March 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಪಡಂಗಡಿ ವಿಶೇಷ ಚೇತನರ ಸಮನ್ವಯ ಗ್ರಾಮಸಭೆ-ಸಾಧಕರಿಗೆ ಗೌರವ ಸನ್ಮಾನ

ಪಡಂಗಡಿ ಗ್ರಾಮ ಪಂಚಾಯತಿಯ ವಿಶೇಷ ಚೇತನರ ಸಮನ್ವಯ ಗ್ರಾಮ ಸಭೆಯು ಗ್ರಾಮ ಪಂಚಾಯತ್‌ ಅಧ್ಯಕ್ಷ ವಸಂತ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಜರುಗಿತು.

ತಾಲೂಕು ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರಾದ ಜೋನ್‌ ಬ್ಯಾಪ್ಟಿಸ್‌ ಡಿಸೋಜಾ ಇವರು ವಿಶೇಷ ಚೆತನರಿಗೆ ಸರಕಾರವು ಜಾರಿ ಮಾಡಲಾದ ಯೋಜನೆಗಳು ಮತ್ತು ಸೌಲಭ್ಯಗಳ ಬಗ್ಗೆ ಸುದೀರ್ಘವಾದ ಉಪಯುಕ್ತ ಮಾಹಿತಿಯನ್ನು ನೀಡಿದರು. ಗ್ರಾಮ ಪಂಚಾಯತ್‌ ಮಟ್ಟದ ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆ ಕುಮಾರಿ ದೀಕ್ಷಿತಾರವರು ಸಭೆಗೆ ವರದಿಯನ್ನು ಮಂಡಿಸಿದರು. ಸರ್ಕಾರಿ ಕಛೇರಿ, ಬ್ಯಾಂಕ್‌ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ವಿಶೇಷ ಚೇತನರಿಗೆ ಸರತಿ ಸಾಲಿನಲ್ಲಿ ವಿನಾಯಿತಿ ನೀಡಿ ಮೊದಲ ಪ್ರಾಶಸ್ತ್ಯ ನೀಡಬೇಕು. ಮೂರು ಚಕ್ರ ವಾಹನದ ಬೇಡಿಕೆ, ವಿಶೇಷ ಚೇತನರ ವಿಧ್ಯಾಬ್ಯಾಸದ ಸೌಲಭ್ಯದ ಕುರಿತು ಬೇಡಿಕೆಗಳನ್ನು ಸಲ್ಲಿಸಿದರು ಮತ್ತು ಈ ಬಗ್ಗೆ ಚರ್ಚಿಸಲಾಯಿತು. ವಿಶೇಷ ಚೇತನರು ಸರಕಾರದ ಮತ್ತು ಸಂಘ ಸಂಸ್ಥೆಗಳ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಸಮಾಜದಲ್ಲಿ ಸ್ವಾಭಿಮಾನದಿಂದ ಬದುಕುವಂತಾಗಬೇಕೆಂದು ಪಂಚಾಯತ್‌ ಅಭಿವೃದ್ದಿ ಅಧಿಕಾರಿ ಶ್ರೀಮತಿ ಸಫನಾ ಸಂದೇಶವಿತ್ತರು.

ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಗೈದು ತನ್ನದೇ ಆದ ಛಾಪು ಮೂಡಿಸಿರುವ ಸುಶಾಂತ್‌ ಪೂಜಾರಿ ಕನ್ನಡಿಕಟ್ಟೆ ಇವರನ್ನು ಸಭೆಯಲ್ಲಿ ಗೌರವಿಸಿ ಸನ್ಮಾನಿಸಲಾಯಿತು. ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಶ್ರೀಮತಿ ವಸಂತಿ ಮತ್ತು ಗ್ರಾ.ಪಂ. ಸದಸ್ಯರಾದ ಸಂತೋಷ್‌ ಕುಮಾರ್‌ ಜೈನ್‌, ರಿಚರ್ಡ್‌ ಗೋವಿಯಸ್‌, ಹಾಮದ್‌ ಬಾವಾ, ಯೋಗೀಶ್‌ ಕುಮಾರ್‌ ಡಿ.ಪಿ, ಶಕುಂತಳಾ, ವನಜಾಕ್ಷಿ, ಹಾಗೂ ಶುಭಾ ಪಾಲ್ಗೊಂಡಿದ್ದರು.

ಗ್ರಾಮ ಪಂಚಾಯತ್‌ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಂಥಾಲಯ ಮೇಲ್ವಿಚಾರಕಿ, ಸಿರಿ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು ಮತ್ತು ಗ್ರಾಮ ಪಂಚಾಯತ್‌ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸಭೆಯಲ್ಲಿ 39 ಜನ ವಿಶೇಷ ಚೇತನರು ಮತ್ತು ಅವರ ಪೋಷಕರು ಹಾಜರಿದ್ದರು.

Related posts

ಬೆಳ್ತಂಗಡಿ ಆಡಳಿತ ಸೌಧಕ್ಕೆ ಮಂಗಳೂರು ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಭೇಟಿ: ಹಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ

Suddi Udaya

ಪಟ್ಟೂರು ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ಶ್ರೀರಾಮೋತ್ಸವ ಸಂಭ್ರಮ

Suddi Udaya

ನೇತ್ರಾವತಿ ನದಿ ತಟದಿಂದ ಧರ್ಮಸ್ಥಳ ಅಣ್ಣಪ್ಪ ಸನ್ನಿಧಾನದವರೆಗೆ ಪಾದಯಾತ್ರೆ ಕು.ಸೌಜನ್ಯ ತಾಯಿ ಕುಸುಮಾವತಿ ಭಾಗಿ

Suddi Udaya

ಲಾಯಿಲ ಗ್ರಾ.ಪಂ ಮಾಜಿ ಸದಸ್ಯ ಜಗನ್ನಾಥ ನಿಧನ

Suddi Udaya

ಬಿಜೆಪಿ ಕುವೆಟ್ಟು ಶಕ್ತಿಕೇಂದ್ರದ ಅಧ್ಯಕ್ಷರಾಗಿ ಚಂದ್ರ ದಾಸ್, ಕುಕ್ಕಳ ಶಕ್ತಿಕೇಂದ್ರದ ಅಧ್ಯಕ್ಷರಾಗಿ ಶೈಲೇಶ್ ಪೂಜಾರಿ ಆಯ್ಕೆ

Suddi Udaya

ಶ್ರೀಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದ ಅಂಗವಾಗಿ ಡಿ.8 (ನಾಳೆ) 11ನೇ ವರ್ಷದ ಪಾದಯಾತ್ರೆ: ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಮಧ್ಯಾಹ್ನ 3 ಕ್ಕೆ ಪಾದಯಾತ್ರೆಗೆ ಚಾಲನೆ

Suddi Udaya
error: Content is protected !!