ಉಜಿರೆ: ಇಲ್ಲಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ವಾರ್ಷಿಕೋತ್ಸವ 2024-25 ಕಾರ್ಯಕ್ರಮವು ಮಾ.21 ರಂದು ನಡೆಯಿತು.
ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿ ಸುರತ್ಕಲ್ ಎಸ್.ಐ.ಟಿ.ಕೆ. ನಿರ್ದೇಶಕ ಪ್ರೊ. ಬಿ. ರವಿ ರವರು ಚಿಗುರು ಅನಾವರಣಗೊಳಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ವೇದಿಕೆಯಲ್ಲಿ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಹರ್ಷೇಂದ್ರ ಕುಮಾರ್, ಡಾ. ಸತೀಶ್ಚಂದ್ರ ಎಸ್.ಎಸ್., ಎಸ್.ಎನ್. ಕಾಕತ್ಕರ್, ಕುಮಾರ್ ಹೆಗ್ಡೆ, ಶಾಂತಿ ಪ್ರಸಾದ್, ಡಾ. ಶಲೀಫ್, ರಾಮಚಂದ್ರ ಪುರೋಹಿತ್, ತುಕಾರಾಂ ಸಾಲ್ಯಾನ್, ಸದಾನಂದ ಮುಂಡಾಜೆ, ವಿದ್ಯಾರ್ಥಿ ನಾಯಕರುಗಳು ಉಪಸ್ಥಿತರಿದ್ದರು.
ನಿವೃತ್ತ ಬೋಧಕ-ಬೋಧಕೇತರ ಸಿಬ್ಬಂದಿಗಳಿಗೆ, ರ್ಯಂಕ್ ವಿಜೇತರಿಗೆ, ಪಿ.ಹೆಚ್. ಪದವೀಧರರಿಗೆ, ವಿಶೇಷ ಸಾಧಕ ಅಧ್ಯಾಪಕರಿಗೆ ಗೌರವಿಸಲಾಯಿತು. ವಿಶೇಷ ಸಾಧಕ ವಿದ್ಯಾರ್ಥಿಗಳಿಗೆ ಹಾಗೂ ಕ್ರೀಡಾ ವಿಭಾಗದ ಸಾಧಕರಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಹೇಮಾವತಿ ವೀ. ಹೆಗ್ಗಡೆ, ಸೋನಿಯಾ ಯಶೋವರ್ಮ, ಪೂರನ್ ವರ್ಮಾ, ಉಪನ್ಯಾಸಕ ವೃಂದದವರು, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.
ಕಾಲೇಜು ಪ್ರಾಂಶುಪಾಲ ಪ್ರೊ. ವಿಶ್ವನಾಥ ಪಿ. ಸ್ವಾಗತಿಸಿದರು. ಕಾಲೇಜು ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಉಪಪ್ರಾಂಶುಪಾಲರಾದ ಶ್ರೀಮತಿ ನಂದಾಕುಮಾರಿ ವರದಿ ವಾಚಿಸಿದರು. ಪ್ರೊ. ಶ್ರೀಧರ ಎನ್. ಭಟ್ಟ, ಡಾ. ನೆಫಿಸತ್ ನಿರೂಪಿಸಿದರು.