37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಗುರುವಾಯನಕೆರೆ : ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಹೊಲಿಗೆ ತರಬೇತಿಯ ಸಮಾರೋಪ ಸಮಾರಂಭ

ಗುರುವಾಯನಕೆರೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಗುರುವಾಯನಕೆರೆ ತಾಲೂಕಿನ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ 3 ತಿಂಗಳ ಕಾಲ ಹೊಲಿಗೆ ತರಬೇತಿಯನ್ನು ಕಣಿಯೂರು ವಲಯದ ಪಿಲಿಗೂಡು ಅಭಿನಂದನ್ ಜ್ಞಾನ ವಿಕಾಸ ಕೇಂದ್ರದಲ್ಲಿ ನಡೆಸಿದ್ದು ಇದರ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಸಲಾಯಿತು.

ಜಿಲ್ಲಾ ನಿರ್ದೇಶಕರು ಮಹಾಬಲ ಕುಲಾಲ್ ಇವರು ಟೈಲರಿಂಗ್ ತರಬೇತಿ ಪಡೆದ ಸದಸ್ಯರು ತಮ್ಮ ಜೀವನದಲ್ಲಿ ವೃತ್ತಿಯನ್ನು ನಿಷ್ಠೆಯಿಂದ ನಡೆಸುವುದು ಹಾಗೂ ಜ್ಞಾನವಿಕಾಸ ಕಾರ್ಯಕ್ರಮದಿಂದ ಮಹಿಳೆಯರ ಸಬಲೀಕರಣ ಆಗಬೇಕು ಎಂಬುವುದು ಮಾತೃಶ್ರೀ ಹೇಮಾವತಿ ಅಮ್ಮನ ಆಶಯ ಎಂದು ಜ್ಞಾನ ವಿಕಾಸ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು.
ಮಹಿಳೆಯರ ಏಳಿಗೆಗಾಗಿ ಜ್ಞಾನವಿಕಾಸ ಕೇಂದ್ರದಡಿಯಲ್ಲಿ ನಡೆದಂತಹ ಹೊಲಿಗೆ ತರಬೇತಿ ಬಹಳಷ್ಟು ಯಶಸ್ವಿಯಾಗಿದೆ ಹಾಗೂ ಕಲಿತ ವಿದ್ಯೆಯನ್ನು ಶ್ರದ್ದೆಯಿಂದ ಜೀವನದಲ್ಲಿ ಅನುಷ್ಠಾನಿಸಬೇಕೆಂದು ಜನಜಾಗೃತಿ ವಲಯಧ್ಯಕ್ಷರಾದ ಪ್ರಫುಲ್ಲ ಚಂದ್ರ ಅಧ್ಯಾಯಣ್ತಯ ಇವರು ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು.

ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಜಾನಕಿ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಹಲವಾರು ಕಾರ್ಯಕ್ರಮಗಳು ಅನುಷ್ಠಾನವಾಗುತ್ತಿರುವ ಬಗ್ಗೆ ಮಾತಾನಾಡಿದರು. ಒಕ್ಕೂಟದ ಉಪಾಧ್ಯಕ್ಷೆ ಶ್ರೀಮತಿ ವೀಣಾ ಶುಭ ಹಾರೈಸಿದರು. ಟೈಲರಿಂಗ್ ಶಿಕ್ಷಕಿ, ಸೇವಾಪ್ರತಿನಿಧಿ ಹಾಗೂ ತರಬೇತಿ ಪಡೆದಿರುವ 32 ಜನ ಸದಸ್ಯರು ಉಪಸ್ಥಿತರಿದ್ದರು.


ಮೂರು ತಿಂಗಳಲ್ಲಿ ಪಡೆದ ತರಬೇತಿಯ ಬಗ್ಗೆ ಅನಿಸಿಕೆಯನ್ನು ಶ್ರೀಮತಿ ಆರೀಫ, ಸೌಮ್ಯ, ಕವಿತ ವ್ಯಕ್ತಪಡಿಸಿದರು.
ತರಬೇತಿ ಪಡೆದ ಸದಸ್ಯರಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಕಾರ್ಯಕ್ರಮವನ್ನು ಶ್ರೀಮತಿ ಪೂರ್ಣಿಮಾ ಜ್ಞಾನ ವಿಕಾಸ ಸಮನ್ವಯಧಿಕಾರಿ ನಿರೂಪಿಸಿದರು.

Related posts

ಬಾರ್ಯ: ಮೂರುಗೋಳಿ ಶ್ರೀ ಪಾಂಡುರಂಗ ಭಜನಾ ಮಂದಿರದ ನೂತನ ಕಟ್ಟಡ ರಚನೆಗೆ ಶ್ರೀ ಕ್ಷೇ.ಧ. ಗ್ರಾ ಯೋಜನೆಯಿಂದ ದೇಣಿಗೆ ಹಸ್ತಾಂತರ

Suddi Udaya

ಕುದ್ಯಾಡಿಗುತ್ತು ಕೃಷ್ಣಮ್ಮ ಅಣ್ಣಿ ಪೂಜಾರಿ ನಿಧನ

Suddi Udaya

ಎಸ್.ಡಿ.ಎಂ ಐಟಿ ಕಾಲೇಜು : ವಿವೇಕ ಜಾಗೃತ ವಿಶೇಷ ಉಪನ್ಯಾಸ ಕಾರ್ಯಕ್ರಮ

Suddi Udaya

ಉಜಿರೆ ಎಸ್.ಡಿ.ಎಂ ಕಾಲೇಜು ದೈಹಿಕ ಶಿಕ್ಷಣ ವಿಭಾಗದಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ

Suddi Udaya

ಬಸ್ಸು ಮತ್ತು ಬೈಕ್ ನಡುವೆ ಭೀಕರ ರಸ್ತೆ ಅಪಘಾತ: ಚಾರ್ಮಾಡಿಯ ಯುವಕ ಸಾವು

Suddi Udaya

ಓಡಿಲ್ನಾಳ ಸ. ಉ. ಪ್ರಾ. ಶಾಲೆಗೆ ನೆರಿಯ ಪೆಟ್ರೋ ನೆಟ್ ಸಂಸ್ಥೆಯಿಂದ ಡಿಜಿಟಲ್ ಪ್ರಾಜೆಕ್ಟರ್ ಹಸ್ತಾಂತರ

Suddi Udaya
error: Content is protected !!