ಕುವೆಟ್ಟು : ಶ್ರೀರಾಮ ಸೇವಾ ಸಮಿತಿ ಮದ್ದಡ್ಕ, ವಿಶ್ವ ಹಿಂದೂ ಪರಿಷತ್ ಬಜರಂಗದಳ ಮದ್ದಡ್ಕ ಇದರ ಆಶ್ರಯದಲ್ಲಿ ಎ. 6 ರoದು ನಡೆಯುವ ಶ್ರೀರಾಮ ನವಮಿ ಉತ್ಸವ ಪ್ರಯುಕ್ತ ನಡೆಯುವ ಭಜನಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಯು ಶ್ರೀರಾಮ ಭಜನಾ ಮಂದಿರದಲ್ಲಿ ಮಾ 17 ರoದು ನಡೆಯಿತು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಭಜರಂಗದಳ ಮದ್ದಡ್ಕ ಘಟಕದ ಅಧ್ಯಕ್ಷ ಗಣೇಶ್ ಶೆಟ್ಟಿ ಅರ್ಕಜೆ, ಕಾರ್ಯದರ್ಶಿ ವಿನೋದ್ ಶೆಣೈ ಮದ್ದಡ್ಕ, ಸಂಚಾಲಕರಾದ ಯಶೋಧರ ಶೆಟ್ಟಿ ಅರ್ಕಜೆ, ಶೇಖರ್ ಶೆಟ್ಟಿ ಉಪ್ಪಡ್ಕ, ಶ್ರೀ ರಾಮ ಸೇವಾ ಸಮಿತಿ ಅಧ್ಯಕ್ಷ ಮನೋಹರ ಕೇದಳಿಕೆ, ಕೋಶಾಧಿಕಾರಿ ಸಚಿನ್ ವರ್ಧನ್, ಉಮೇಶ ಕುಮಾರ್ ಮದ್ಧಡ್ಕ, ರುದೇಶ್ ಕುಮಾರ್, ಸುರೇಶ್ ಕುಲಾಲ್ ಪಾದೆ, ವಿಜಯ ಸಾಲಿಯಾನ್ ಪಣಕಜೆ, ಸ್ವಸ್ತಿಕ್ ಕುದ್ರೆoಜ, ಯೋಗೀಶ್ ಶೆಟ್ಟಿ ಅನಿಲ, .ಹರೀಶ್ ಕೋಟ್ಯಾನ್ ಮದ್ದಡ್ಕ, ಉಪಸ್ಥಿತರಿದ್ದರು.