September 17, 2026
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿ

ಶ್ರೀ. ಧ. ಮಂ. ಪ. ಪೂ.ಕಾಲೇಜಿನಲ್ಲಿ ವಾಣಿಜ್ಯ ಸಂಘ ಉದ್ಘಾಟನೆ

ಉಜಿರೆ : ಶ್ರೀ. ಧ. ಮಂ.ಪ. ಪೂ. ಕಾಲೇಜಿನಲ್ಲಿ ವಾಣಿಜ್ಯ ಸಂಘ ಉದ್ಘಾಟನೆ ಹಾಗೂ ಲೆಕ್ಕ ಪರಿಶೋಧಕರ ದಿನಾಚರಣೆಯನ್ನು ಆಚರಿಸಲಾಯಿತು. ಮಂಗಳೂರು ಪಿರೇರಿಯನ್ ಸರ್ವಿಸಸ್ ನ ಮ್ಯಾನೇಜರ್ ಹಾಗೂ ಕಾಲೇಜಿನ ಹಿರಿಯ ವಿಧ್ಯಾರ್ಥಿನಿ ಸಿ. ಎ. ಸುಕನ್ಯಾ ಕಾಮತ್ ಉದ್ಘಾಟನೆ ನೆರವೇರಿಸಿ ವಿಧ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕೆಂದು ತಿಳಿಸಿದರು.

ಇವರು ಅಯ್ಕೆಯ ವಿಷಯದಲ್ಲಿ ಇತರ ವಿಧ್ಯಾರ್ಥಿಗಳ ಆಯ್ಕೆಯನ್ನು ಸ್ವೀಕರಿಸುವುದಕ್ಕಿಂತ ತಮಗೆ ಸಮಂಜಸವಾದ ಅಯ್ಕೆಯನ್ನು ಸ್ವೀಕರಿಸಬೇಕು. ವಿದ್ಯಾರ್ಥಿಗಳು ಕಾಲೇಜಿನಲ್ಲಿ ಸಿಗುವ ಎಲ್ಲಾ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಬೆಳೆಯಬೇಕು. ಇಂದು ವಾಣಿಜ್ಯ ವಿದ್ಯಾರ್ಥಿಗಳಿಗೆ ಹಲವಾರು ವ್ಯತ್ತಿ ಅವಕಾಶಗಳಿವೆ ಆದರೆ ಕೌಶಲ್ಯಕ್ಕೆ ಮಹತ್ವ ನೀಡಿದರೆ ಮಾತ್ರ ಎಷ್ಟು ಎತ್ತರಕ್ಕೂ ಬೆಳೆಯಬಹುದು ಎಂದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಫ್ರೊಪೆಸರ್ ಪ್ರಮೋದ್ ಕುಮಾರ್ ವಹಿಸಿದ್ದರು. ಇದರು ಬಡತನದಿಂದ ಮೇಲೆ ಬಂದು ವ್ಯತ್ತಿಯಿಂದ ಶೇರು ಮಾರುಕಟ್ಟೆಯನ್ನು ಆಳಿದ ಹಲವಾರು ಶ್ರೀಮಂತರ ಸಾಹಸಗಾತೆಯನ್ನು ವಿವರಿಸಿ ವಿಧ್ಯಾರ್ಥಿಗಳಿಗೆ ಶುಭ ಹಾರೈಸಿದರು.


ಕಾರ್ಯಕ್ರಮದಲ್ಲಿ ವಿಭಾಗ ಮುಖ್ಯಸ್ಥೆ ಬೇಬಿ ಎನ್. ಸಂಯೋಜಕಿ ಸವಿತ ಉಪನ್ಯಾಸಕಿಯರಾದ ಪ್ರಭಾವತಿ, ಶೋಭ ಹಾಗೂ ಅಶ್ವಿನಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವಿಧ್ಯಾರ್ಥಿನಿ ಅನಿಕ ತಂಡ ಪ್ರಾರ್ಥಿಸಿ ಸಂಘದ ಅಧ್ಯಕ್ಷ ಧರ್ಮತೇಜ ಸ್ವಾಗತಿಸಿ ಕಾರ್ಯದರ್ಶಿ ಸಿರಿ ಧನ್ಯವಾದ ನೀಡಿದರು. ವಿದ್ಯಾರ್ಥಿನಿಯರಾದ ಹಂಸಿನಿ ಭಿಡೆ ಹಾಗೂ ಅಂಶುಲಾ ಕಾರ್ಯಕ್ರಮ ನಿರೂಪಿಸಿದರು.

Related posts

ಅರಸಿನಮಕ್ಕಿ ಸರಕಾರಿ ಪ್ರೌಢ ಶಾಲೆಗೆ ಶೇ. 86.84 ಫಲಿತಾಂಶ

Suddi Udaya

ಶಾಲೆತಡ್ಕ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಸ್ಥಾನಕ್ಕೆ ಸಹಕಾರ ಭಾರತಿ ಅಭ್ಯರ್ಥಿಗಳ ಅವಿರೋಧ ಆಯ್ಕೆ

Suddi Udaya

ಬಿಲ್ಲವ ಫ್ಯಾಮಿಲಿ‌ ದುಬೈ ವತಿಯಿಂದ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಪೀತಾಂಬರ ಹೇರಾಜೆಯವರಿಗೆ ಗೌರವ ಸನ್ಮಾನ

Suddi Udaya

ನಡ ಸರಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿ ಸಂಘದ ಉದ್ಘಾಟನೆ

Suddi Udaya

ಇಳoತಿಲ: ನಾಯಿಮಾರು ನಿವಾಸಿ ವಾರಿಜಾ ನಿಧನ

Suddi Udaya

ಕೂಟ ಮಹಾ ಜಗತ್ತು ಬೆಳ್ತಂಗಡಿ ಅಂಗ ಸಂಸ್ಥೆಯ ವಾರ್ಷಿಕ ಕ್ರೀಡಾಕೂಟ ಮತ್ತು ಕ್ಯಾಲೆಂಡರ್ ಬಿಡುಗಡೆ

Suddi Udaya
error: Content is protected !!