ಬೆಳಾಲು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಉಜಿರೆ ವಲಯದ, ಬೆಳಾಲು ಕಾರ್ಯಕ್ಷೇತ್ರದ ಕುಕ್ಕೊಟ್ಟು ನಿವಾಸಿ ಮುತ್ತಪ್ಪ ನಾಯ್ಕ್ ರವರಿಗೆ ನಡೆದಾಡಲು ಕಷ್ಟಸಾಧ್ಯವಾಗಿದ್ದು ಇವರಿಗೆ ಸಮುದಾಯ ಅಭಿವೃದ್ಧಿ ವಿಭಾಗದ ಜನಮಂಗಳ ಕಾರ್ಯಕ್ರಮದಡಿಯಲ್ಲಿ ಕಮೋಡ್ ವೀಲ್‌ಚೇರ್‌ಗೆ ಬೇಡಿಕೆ ನೀಡಿದ್ದರು. ಈ ಬೇಡಿಕೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಧರ್ಮಾಧಿಕಾರಿಯವರು ಮಂಜೂರು ಮಾಡಿದ್ದು, ತಾಲೂಕು ಯೋಜನಾಧಿಕಾರಿ ಸುರೇಂದ್ರ ರವರು ವೀಲ್‌ಚೇರ್ ವಿತರಿಸಿದರು.
ಈ ಸಂದರ್ಭದಲ್ಲಿ ಉಜಿರೆ ವಲಯದ ಮೇಲ್ವಿಚಾರಕಿ ವನಿತಾ, ಸೇವಾಪ್ರತಿನಿಧಿ ಪ್ರಮೀಳಾ, ಸೇವಾಪ್ರತಿನಿಧಿ ತಾರನಾಥ, ಬೆಳಾಲು ಒಕ್ಕೂಟದ ಉಪಾಧ್ಯಕ್ಷ ಪ್ರಸಾದ್, ಬೆಳಾಲು ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಸುಕೇಶ್ ಗೌಡ, ಮುತ್ತಪ್ಪ ನಾಯ್ಕ್ ರವರ ಪುತ್ರ ಜಯ, ಪೆರ್ಲ ಬೈಪಾಡಿ ಒಕ್ಕೂಟದ ಪದಾಧಿಕಾರಿಗಳಾದ ದಿನೇಶ್ ಅಡ್ಡಾರು, ಶೀನಪ್ಪ ಫಲಸದಕೋಡಿ ಉಪಸ್ಥಿತರಿದ್ದರು.