23 C
ಪುತ್ತೂರು, ಬೆಳ್ತಂಗಡಿ
May 7, 2025
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಶ್ರೀ ಗುರುದೇವ ಕಾಲೇಜಿನಲ್ಲಿ ಪದ್ಮನಾಭ ಮಾಣಿಂಜರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ

ಬೆಳ್ತಂಗಡಿ : ‘ಪದ್ಮನಾಭ ಮಾಣಿಂಜರ ದಕ್ಷತೆ, ಪ್ರಾಮಾಣಿಕತೆ, ಶಿಸ್ತು ಎಲ್ಲರಿಗೂ ಅದರ್ಶವಾದುದು. ಅವರಿಗೆ ಬಡವರ ಬಗೆಗೆ ಅಪಾರ ಕಾಳಜಿ ಇತ್ತು. ಬಡತನದ ನೋವನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದ ಕಾರಣಕ್ಕಾಗಿಯೇ ಅವರು ಗುರುದೇವ ವಿದ್ಯಾ ಸಂಸ್ಥೆಯ ಪ್ರೇರಣಾ ಶಕ್ತಿಯಾಗಿದ್ದರು’ ಎಂದು ಶ್ರೀ ಗುರುದೇವ ಎಜುಕೇಶನಲ್ ಟ್ರಸ್ಟ್ ನ ಸದಸ್ಯರಾದ ಪ್ರೀತಿತಾ ಧರ್ಮ ವಿಜೇತ್ ಹೇಳಿದರು.

ಅವರು ಶುಕ್ರವಾರ ಬೆಳ್ತಂಗಡಿ ಶ್ರೀ ಗುರುದೇವ ಕಾಲೇಜಿನಲ್ಲಿ ಈಚೆಗೆ ನಿಧನರಾದ, ಶ್ರೀ ಗುರುದೇವ ಎಜುಕೇಶನಲ್ ಟ್ರಸ್ಟ್ ಇದರ ಉಪಾಧ್ಯಕ್ಷ ಪದ್ಮನಾಭ ಮಾಣಿಂಜರಿಗೆ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ನುಡಿನಮನ ಸಲ್ಲಿಸಿ ಮಾತನಾಡಿದರು.

‘ಒಂದು ವರ್ಷದ ಅವಧಿಯಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಉಪಾಧ್ಯಕ್ಷರಾಗಿದ್ದ ಕೆ ವಸಂತ ಬಂಗೇರ ಮತ್ತು ಪದ್ಮನಾಭ ಮಾಣಿಂಜ ಎಂಬ ಸಂಸ್ಥೆಯ ಎರಡು ಆಧಾರ ಕಂಬಗಳನ್ನು ಕಳೆದುಕೊಂಡಿದ್ದೇವೆ. ಮಾಣಿಂಜರು ಕಾಲೇಜಿನ ಕಡೆಗೆ ಹೆಚ್ಚಾಗಿ ಬಾರದೇ ಇದ್ದರೂ ಕಾಲೇಜಿನ ಬಗೆಗೆ ಅಪಾರ ಪ್ರೀತಿಯನ್ನು ಬೆಳೆಸಿಕೊಂಡಿದ್ದರು. ಜನ ಸಾಮಾನ್ಯರ ಬಗ್ಗೆ, ಬಡವರ ಬಗ್ಗೆ ಅವರಿಗಿದ್ದ ಕಾಳಜಿ ಅಪಾರವಾದುದು. ಮಿತಭಾಷಿಯಾಗಿದ್ದ ಅವರು ತನ್ನ ಕರ್ತವ್ಯದ ಬಗ್ಗೆ ಅಪಾರ ಶ್ರದ್ಧೆ ಬೆಳೆಸಿಕೊಂಡಿದ್ದರು. ಆಡಳಿತಾತ್ಮಕ ವಿಚಾರದಲ್ಲಿ ಅವರ ಅನುಭವ ಅನನ್ಯವಾದುದು’ ಎಂದರು.

ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ಸವಿತಾ ಮಾತನಾಡಿ, ‘ಪದ್ಮನಾಭ ಮಾಣಿಂಜರ ಕಾರ್ಯದಕ್ಷತೆ ಅದರ್ಶಯುತವಾದುದು. ಮಾಡುವ ಯಾವುದೇ ಕೆಲಸದಲ್ಲಿ ಪ್ರಾಮಾಣಿಕತೆ ಬೆಳೆಸಿಕೊಳ್ಳಬೇಕು ಎಂಬುದು ಅವರ ನಿಲುವಾಗಿತ್ತು. ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾಗಿ ತನ್ನ ಅಧಿಕಾರದ ಅವಧಿಯಲ್ಲಿ ಸಂಘದ ವತಿಯಿಂದ ಸುಮಾರು ₹ 20 ಲಕ್ಷ ಅಧಿಕವಾದ ವಿದ್ಯಾರ್ಥಿ ವೇತನ ನೀಡಿ ವಿದ್ಯಾರ್ಥಿಗಳಿಗೆ ಮತ್ತು ಸಂಸ್ಥೆಗೆ ನೆರವಾಗುವ ಕಾರ್ಯವನ್ನು ಮಾಡಿದ್ದರು’ ಎಂದರು.

ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಬಿ. ಎ. ಸಮೀವುಲ್ಲಾ ಮಾತನಾಡಿ, ‘ಕಾಲೇಜಿನ ಆರಂಭದಲ್ಲಿ ಅವರ ಕಾಣಿಕೆ ಅಪಾರವಾದುದು. ಯಾವುದೇ ವಿಚಾರದಲ್ಲಿ ಸ್ಪಷ್ಟ ನಿಲುವು ಬೆಳೆಸಿಕೊಂಡವರು ಅವರು. ಕಾಲೇಜನ್ನು ಜಿಲ್ಲೆಯಲ್ಲಿ ಒಂದು ಮಾದರಿ ಕಾಲೇಜು ಮಾಡಬೇಕು ಎಂಬುದು ಅವರ ಕನಸಾಗಿತ್ತು’ ಎಂದರು

ಉಪನ್ಯಾಸಕರಾದ ಹರೀಶ್ ಪೂಜಾರಿ, ರಾಕೇಶ್ ಕುಮಾರ್ ಮಾತನಾಡಿದರು.

ಪದ್ಮನಾಭ ಮಾಣಿಂಜರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.
ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಇದ್ದರು.

ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುಕೇಶ್ ಕುಮಾರ್ ಸ್ವಾಗತಿಸಿ, ಪದವಿ ಕಾಲೇಜಿನ ಕನ್ನಡ ಉಪನ್ಯಾಸಕ ಸತೀಶ್ ವಂದಿಸಿದರು.

Related posts

ಇಂದಬೆಟ್ಟು ದೇವನಾರಿ ಶ್ರೀ ಅರ್ಧನಾರೀಶ್ವರ ದೇವಸ್ಥಾನಕ್ಕೆ ನುಗ್ಗಿದ್ದ ಕಳ್ಳ

Suddi Udaya

ಬಂಗಾಡಿ ಶ್ರೀ ಹಾಡಿ ದೈವ ದೈವಸ್ಥಾನ:ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಬಿ.ಎಸ್ ಮುಕುಂದ ಸುವರ್ಣ

Suddi Udaya

ಹುಣ್ಸೆಕಟ್ಟೆ ಸಮುದಾಯ ಭವನದಲ್ಲಿ ಸರ್ಪಸಂಸ್ಕಾರ ಮತ್ತು ಆಶ್ಲೇಷಾ ಬಲಿ ಪೂಜೆ

Suddi Udaya

ಸೆ.10: ಗುರುವಾಯನಕೆರೆ ಎಕ್ಸೆಲ್ ಪ. ಪೂ. ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಗುರುನಮನ: ಎಕ್ಸೆಲ್ ನ ವಿದ್ಯಾರ್ಥಿಗಳ ಪಾಲಕರಾದ 272 ಶಿಕ್ಷಕರಿಗೆ ಗೌರವಾರ್ಪಣೆ

Suddi Udaya

ವೇಣೂರು: ಅಕ್ರಮವಾಗಿ ಗಾಂಜಾ ಸಾಗಾಟ,ಆರೋಪಿ ಬಂಧನಮೋಟಾರ್ ಸೈಕಲ್ ಹಾಗೂ ರೂ. 37 ಸಾವಿರದ 500 ಗ್ರಾಂ ಗಾಂಜಾ ವಶ ಪೋಲಿಸ್ ವೃತ್ತ ನಿರೀಕ್ಷಕ ಶಿವಕುಮಾರ ಬಿ ರವರ ನೇತೃತ್ವದಲ್ಲಿ ಕಾರ್ಯಾಚರಣೆ

Suddi Udaya

ಕಾಶಿಪಟ್ಣ ಗ್ರಾ.ಪಂ. ನಲ್ಲಿ ಮಹಿಳಾ ಗ್ರಾಮ ಸಭೆ ಮತ್ತು ಉದ್ಯೋಗ ಖಾತರಿ ಯೋಜನೆಯ ಕ್ರಿಯಾ ಯೋಜನೆ ವಿಶೇಷ ಗ್ರಾಮ ಸಭೆ

Suddi Udaya
error: Content is protected !!