ಬೆಳ್ತಂಗಡಿ: ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿ ಇವರು ಆಗಸ್ಟ್/ ಸಪ್ಟೆಂಬರ್ 2021 ರಿಂದ ಜೂನ್/ಜುಲೈ 2024 ವರ್ಷದಲ್ಲಿ ನಡೆಸಿದ ಬ್ಯಾಚುಲರ್ ಆಫ್ ಆಡಿಯೋಲೊಜಿ ಮತ್ತು ಸ್ಪೀಚ್ ಲ್ಯಾಂಗ್ ವೇಜ್ ಪಥಾಲೊಜಿ ಪರೀಕ್ಷೆಯಲ್ಲಿ ಮಂಗಳೂರಿನ ಫಾ| ಮುಲ್ಲರ್ ಮೆಡಿಕಲ್ ಕಾಲೇಜಿನ ಕು. ಜೆನಿನ್ ಡಿಸೋಜರವರು ಅತ್ಯಧಿಕ ಅಂಕ ಗಳಿಸಿ ಮೂರನೇ ರ್‍ಯಾಂಕ್ ಪಡೆದಿರುತ್ತಾರೆ.
ಇವರು ಪ್ರಸುತ್ತ ಫಾ| ಮುಲ್ಲರ್ ಮೆಡಿಕಲ್ ಕಾಲೇಜಿನಲ್ಲಿ ಮಾಸ್ಟರ್‍ಸ್ ಇನ್ ಸ್ಪೀಚ್ ಲ್ಯಾಂಗ್ ವೇಜ್ ಪಥಾಲೊಜಿ (ಎಮ್.ಎಸ್ಸಿ) ಅಧ್ಯಯನ ಮಾಡಿರುತ್ತಾರೆ.
ಇವರು ಮಾಲಾಡಿ ಗ್ರಾಮದ ಜೋಕಿಂ ಡಿಸೋಜ ಹಾಗೂ ಶ್ರೀಮತಿ ವಿನ್ನಿ ಲೋಬೊ ದಂಪತಿಯ ಪುತ್ರಿಯಾಗಿದ್ದು, ಮಡಂತ್ಯಾರು ಸೆಕ್ರೇಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ಹಳೆಯ ವಿದ್ಯಾರ್ಥಿ.