ಕಾಶಿಪಟ್ಣ: ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ, ಇಲ್ಲಿಯ ಕುಜಂಬೆ ಮನೆ ನಿವಾಸಿ ವಿಲ್ಪ್ರೇಡ್ ಫೆರ್ನಾಂಡಿಸ್ (51ವ) ಎಂಬವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಮಾ.18ರಂದು ವರದಿಯಾಗಿದೆ.
ಇವರು ಸುಮಾರು 3-4 ವರ್ಷಗಳಿಂದ ಮಾನಸಿಕ ಖಿನ್ನತೆಗೆ ಒಳಪಟ್ಟು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮಾ.೧೪ರಂದು ಬೆಳಿಗ್ಗೆ ತಮ್ಮ ಮನೆಯ ಸಮೀಪದ ತೋಟದಲ್ಲಿ ಲವಂಗ ಮರದ ರೆಂಬೆಗೆ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದು, ಕೂಡಲೇ ಅವರ ಸಹೋದರ ಕ್ಲಿಫರ್ಡ್ ಫೆರ್ನಾಂಡಿಸ್ ಹಾಗೂ ಕೆಲಸದಾಳು ಹರೀಶ್ ಶೆಟ್ಟಿ ಎಂಬವರು ಓಡಿ ಹೋಗಿ ಹಗ್ಗವನ್ನು ತುಂಡರಿಸಿ ಅವರನ್ನು ಉಪಚರಿಸಿ ಮೂಡಬಿದ್ರೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮಾ.18ರಂದು ಮೃತಪಟ್ಟರೆನ್ನಲಾಗಿದೆ. ಈ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
next post