ರೆಖ್ಯ : ಇಲ್ಲಿಯ ಕೊಲಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಳೆಗಾಲದಲ್ಲಿ ಜರಿದು ಬಿದ್ದ ಗುಡ್ಡದ ಮಣ್ಣು ತೆರವುಗೊಳಿಸಲು ಶಾಸಕ ಹರೀಶ್ ಪೂಂಜ ಇವರ ಸೂಚನೆಯಂತೆ ಗುತ್ತಿಗೆದಾರರಾದ ದಿಶಂತ್ ಕುಮಾರ್ ಇವರು ಮಣ್ಣು ತೆರವು ಕಾರ್ಯ ಪ್ರಾರಂಭಿಸಿದರು.


ದಿನಾಂಕ 30-07-2024 ರಾತ್ರಿ ಸುರಿದ ಭಾರಿ ಮಳೆಗೆ ಬೃಹತ್ ಗಾತ್ರದ ಗುಡ್ಡ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸುತ್ತು ಗೋಪುರ ಮತ್ತು ದೇವಸ್ಥಾನ ಗರ್ಭ ಗುಡಿಯವರೆಗೆ ಮಣ್ಣು ಬಂದಿತ್ತು ಭಕ್ತರಲ್ಲಿ ಮತ್ತು ಗ್ರಾಮಸ್ಥರಲ್ಲಿ ಬಾರಿ ಆತಂಕ ಮೂಡಿತ್ತು. ಶಾಸಕರು ಮಳೆಗಾಲದಲ್ಲಿ ಕೊಟ್ಟ ಮಾತಿನಂತೆ ಮಣ್ಣು ತೆರವುಗೊಳಿಸಲು ಪ್ರಾರಂಭ ಮಾಡಿರುವುದು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಅರಿಸಿನಮಕ್ಕಿ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ನವೀನ್ ರೆಖ್ಯ, ದೇವಸ್ಥಾನ ಸಮಿತಿಯ ಲಕ್ಷ್ಮಣ
ಗೌಡ ಕನ್ನಯಂಡ, ರವಿಂದ್ರ ಗೌಡ ಕೊಲಾರು ಮುಂತಾದವರು ಉಪಸ್ಥಿತರಿದ್ದರು.