ಬಳಂಜ: 2023-24ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಬಳಂಜ ಪ್ರೌಢ ಶಾಲೆಯ ವಿದ್ಯಾರ್ಥಿನಿ ಶರಣ್ಯರವರಿಗೆ ಸರ್ಕಾರದ ವತಿಯಿಂದ ಲ್ಯಾಪ್‌ಟಾಪ್ ದೊರಕಿದ್ದು ಬೆಳ್ತಂಗಡಿ ತಾ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್ ಅವರು ಮಾ 17 ರಂದು ಹಸ್ತಾಂತರಿಸಿ ಶುಭ ಕೋರಿದರು.

ಈ ಸಂದರ್ಭದಲ್ಲಿ ಕ್ಷೇತ್ರಶಿಕ್ಷಣಾಧಿಕಾರಿ ತಾರಕೇಸರಿ, ಬಳಂಜ ಪ್ರೌಢ ಶಾಲಾ ಮುಖ್ಯೋಪಾಧ್ಯಾಯರಾದ ಸುಲೋಚನ ಉಪಸ್ಥಿತರಿದ್ದರು.
ಇವರು ಅಳದಂಗಡಿ ಸಿಎ ಬ್ಯಾಂಕ್ ಉಪಶಾಖಾಧಿಕಾರಿ ಸತೀಶ್ ಕೆ ಬರಮೇಲು ಮತ್ತು ಸೌಮ್ಯಲತಾ ಇವರ ಸುಪತ್ರಿ.