ಕುವೆಟ್ಟು: ಪಿಲಿಚಾಮುಂಡಿಕಲ್ಲು ಮತ್ತು ಗುರುವಾಯನಕೆರೆ ಶಾಲೆ ಬಳಿ ವಾಹನ ದಟ್ಟನೆ ಅಧಿಕವಾಗಿದ್ದು ವಿದ್ಯಾರ್ಥಿಗಳು ರಸ್ತೆ ದಾಟಲು ಹರಸಹಾಸ ಪಡುತ್ತಿದ್ದಾರೆ. ಸದ್ರಿ ಸ್ಥಳದಲ್ಲಿ ಬ್ಯಾರೀಕೆಟ್ ಇದ್ದರೂ ಅಳವಡಿಸಲು ಪೊಲೀಸ್ ಇಲಾಖೆ ಅನುಮತಿ ನೀಡುತ್ತಿಲ್ಲ. ಯಾವುದೇ ಟ್ರಾಫಿಕ್ ಪೊಲೀಸರನ್ನು ನಿಯೋಜಿಸುತ್ತಿಲ್ಲ. ಇದರಿಂದ ಶಾಲಾ ಸಮಯದಲ್ಲಿ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದ್ದು ಅನಾಹುತ ನಡೆಯುವ ಮುನ್ನ ಸಂಬಂಧ ಪಟ್ಟ ಇಲಾಖೆ ಕ್ರಮ ವಹಿಸಬೇಕು ಎಂದು ಗ್ರಾಮಸ್ಥರು ಕುವೆಟ್ಟು ಗ್ರಾಮ ಸಭೆಯಲ್ಲಿ ಒತ್ತಾಯಿಸಿದರು.

ಕುವೆಟ್ಟು ಗ್ರಾಮ ಪಂಚಾಯತ್ 2024-25 ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆ ಮಾ.20 ರಂದು ಗ್ರಾ.ಪಂ. ಅಧ್ಯಕ್ಷೆ ಭಾರತಿ ರವರ ಅಧ್ಯಕ್ಷತೆಯಲ್ಲಿ ಪಣೆಜಾಲು ನಲಿಕೆ ಸಮುದಾಯ ಭವನದಲ್ಲಿ ನಡೆಯಿತು.
ಸಾಮಾಜಿಕ ವಲಯ ಅರಣ್ಯಾಧಿಕಾರಿ ಲೊಕೇಶ್ ಮಾರ್ಗದರ್ಶಿ ಅಧಿಕಾರಿಯಾಗಿ ಸಭೆಯನ್ನು ಮುನ್ನಡೆಸಿದರು.
ಗುರುವಾಯನಕೆರೆಯ ನೀರು ಕಲುಷಿತ ಗೊಂಡಿದ್ದು,ಸರಿಪಡಿಸಲು ಗ್ರಾಮಸ್ಥರೊರ್ವರು ಒತ್ತಾಯಿಸಿದರು. ಕೆರೆಯನ್ನು ಮೀನು ಸಾಕಣಿಕೆಗೆ ಏಲಂ ಮಾಡಿರುವುದಾಗಿ ಅಧ್ಯಕ್ಷರು ತಿಳಿಸಿದರು.ಬಸ್ ಸ್ಟ್ಯಾಂಡ್,ಕುಡಿಯುವ ನೀರು,ರಸ್ತೆ ರಿಪೇರಿ ಹಾಗೂ ಗ್ರಾಮದ ಅಭಿವೃದ್ಧಿಗೆ ಬೆರಕಾದ ಹಲವಾರು ಚರ್ಚೆಗಳು ನಡೆದವು. ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾಮ ಪಂಚಾಯತ್ ಆಡಳಿತ ಮಂಡಳಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಸಿಬ್ಬಂದಿ ಆನಂದ ಕೋಟ್ಯಾನ್ ವರದಿ ವಾಚಿಸಿದರು, ಪಿಡಿಒ ಇಮ್ತಿಯಾಜ್ ಸ್ವಾಗತಿಸಿದರು. ಪಂಚಾಯತ್ ಉಪಾಧ್ಯಕ್ಷ ಗಣೇಶ್ ಕುಲಾಲ್ ,ಸದಸ್ಯರು ,ಗ್ರಾಮಸ್ಥರು ಉಪಸ್ಥಿತರಿದ್ದರು.