ಬೆಳ್ತಂಗಡಿ: ವಿದ್ಯಾರ್ಥಿನಿಯೊಬ್ಬಳಿಗೆ ಪರಿಚಯಸ್ಥ ವೇಣೂರು ಶಿವಾಜಿನಗರ ಕಾಲೋನಿ ನಿವಾಸಿ ಆಸ್ಟಕ್ (27) ಎಂಬಾತ ಮಾ. 19ರಂದು ಮೂಡುಬಿದ್ರೆಯಿಂದ ವೇಣೂರಿಗೆ ಬಸ್ಸಿನಲ್ಲಿ ಬರುವಾಗ ಆಕೆ ಕುಳಿತಿದ್ದ ಸೀಟಿನ ಬಳಿ ನಿಂತು ಅವಾಚ್ಯ ಶಬ್ದಗಳಿಂದ ನಿಂದಿಸಿ, ಬ್ಯಾಗ್ ಎಳೆದು ತೊಂದರೆ ನೀಡಿರುವ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ
ಘಟನೆ ವಿವರ: ವೇಣೂರು ನಿವಾಸಿ ಆಸ್ಪಕ್ ಎಂಬಾತನು ವಿದ್ಯಾರ್ಥಿಯಲ್ಲಿ ಹೆಚ್ಚಾಗಿ ಕಾಣ ಸಿಕ್ಕಿದವನು ಮಾತನಾಡುತ್ತಿದ್ದು ಆತಾನ ವರ್ತನೆ ಸರಿಯಿಲ್ಲದ ಕಾರಣ ವಿದ್ಯಾರ್ಥಿ ಸುಮಾರು 6 ತಿಂಗಳಿನಿಂದ ಆತನಲ್ಲಿ ಮಾತನಾಡುವುದನ್ನು ಬಿಟ್ಟಿದ್ದರೂ ಕೂಡ ಆತನು ಆಕೆ ಕಾಲೇಜಿಗೆ ಹೋಗುವ ಸಮಯ ಆಕೆಯನ್ನು ಹಿಂಬಾಲಿಸುತ್ತಿದ್ದು ಈ ವಿಚಾರವನ್ನು ವಿದ್ಯಾರ್ಥಿ ಅವರ ಮನೆಯಲ್ಲಿ ತಿಳಿಸಿದ್ದು ಆಕೆಯ ಮನೆಯವರು ಆತನಲ್ಲಿ ಆಕೆಯನ್ನು ಹಿಂಬಾಲಿಸದಂತೆ ಬುದ್ದಿ ಮಾತು ಕೂಡ ಹೇಳಿರುತ್ತಾರೆ.
ಮಾ. 19 ರಂದು ವಿದ್ಯಾರ್ಥಿನಿ ಕಾಲೇಜಿಗೆ ಹೋದವರು ಸಂಜೆ ವೇಳೆ ಬಸ್ಸಿನಲ್ಲಿ ವೇಣೂರಿಗೆ ಬರುವರೇ ಮೂಡಬಿದ್ರೆಯಿಂದ ಬಸ್ ಹತ್ತಿದ ಸಮಯ ಆಸ್ಪಕ್ ಕೂಡ ಆಕೆಯನ್ನು ಹಿಂಬಾಲಿಸಿ ಅದೇ ಬಸ್ ಹತ್ತಿ ಆಕೆಯು ಕುಳಿತುಕೊಂಡ ಸೀಟ್ ನ ಬಳಿ ನಿಂತುಕೊಂಡಿದ್ದು , ಬಸ್ ಹೊಸಂಗಡಿ ಗ್ರಾಮದ ಕುರ್ಲೊಟ್ಟು ಎಂಬಲ್ಲಿಗೆ ತಲುಪಿದ ವೇಳೆ ಆಸ್ಪಕನು ವಿದ್ಯಾರ್ಥಿಯನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಕಾಲೇಜ್ ಬ್ಯಾಗ್ ಎಳೆದು ತೊಂದರೆ ನೀಡಿರುತ್ತಾನೆ ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.