ಪುಂಜಾಲಕಟ್ಟೆ: ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ ಆಶ್ರಯದಲ್ಲಿ ನಡೆದ 17 ನೇ ಸಾಮೂಹಿಕ ವಿವಾಹ ಕಾರ್ಯಕ್ರಮದ ಅಂಗವಾಗಿ 2025-26 ನೇ ಸಾಲಿನ ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ ಪ್ರಧಾನ ಹಾಗೂ ಸ್ವಸ್ತಿಕ್ ಸಂಭ್ರಮ ಪುರಸ್ಕಾರ ಸಂದರ್ಭದಲ್ಲಿ ಕುಣಿತ ಭಜನೆಯ ಮೂಲಕ ಧಾರ್ಮಿಕ ಕಾರ್ಯಕ್ರಮಕ್ಕೆ ಭಕ್ತಿಯ ರಂಗು ಚೆಲ್ಲಿ ,ಭಜನಾ ತರಬೇತುದಾರರಾಗಿ , ಭಜನಾ ತಂಡದ ಮಾರ್ಗದರ್ಶಕರಾಗಿರುವ ಸಂದೇಶ ಮದ್ದಡ್ಕ ಇವರಿಗೆ ಧಾರ್ಮಿಕ ಕ್ಷೇತ್ರದಲ್ಲಿ ನೀಡುವ ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಈ ವೇಳೆ ಮಂಗಳೂರು ಅದಾನಿ ಗ್ರೂಪ್ ಅಧ್ಯಕ್ಷ ಕಿಶೋರ್ ಆಳ್ವ ಇವರು ರಾಜ್ಯ ಪ್ರಶಸ್ತಿ ಪ್ರಧಾನ ಮಾಡಿದರು. ಈ ಸಂದರ್ಭದಲ್ಲಿ ಸ್ವಸ್ತಿಕ್ ಫ್ರೆಂಡ್ಸ್ ರಿಜಿಸ್ಟರ್ ಪುಂಜಾಲ್ ಕಟ್ಟೆ ಇದರ ಸ್ಥಾಪಕಾಧ್ಯಕ್ಷ ಎಂ ತುಂಗಪ್ಪ ಬಂಗೇರ, ರಾಜೇಶ್ ನಾಯಕ್ ಉಳಿಪಾಡಿ ಗುತ್ತು, ಶಾಸಕರು ಬಂಟ್ವಾಳ ವಿಧಾನಸಭಾ ಕ್ಷೇತ್ರ, ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ನಾರಾಯಣಶೆಟ್ಟಿ ಕಕ್ಕೆಪದವು ಕಮಲ ನಿವಾಸ ಉದ್ಯಮಿ , ಸಂತೋಷ್ ಕುಮಾರ್ ಜೆ.ಪಿ ಉದ್ಯಮಿ ದೆಹಲಿ, ಸುಂದರ್ ರಾಜ್ ಹೆಗ್ಡೆ, ಬೊಳ್ಮಾರ ಜಯಚಂದ್ರ ಹಾಗೂ ಶ್ರೀಗುರು ನಾರಾಯಣ ವಸತಿ ಶಾಲೆಯ ಪ್ರಾಂಶುಪಾಲರಾದ ಸಂತೋಷ್ ಸನಿಲ್ ಉಪಸ್ಥಿತರಿದ್ದರು.