26.7 C
ಪುತ್ತೂರು, ಬೆಳ್ತಂಗಡಿ
March 27, 2025
ಗ್ರಾಮಾಂತರ ಸುದ್ದಿ

ಸಕಾಲದಲ್ಲಿ ತಾಲೂಕಿನ ಶಿಕ್ಷಕರ ವೇತನ ಪಾವತಿಗೆ ಅಗತ್ಯ ಕ್ರಮ ಕೈಗೊಳ್ಳಿ -ಜಿಪಿಟಿ ಶಿಕ್ಷಕರ ಸಂಘದ ಅಧ್ಯಕ್ಷ ಯೋಗೇಶ ಹೆಚ್ ಆರ್

ಬೆಳ್ತಂಗಡಿ : ಮಾ.22ರಂದು ಸರ್ಕಾರಿ ನೌಕರರ ಭವನದ ಏಕತಾಸೌಧದಲ್ಲಿ ನಡೆದ
ಕರ್ನಾಟಕ ರಾಜ್ಯ (೬-೮) ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ) ಬೆಂಗಳೂರು ತಾಲೂಕು ಘಟಕ ಬೆಳ್ತಂಗಡಿ, ಇದರ ವಾರ್ಷಿಕ ಮಹಾಸಭೆಯಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕು ಘಟಕದ ಅಧ್ಯಕ್ಷರಾದ ಯೋಗೇಶ ಹೆಚ್ ಆರ್ ಬೆಳ್ತಂಗಡಿ ತಾಲೂಕಿನ ಶಿಕ್ಷಕರು ಈ ಆರ್ಥಿಕ ವರ್ಷದಲ್ಲಿ ಪ್ರತಿ ಎರಡು- ಮೂರು ತಿಂಗಳಿಗೊಮ್ಮೆ ಸಕಾಲದಲ್ಲಿ ವೇತನ ಪಾವತಿಯಾಗದೆ ಸಂಕಷ್ಟ ಎದುರಿಸುತ್ತಿದ್ದು, ಸಕಾಲದಲ್ಲಿ ಶಿಕ್ಷಕರ ವೇತನ ಪಾವತಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಬೆಳ್ತಂಗಡಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಒತ್ತಾಯಿಸಿದರು.

ಇದಕ್ಕೂ ಮುನ್ನ
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಾಲೂಕಿನ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬಸವಲಿಂಗಪ್ಪ ನವರು ತಾಲೂಕಿನ ಶೈಕ್ಷಣಿಕ ಅಭಿವೃದ್ಧಿಗೆ ಜಿಪಿಟಿ ಶಿಕ್ಷಕರು ದೀರ್ಘಕಾಲಿಕ ಕೊಡುಗೆ ನೀಡುವಂತಾಗಬೇಕು, ಇಲ್ಲಿಯ ಭಾಷೆ ಮತ್ತು ಸಂಸ್ಕೃತಿಯನ್ನು ಅರ್ಥಮಾಡಿಕೊಂಡು ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ತೊಡಗುವಂತೆ ಮಾಡಬೇಕು ಎಂದು ಕಿವಿಮಾತು ಹೇಳಿದರು.


ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಜಯರಾಜ್ ಜೈನ್ 2023-24ನೇ ಸಾಲಿನಲ್ಲಿ ತಾಲೂಕಿಗೆ ನೇಮಕವಾದ ಜಿಪಿಟಿ ಶಿಕ್ಷಕರಿಗೆ ಗುರುತಿನ ಚೀಟಿ ವಿತರಣೆ ಮಾಡಿ ಮಾತನಾಡಿ ಜಿಪಿಟಿ ಶಿಕ್ಷಕರ ಸಂಘ ಸ್ಥಾಪನೆಯಾಗಿ ಅತ್ಯಲ್ಪ ಕಾಲದಲ್ಲಿಯೇ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದು ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವ ಸಂಘವಾಗಿ ಬೆಳೆದಿರುವುದನ್ನು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕಿನ ನೌಕರರ ಸಂಘದ ಅಧ್ಯಕ್ಷರಾಗಿ ಎರಡನೇ ಬಾರಿಗೆ ಆಯ್ಕೆಯಾದ ಜಯರಾಜ್ ಜೈನ್,ನೌಕರರ ಸಂಘದ ನಿರ್ದೇಶಕರಾಗಿ ಆಯ್ಕೆಯಾದ ಜಪಿಟಿ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಬಿ.ಆರ್ .ಹಾಗೂ ಶಿಕ್ಷಕರ ಸಹಪಠ್ಯ ಚಟುವಟಿಕೆಗಳಲ್ಲಿ ರಾಜ್ಯ ಮಟ್ಟದ ಸ್ಥಳದಲ್ಲೇ ಪಾಠೋಪಕರಣ ತಯಾರಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಸ.ಉ.ಪ್ರಾ.ಶಾಲೆ ಕೊರಂಜ ಇಲ್ಲಿಯ ಜಿಪಿಟಿ ಶಿಕ್ಷಕರಾದ ಕೃಷ್ಣಪ್ರಸಾದ್ ಇವರನ್ನು ಸನ್ಮಾನಿಸಿ
ಮಾತನಾಡಿದ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ತಾರಾಕೇಸರಿ ಶಿಕ್ಷಕರು ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ಪ್ರೀತಿಯಿಂದ ಕಾಣಬೇಕು, ಹಾಗೂ ಪ್ರತಿ ಮಗುವೂ ಬುನಾದಿ ಸಾಕ್ಷರತೆ ಹಾಗೂ ಸಂಖ್ಯಾ ಜ್ಞಾನ ಗಳಿಸಿ ಪ್ರೌಢಶಾಲೆಗಳಿಗೆ ತೆರಳುವಂತೆ ಮಾಡುವಲ್ಲಿ ಎಲ್ಲಾ ಶಿಕ್ಷಕರೂ ಕಾಳಜಿ ವಹಿಸಬೇಕೆಂದು ತಿಳಿಸಿದರು. ಹಾಗೂ ಅನುದಾನ ಕೊರತೆಯಿಂದ ಉಂಟಾಗಿರುವ ವೇತನದ ಸಮಸ್ಯೆಗೆ ವಿಷಾದ ವ್ಯಕ್ತಪಡಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಮಂಜುನಾಥ್ ಹಿರೇಮಠ* ಪ್ರಾರ್ಥಿಸಿ, ಸಂಘದ ಖಜಾಂಚಿ ಅಭಿಷೇಕ್ ಸ್ವಾಗತಿಸಿ, ಲೆಕ್ಕಪತ್ರ ಮಂಡಿಸಿದರೆ, ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಪ್ರಾಸ್ತಾವಿಕ ಮಾತನಾಡಿದರು ಉಪಾಧ್ಯಕ್ಷೆ ಶುಭ ಕೆಸನ್ಮಾನಿತರ ಪರಿಚಯ ಮಾಡಿಕೊಟ್ಟರೆ,ಕೊಯ್ಯೂರು ಕಸಬ ಶಾಲೆಯ ಶಿಕ್ಷಕಿ ದೇವಿಬಾಯಿ ಕಾರ್ಯಕ್ರಮ ನಿರೂಪಿಸಿ , ಸಂಘಟನಾ ಕಾರ್ಯದರ್ಶಿ ಸತೀಶಾಚಾರ್ ಸರ್ವರನ್ನು ವಂದಿಸಿದರು. ನಿರ್ದೇಶಕರಾದ ಉಷಾ ಮಧು ಹಾಗೂ ಇತರರು ಕಾರ್ಯಕ್ರಮ ಆಯೋಜನೆಯಲ್ಲಿ ಸಹಕರಿಸಿದರು. ಈ ಸಂದರ್ಭದಲ್ಲಿ 107 ಮಂದಿ ಜಿಪಿಟಿ ಶಿಕ್ಷಕರಿಗೆ ಗುರುತಿನ ಚೀಟಿ ವಿತರಿಸಲಾಯಿತು.

Related posts

ಶಿಶಿಲ ಗಿರಿಜನ ಕಾಲೋನಿ ಅಂಗನವಾಡಿ ಕೇಂದ್ರದಲ್ಲಿ ನಂದಿನಿ ಹಾಗೂ ನಿರ್ಮಲ ಸ್ತ್ರೀ ಶಕ್ತಿ ಸದಸ್ಯರಿಂದ ಶ್ರಮದಾನ ಹಾಗೂ ಪೌಷ್ಟಿಕ ಕೈತೋಟ ನಿರ್ಮಾಣ

Suddi Udaya

ಮಾಲಾಡಿ ಸರ್ಕಾರಿ ಐ ಟಿಐಯಲ್ಲಿ ವಾರ್ಷಿಕೋತ್ಸವ

Suddi Udaya

ಬೆಳ್ತಂಗಡಿ :ಭತ್ತ ಬೆಳೆಯುವ ಕೃಷಿಕರಿಗೆ ರಿಯಾಯಿತಿ ದರದಲ್ಲಿ ಭತ್ತದ ಬಿತ್ತನೆ ಬೀಜ ದಾಸ್ತಾನು ಲಭ್ಯ

Suddi Udaya

ಕೊಕ್ಕಡ: ಅನಂತರಾಮ ಉಪ್ಪಾರ್ಣ ನಿಧನ

Suddi Udaya

ವೇಣೂರು: ಅನಾಥರಾಗಿ ತಿರುಗಾಡುತ್ತಿರುವ ವಯೋವೃದ್ಧ: ವಾರಸುದಾರರ ಪತ್ತೆಗಾಗಿ ಮನವಿ

Suddi Udaya

ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಮಗು ತೋಟದ ಕೆರೆಗೆ ಬಿದ್ದು ಮೃತ್ಯು

Suddi Udaya
error: Content is protected !!
ಸುದ್ದಿ ಉದಯ ವಾಟ್ಸಪ್‌ ಗ್ರೂಪ್‌ಗೆ ಸೇರಿ