March 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಬೆಳ್ತಂಗಡಿಸಂಘ-ಸಂಸ್ಥೆಗಳು

ವೇಣೂರು: ನವೀಕೃತ ಭಜನಾ ಮಂದಿರದ ಲೋಕಾರ್ಪಣೆ ಮತ್ತು ಸಾಮೂಹಿಕ ಸತ್ಯನಾರಾಯಣ ಪೂಜೆ

ವೇಣೂರು: ಶ್ರೀ ಸತ್ಯನಾರಾಯಣ ಪೂಜಾ ಸೇವಾ ಸಮಿತಿ ಹೊಸಪಟ್ಣ-ಬಜಿರೆ ಮತ್ತು ಶ್ರೀ ಸತ್ಯನಾರಾಯಣ ಫ್ರೆಂಡ್ಸ್ ಕ್ಲಬ್, ಶ್ರೀ ಸತ್ಯನಾರಾಯಣ ಭಜನಾ ಮಂಡಳಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಪ್ರಗತಿ ಬಂಧು ಒಕ್ಕೂಟ ಬಜಿರೆ ‘ಬಿ’ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಾ.14ರಂದು ನವೀಕೃತ ಭಜನಾ ಮಂದಿರದ ಲೋಕಾರ್ಪಣಾ ಕಾರ್ಯಕ್ರಮದೊಂದಿಗೆ 46ನೇ ವರ್ಷದ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಿತು.

ಸಂಜೆ ಪಾವಂಜೆ ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಿತು.

ಸೇವಾಕರ್ತ ಶ್ರೀಮತಿ ರಾಜೀವಿ ಮತ್ತು ಮಕ್ಕಳು, ಪಾರಿಜಾತ ಅಂಡಿಂಜೆ, ದಿ. ಕೆ. ಕೋಟ್ಯಪ್ಪ ಪೂಜಾರಿ ಲೋಕಮ್ಮ ದಂಪತಿಗಳ ಸ್ಮರಣಾರ್ಥ ಕೆ. ಹರೀಶ್ಚಂದ್ರ, ಹೆಚ್.ಎಎಲ್ ಬೆಂಗಳೂರು ಇವರು 20ನೇ ವರ್ಷದ ವಿದ್ಯಾರ್ಥಿ ವೇತನವನ್ನು ಹೊಸಪಟ್ಣ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಐದನೇ ತರಗತಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನೀಡಿದರು.

ನವೀಕೃತ ಭಜನಾ ಮಂದಿರವನ್ನು ಸಮಾಜ ಸೇವಕ, ಬದುಕು ಕಟ್ಟೋಣ ಬನ್ನಿ ತಂಡದ ಮುಂದಾಳು ಹಾಗೂ ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್ (ಕನಸಿನ ಮನೆ) ಮಾಲಕ ಕೆ. ಮೋಹನ್ ಕುಮಾರ್ ಉದ್ಘಾಟಿಸಿದರು.

ವೇದಿಕೆಯಲ್ಲಿ ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಜಯರಾಮ ಶೆಟ್ಟಿ, ವೇಣೂರು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಮಲ್ಲಿಕಾ ಕಾಶೀನಾಥ್, ಸುರೇಶ್ ಕುಮಾರ್ ಆರಿಗ ಪೆರ್ಮಾಣುಗುತ್ತು ಬಜಿರೆ, ಶ್ರೀ ಸತ್ಯನಾರಾಯಣ ಫ್ರೆಂಡ್ಸ್ ಕ್ಲಬ್ ಸ್ಥಾಪಕಾಧ್ಯಕ್ಷ ರಮೇಶ್ ಕುಡ್ಮೇರು, ಮುಂತಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಮಿತಿಯ ಗೌರವಾಧ್ಯಕ್ಷ ಬಿ. ಪದ್ಮನಾಭ ರೈ ಬ್ರಾಣಿಗೇರಿ, ಉಪಾಧ್ಯಕ್ಷ ಬಿ. ದಾಸಪ್ಪ ರೈ ಬ್ರಾಣಿಗೇರಿ, ಸಮಿತಿ ಜೊತೆ ಕಾರ್ಯದರ್ಶಿ ಆನಂದ ಪೂಜಾರಿ, ಕೋಶಾಧಿಕಾರಿ ಮೋಹಾನಂದ ಕುಡ್ಮೆರು, ಶ್ರೀ ಸತ್ಯನಾರಾಯಣ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಕಿಶೋರ್ ಕುಮಾರ್ ನಾಯರ್‌ಮೇರು, ಕಾರ್ಯದರ್ಶಿ ಮೋಹನ್ ಕುಮಾರ್ ಬಿ.ಸಿ. ಹೊಸಪಟ್ಣ, ಭಜನಾ ಮಂಡಳಿಯ ಅಧ್ಯಕ್ಷ ಸತೀಶ್ ನಾಯರ್ಮೆರ್, ಗೌರವಾಧ್ಯಕ್ಷ ದೇಜಪ್ಪ ಮೂಲ್ಯ ಶಾಂತಿರೊಟ್ಟು ಮುಂತಾದ ಪ್ರಮುಖರೊಂದಿಗೆ ವಿವಿಧ ಸಮಿತಿಯ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಶ್ರೀ ಸತ್ಯನಾರಾಯಣ ಪೂಜಾ ಸೇವಾ ಸಮಿತಿ ಅಧ್ಯಕ್ಷ ಪ್ರವೀಣ್ ಪೂಜಾರಿ ಜಾರಿಗೆದಡಿ ಸ್ವಾಗತಿಸಿ, ಸಮಿತಿಯ ಪ್ರಧಾನ ಸಂಚಾಲಕ ಗಣೇಶ ಪೂಜಾರಿ ಕೆ. ಮೋಹನ್ ಕುಮಾರ್ ರವರ ಸನ್ಮಾನ ಪತ್ರ ಪ್ರಸ್ತುತಪಡಿಸಿದರು. ಸಮಿತಿಯ ಕಾರ್ಯದರ್ಶಿ ಭಾಸ್ಕರ ಪೂಜಾರಿ ನಾಯರ್‌ಮೇರ್ ಕಾರ್ಯಕ್ರಮ ನಿರೂಪಿಸಿದರು.

Related posts

ಉಜಿರೆ ದೇವಸ್ಥಾನದಲ್ಲಿ ಸಂಕಷ್ಟ ಚತುರ್ಥಿ ಪ್ರಯುಕ್ತ  ಕಾವ್ಯವಾಚನ-ವ್ಯಾಖ್ಯಾನ   

Suddi Udaya

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ರೂ. 25,000 ಸಹಾಯಧನ ವಿತರಣೆ

Suddi Udaya

ಮೇ.15 ರಿಂದ ಶ್ರೀ ದುರ್ಗಾ ಟೆಕ್ಸ್‌ಟೈಲ್ಸ್‌ನಲ್ಲಿ ಬೃಹತ್ ಶೇ. 50% ಡಿಸ್ಕೌಂಟ್ ಸೇಲ್: ಸೀರೆಗಳು ಕೇವಲ ರೂ. 99 ಕ್ಕೆ ಲಭ್ಯ

Suddi Udaya

ಕೊಯ್ಯೂರು ಸ.ಪ.ಪೂ. ಕಾಲೇಜಿನಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ

Suddi Udaya

ರೂ. 35 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಪಟ್ಟಣ ಪಂಚಾಯತ್ ಕಛೇರಿ ವಿಸ್ತ್ರತ ಕಟ್ಟಡದ ಸಭಾಂಗಣ ಶಾಸಕ ಹರೀಶ್ ಪೂಂಜರಿಂದ ಉದ್ಘಾಟನೆ

Suddi Udaya

ಕುವೆಟ್ಟು ಸ.ಉ.ಹಿ.ಪ್ರಾ. ಶಾಲೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ವತಿಯಿಂದ ಬೆಂಚು-ಡೆಸ್ಕ್ ವಿತರಣೆ

Suddi Udaya
error: Content is protected !!