ಬೆಳ್ತಂಗಡಿ: ಲಾಯಿಲ ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನದ ವತಿಯಿಂದ ಸುಮಾರು 22 ವರ್ಷಗಳಿಂದ ನಡೆಯುತ್ತಿರುವ ಸಾರ್ವಜನಿಕ ಸತ್ಯನಾರಾಯಣ ದೇವರ ಪೂಜೆಯು ಮಾ.14 ರಂದು ವಿಜೃಂಭಣೆಯಿಂದ ಜರಗಿತು.

ನೂರಾರು ಭಕ್ತರು ಕ್ಷೇತ್ರದಲ್ಲಿ ಹಾಜರಿದ್ದು ಸೇವಾ ಪ್ರಸಾದ ಸ್ವೀಕರಿಸಿದರು. ಶ್ರೀ ರಾಘವೇಂದ್ರ ಬಾಂಗಿಣ್ಣಾಯರವರ ನೇತೃತ್ವದಲ್ಲಿ ವೈದಿಕ ವಿಧಿ ವಿಧಾನಗಳು ಸಾಂಗೋಪವಾಗಿ ಜರಗಿತು.
ಈ ಸಂದರ್ಭದಲ್ಲಿ ಅಧ್ಯಕ್ಷ ಪೀತಾಂಬರ, ಹೆರಾಜೆ, ಎ ಕೃಷ್ಣಪ್ಪ ಪೂಜಾರಿ, ಮಹಾಬಲ ಶೆಟ್ಟಿ, ವಸಂತ ಸುವರ್ಣ, ಜಯರಾಮ ಬಂಗೇರ, ಶ್ರೀಮತಿ ಸುಶೀಲಾ ಹೆಗ್ಡೆ, ಶ್ರವಣ್ ರಾಜ್, ಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.