March 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಲಾಯಿಲ ಗ್ರಾಮೀಣ ಶ್ರೇಷ್ಠತಾ ತರಬೇತಿ ಕೇಂದ್ರದಲ್ಲಿ ದೀಪದ ಬತ್ತಿ ತಯಾರಿ ತರಬೇತಿಯ ಸಮಾರೋಪ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ-ಬೆಳ್ತಂಗಡಿ ಲಾಯಿಲ ಗ್ರಾಮೀಣ ಶ್ರೇಷ್ಠತಾ ತರಬೇತಿ ಕೇಂದ್ರದಲ್ಲಿ ಕೌಶಲ್ಯಾಭಿವೃದ್ಧಿ ಯೋಜನೆಯಡಿ ದೀಪದ ಬತ್ತಿ ತಯಾರಿಕಾ ತರಬೇತಿಯ ಸಮಾರೋಪ ಕಾರ‍್ಯಕ್ರಮದಲ್ಲಿ ತಾ.ಪಂ. ಇ. ಓ. ಭವಾನಿ ಶಂಕರ್ ಭಾಗವಹಿಸಿ ಅವಕಾಶಗಳು ಬಂದಾಗ ಅದನ್ನು ನಾವು ಬಳಸಿಕೊಳ್ಳುವುದು ನಮ್ಮ ಜಾಣತನ.

ಮಹಿಳೆಯರಿಗೆ ಸ್ವ ಉದ್ಯೋಗ ಮಾಡಲು ಹಲವಾರು ದಾರಿಗಳಿವೆ. ಆ ದಾರಿಗೆ ಸರಿಯಾದ ಯೋಜನೆ ಹಾಕಿಕೊಂಡಲ್ಲಿ ಮಹಿಳೆಯರು ದುಡಿಮೆ ಮಾಡಲು ಸಾಧ್ಯ ಎಂದರು. ಆ ನಂತರ ತರಬೇತಿ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಶುಭಹಾರೈಸಿದರು.

ಒಟ್ಟು 37 ಮಂದಿ ಭಾಗವಹಿಸಿ ತರಬೇತಿಯ ಸದುಪಯೋಗ ಪಡೆದುಕೊಂಡಿದ್ದಾರೆ. ಕಾರ‍್ಯಕ್ರಮದಲ್ಲಿ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಸೋಮನಾಥ್‌ ಕೆ, ತಾಲೂಕು ಪಂಚಾಯತ್‌ ತರಬೇತುದಾರರು ಸುಧಾಮಣಿ ಉಪಸ್ಥಿತರಿದ್ದರು. ತರಬೇತಿ ನೀಡಲು ಪುತ್ತೂರು ದೀಪದ ಬತ್ತಿ ತಯಾರಿಕಾ ಸಂಸ್ಥೆಯ ಮಾಲಕ ಪುನೀತ್‌ ಹಾಗೂ ಶಿಶಿರ್‌ ಇವರು ಮೆಷಿನ್‌ ಮೂಲಕ ಬತ್ತಿ ತಯಾರಿಕೆ ಮತ್ತು ಪ್ಯಾಕಿಂಗ್‌ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ತರಬೇತಿ ನೀಡಿದರು. ತರಬೇತಿ ಸಂಯೋಜಕರಾದ ಜಯಶ್ರೀ ಕಾರ‍್ಯಕ್ರಮ ನಿರ್ವಹಣೆ ಮಾಡಿ ಧನ್ಯವಾದ ನೀಡಿದರು.

Related posts

ರೆಖ್ಯದಲ್ಲಿ ಕಾಂಗ್ರೆಸ್ ಬೂತ್ ಮಟ್ಟದ ಸಭೆ

Suddi Udaya

ಕನ್ಯಾಡಿಯಲ್ಲಿ ಜನಾರ್ದನ ರೆಸಿಡೆನ್ಸಿ ಉದ್ಘಾಟನೆ

Suddi Udaya

ಕೊಕ್ಕಡ: ಕಾರು ಹಾಗೂ ಬೈಕ್ ಮಧ್ಯೆ ಅಪಘಾತ: ಬೈಕ್ ಸವಾರ ತಾ. ಪಂ. ಮಾಜಿ ಸದಸ್ಯ ಲಕ್ಷ್ಮೀನಾರಾಯಣ ಟಿ.ಎಮ್ ರಿಗೆ ತೀವ್ರ ಗಾಯ

Suddi Udaya

ವೇಣೂರು ಭಗವಾನ್ ಶ್ರೀ ಬಾಹಬಲಿಯ ಮಹಾ ಮಜ್ಜನ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಹೆಗ್ಗಡೆ ಭೇಟಿ, ಅಟ್ಟಳಿಗೆ ಹಾಗೂ ಇತರ ಕಾಮಗಾರಿ ವೀಕ್ಷಣೆ

Suddi Udaya

ಭಾರೀ ಮಳೆ : ಪಟ್ರಮೆ ಶಾಂತಿಕಾಯದಲ್ಲಿ ಗುಡ್ಡ ಕುಸಿತ

Suddi Udaya

ಮಚ್ಚಿನ : ಸರಕಾರಿ ಪ್ರೌಢಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

Suddi Udaya
error: Content is protected !!