಂ. ಪ್ರೌಢಶಾಲೆಯಲ್ಲಿ ಉಚಿತ ವೈದ್ಯಕೀಯ ಶಿಬಿರ

Suddi Udaya
error: Content is protected !!