24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ವಿದ್ಯಾರ್ಥಿನಿಗೆ ಅವಾಚ್ಯ ಶಬ್ದಗಳಿಂದ ನಿಂದನೆ : ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಬೆಳ್ತಂಗಡಿ: ವಿದ್ಯಾರ್ಥಿನಿಯೊಬ್ಬಳಿಗೆ ಪರಿಚಯಸ್ಥ ವೇಣೂರು ಶಿವಾಜಿನಗರ ಕಾಲೋನಿ ನಿವಾಸಿ ಆಸ್ಟಕ್ (27) ಎಂಬಾತ ಮಾ. 19ರಂದು ಮೂಡುಬಿದ್ರೆಯಿಂದ ವೇಣೂರಿಗೆ ಬಸ್ಸಿನಲ್ಲಿ ಬರುವಾಗ ಆಕೆ ಕುಳಿತಿದ್ದ ಸೀಟಿನ ಬಳಿ ನಿಂತು ಅವಾಚ್ಯ ಶಬ್ದಗಳಿಂದ ನಿಂದಿಸಿ, ಬ್ಯಾಗ್ ಎಳೆದು ತೊಂದರೆ ನೀಡಿರುವ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ

ಘಟನೆ ವಿವರ: ವೇಣೂರು ನಿವಾಸಿ ಆಸ್ಪಕ್‌ ಎಂಬಾತನು ವಿದ್ಯಾರ್ಥಿಯಲ್ಲಿ ಹೆಚ್ಚಾಗಿ ಕಾಣ ಸಿಕ್ಕಿದವನು ಮಾತನಾಡುತ್ತಿದ್ದು ಆತಾನ ವರ್ತನೆ ಸರಿಯಿಲ್ಲದ ಕಾರಣ ವಿದ್ಯಾರ್ಥಿ ಸುಮಾರು 6 ತಿಂಗಳಿನಿಂದ ಆತನಲ್ಲಿ ಮಾತನಾಡುವುದನ್ನು ಬಿಟ್ಟಿದ್ದರೂ ಕೂಡ ಆತನು ಆಕೆ ಕಾಲೇಜಿಗೆ ಹೋಗುವ ಸಮಯ ಆಕೆಯನ್ನು ಹಿಂಬಾಲಿಸುತ್ತಿದ್ದು ಈ ವಿಚಾರವನ್ನು ವಿದ್ಯಾರ್ಥಿ ಅವರ ಮನೆಯಲ್ಲಿ ತಿಳಿಸಿದ್ದು ಆಕೆಯ ಮನೆಯವರು ಆತನಲ್ಲಿ ಆಕೆಯನ್ನು ಹಿಂಬಾಲಿಸದಂತೆ ಬುದ್ದಿ ಮಾತು ಕೂಡ ಹೇಳಿರುತ್ತಾರೆ.

ಮಾ. 19 ರಂದು ವಿದ್ಯಾರ್ಥಿನಿ ಕಾಲೇಜಿಗೆ ಹೋದವರು ಸಂಜೆ ವೇಳೆ ಬಸ್ಸಿನಲ್ಲಿ ವೇಣೂರಿಗೆ ಬರುವರೇ ಮೂಡಬಿದ್ರೆಯಿಂದ ಬಸ್‌ ಹತ್ತಿದ ಸಮಯ ಆಸ್ಪಕ್‌ ಕೂಡ ಆಕೆಯನ್ನು ಹಿಂಬಾಲಿಸಿ ಅದೇ ಬಸ್‌ ಹತ್ತಿ ಆಕೆಯು ಕುಳಿತುಕೊಂಡ ಸೀಟ್‌ ನ ಬಳಿ ನಿಂತುಕೊಂಡಿದ್ದು , ಬಸ್‌ ಹೊಸಂಗಡಿ ಗ್ರಾಮದ ಕುರ್ಲೊಟ್ಟು ಎಂಬಲ್ಲಿಗೆ ತಲುಪಿದ ವೇಳೆ ಆಸ್ಪಕನು ವಿದ್ಯಾರ್ಥಿಯನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಕಾಲೇಜ್‌ ಬ್ಯಾಗ್‌ ಎಳೆದು ತೊಂದರೆ ನೀಡಿರುತ್ತಾನೆ ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಶಿಬಾಜೆ ಓಂಕಾರ ಸಂಜೀವಿನಿ ಮಹಿಳಾ ಒಕ್ಕೂಟದ ವಾರ್ಷಿಕ ಮಹಾಸಭೆ

Suddi Udaya

ವೇಣೂರು ವಿದ್ಯಾನಗರ ಬಳಿ ಲೂಯಿಸ್ ರವರ ಮನೆಯ ಕಾಂಪೌಂಡ್ ಕುಸಿತ

Suddi Udaya

ಬೆಳ್ತಂಗಡಿ ಲಿಯೋ ಕ್ಲಬ್ ಗೆ ‘ಉದಯೋನ್ಮುಖ ನಕ್ಷತ್ರ’ ಅವಾರ್ಡ್

Suddi Udaya

ಮೇಲಂತಬೆಟ್ಟು ನಿವಾಸಿ ಮಲ್ಲಿಕ್ ನಿಧನ

Suddi Udaya

ಪುಂಜಾಲಕಟ್ಟೆ: ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಲಯನ್ಸ್ ಕ್ಲಬ್ ನ ಸುವರ್ಣ ಸೇವಾ ಸಂಭ್ರಮ

Suddi Udaya

ನಗರಗಳಲ್ಲಿ ಬಿ -ಖಾತಾ ಆಂದೋಲನ: ಜನರ ಕಣ್ಣೊರೆಸುವ ತಂತ್ರ, ಖಜಾನೆ ತುಂಬಿಸುವ ಒಳತಂತ್ರ: ಬೆಳ್ತಂಗಡಿ ಪ.ಪಂ. ಅಧ್ಯಕ್ಷ ಜಯಾನಂದ ಗೌಡ ಟೀಕೆ

Suddi Udaya
error: Content is protected !!