ಬೆಳ್ತಂಗಡಿ: ಉಜಿರೆ ಪ್ರೇರಣಾ ಸಂಜೀವಿನಿ ಮಹಿಳಾ ಒಕ್ಕೂಟದ ಮಹಾಸಭೆ ಒಕ್ಕೂಟ ಅಧ್ಯಕ್ಷೆ ಶೀಲಾವತಿ ಅಧ್ಯಕ್ಷತೆಯಲ್ಲಿ ಮಾ.18 ರಂದು ಉಜಿರೆ ಗ್ರಾ.ಪಂ.ನಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾ.ಪಂ.ಅಧ್ಯಕ್ಷೆ ಉಷಾಕಿರಣ್ ಕಾರಂತ್, ಸಂಜೀವಿನಿ ಮಹಿಳೆಯರು ಸರಕಾರದ ಸೌಲಭ್ಯಗಳನ್ನು ಬಳಸಿಕೊಂಡು ಸಶಕ್ತರಾಗಿ ಸಮಾಜಕ್ಕೆ ಮಾದರಿಯಾಗಬೇಕು ಎಂದು ಹೇಳಿದರು. ಮಹಿಳಾ ದಿನಾಚರಣೆಯ ಸಲುವಾಗಿ ಒಕ್ಕೂಟದ ಸದಸ್ಯರಿಗೆ ವಿವಿಧ ಸ್ಪರ್ಧೆ ಏರ್ಪಡಿಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ ಸಂಜೀವಿನಿ ಒಕ್ಕೂಟದ ಕಾರ್ಯ ಚಟುವಟಿಕೆಗಳಿಗೆ ಗ್ರಾ.ಪಂ.ನ ಬೆಂಬಲವನ್ನು ವ್ಯಕ್ತಪಡಿಸಿದರು.
ನೂತನ ಪದಾಧಿಕಾರಿಗಳ ಆಯ್ಕೆ ನಡೆದು, ಒಕ್ಕೂಟದ ನೂತನ ಅಧ್ಯಕ್ಷರಾಗಿ ವಿನುತ ರಜತ್ ಗೌಡ, ಉಪಾಧ್ಯಕ್ಷರಾಗಿ ಲೀಲಾ ಶೆಟ್ಟಿ, ಕಾರ್ಯ ದರ್ಶಿಯಾಗಿ ದೀಪಾ, ಜತೆ ಕಾರ್ಯದರ್ಶಿಯಾಗಿ ಅಶ್ವಿನಿ ಮತ್ತು ಕೋಶಧಿಕಾರಿಯಾಗಿ ಶಾಂಭವಿ ಆಯ್ಕೆಯಾದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷ ರವಿ ಕುಮಾರ್, ಕಾರ್ಯದರ್ಶಿ ಶ್ರವಣ್ ಹಾಗೂ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಂಜೀವಿನಿ ವಲಯ ಮೇಲ್ವಿಚಾರಕ ಜಯಾನಂದ ಹಾಗೂ ಅಧ್ಯಕ್ಷೆ ಶೀಲಾರನ್ನು ಸನ್ಮಾನಿಸಲಾಯಿತು.
ಎಂಬಿಕೆ ಸುಜಾತ ವರದಿ ವಾಚಿಸಿದರು. ಸುಮಿತ್ರಾ ಪ್ರಾರ್ಥಿಸಿ, ಕೃಷಿ ಸಖಿ ಭಾಗೀರಥಿ ಸ್ವಾಗತಿಸಿ, ಎಲ್‌ಸಿಆರ್‌ಪಿ ಚಿತ್ರಾ ವಂದಿಸಿ, ಕಾರ್ಯದರ್ಶಿ ರೇವತಿ ನಿರೂಪಿಸಿದರು.