ಸೇವಾಭಾರತಿ ಬೆಳ್ತಂಗಡಿ ಇದರ ಆಶ್ರಯದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಸಹಕಾರದಲ್ಲಿ ಶಿವಾಜಿ ಗ್ರೂಪ್ ಬಾಯ್ಸ್ ಕೊಕ್ಕಡ, ವೀರಕೇಸರಿ ಅನಾರು ಪಟ್ರಮೆ, ಕೇಸರಿ ಗೆಳೆಯರ ಬಳಗ ಕೊಕ್ಕಡ, ಹವ್ಯಕ ವಲಯ ಉಜಿರೆ ಇವುಗಳ ಸಹಭಾಗಿತ್ವದಲ್ಲಿ 100ನೇ ಬೃಹತ್ ರಕ್ತದಾನ ಶಿಬಿರ ಕೊಕ್ಕಡ ಸೌತಡ್ಕ ಸೇವಾಧಾಮದಲ್ಲಿ ಮಾ.16ರಂದು ಜರುಗಿತು.

ಕಾರ್ಯಕ್ರಮವನ್ನು ಕೊಕ್ಕಡ ಶ್ರೀರಾಮ ಸೇವಾ ಸಮಿತಿ ಕಾರ್ಯದರ್ಶಿ ಶಶಿ ಕೊಕ್ಕಡ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಉಜಿರೆ ಹವ್ಯಕ ವಲಯ ಉಪಾಧ್ಯಕ್ಷರಾದ ಶಿವರಾಮ ಭಟ್ ಹಿತ್ತಿಲು, ಶಿವಾಜಿ ಗ್ರೂಪ್ ಆಫ್ ಬಾಯ್ಸ್ ಕೊಕ್ಕಡ ಇದರ ಅಧ್ಯಕ್ಷರಾದ ಕಿಶೋರ್ ಪೊಯ್ಯೊಳೆ, ಕೊಕ್ಕಡ ಕೇಸರಿ ಗೆಳೆಯರ ಬಳಗದ ಅಧ್ಯಕ್ಷ ಶರತ್ ಕೊಕ್ಕಡ, ಡಿಸ್ಟ್ರಿಕ್ಟ್ ಕೋ-ಆರ್ಡಿನೇಟರ್ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಇದರ ಪ್ರವೀಣ್ ಕುಮಾರ್ ಆಗಮಿಸಿದ್ದರು.
ವೇದಿಕೆಯಲ್ಲಿ ಸೇವಾಭಾರತಿಯ ಅಧ್ಯಕ್ಷರಾದ ಶ್ರೀಮತಿ ಸ್ವರ್ಣಗೌರಿ ಉಪಸ್ಥಿತರಿದ್ದರು.ಟ್ರಸ್ಟಿ ಜಯರಾಜ್ ಕಾನರ್ಪ ಸ್ವಾಗತಿಸಿದರು. ಸೇವಾಭಾರತಿಯ ಅನುಸರಣೆ ಮತ್ತು ಹಣಕಾಸು ಪ್ರಬಂಧಕ ಮೋಹನ್ ಕಾರ್ಯಕ್ರಮ ನಿರೂಪಿಸಿದರು. ಟ್ರೈನರ್ ಆಂಟನಿ ಧನ್ಯವಾದವಿತ್ತರು.