ಬೆಳ್ತಂಗಡಿ: ಬೆಳ್ತಂಗಡಿ ಚರ್ಚ್ ರೋಡ್ ವೈಭವ್ ಆರ್ಕೇಡ್ ನಲ್ಲಿ ಎಸ್.ಬಿ.ಐ ಲೈಫ್ ಬೆಳ್ತಂಗಡಿ ಬ್ರಾಂಚ್ ನ ಉದ್ಘಾಟನೆಯು ಮಾ.21 ರಂದು ನಡೆಯಿತು.

ನೂತನ ಬೆಳ್ತಂಗಡಿ ಎಸ್.ಬಿ.ಐ ಬ್ರಾಂಚ್ ಇದರ ನೂತನ ಉದ್ಘಾಟನೆಯನ್ನು ರಿಜಿನಲ್ ಡೈರೆಕ್ಟರ್ ಅಶ್ವನಿ ಕುಮಾರ್ ಶುಕ್ಲ ನೇರವೇರಿಸಿ ಶುಭ ಕೋರಿದರು.

ಮುಖ್ಯ ಅತಿಥಿಗಳಾಗಿ ಎಸ್.ಬಿ.ಐ ರಿಜಿನಲ್ ಸೇಲ್ಸ್ ಮ್ಯಾನೇಜರ್ ಸುರೇಶ್ ಚಂದ್ರೆ ರೆಡ್ಡಿ, ರಿಜಿನಲ್ ಮ್ಯಾನೇಜರ್ ಪ್ರಕಾಶ್ ದುರ್ಗದ್ಮಾತ, ಪುತ್ತೂರು ಡಿ.ಎಸ್.ಎಂ ಪ್ರಸನ್ನ ಕುಮಾರ್ ಎನ್.ಎಸ್ ಉಪಸ್ಥಿತರಿದ್ದು ಶುಭ ಕೋರಿದರು.
ಸತೀಶ್ ಉಚ್ಚೂರು ಪ್ರಾರ್ಥನೆ ಹಾಡಿದರು. ಏಜೆಂಟ್ ಲಕ್ಷ್ಮಿನಾರಾಯಣ ಸ್ವಾಗತಿಸಿದರು. ಬ್ರಾಂಚ್ ಮ್ಯಾನೇಜರ್ ಜೋಯೇಲ್ ಎಂ.ಎಸ್ ನಿರೂಪಿಸಿದರು.