24.8 C
ಪುತ್ತೂರು, ಬೆಳ್ತಂಗಡಿ
April 1, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಅಂಡಿಂಜೆ ವಿಕಲಚೇತನರ ಸಮನ್ವಯ ವಿಶೇಷ ಗ್ರಾಮಸಭೆ

ಅಂಡಿಂಜೆ:ಅಂಡಿಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ವಿಕಲಚೇತನರಿಗಾಗಿ ವಿಶೇಷ ಗ್ರಾಮ ಸಭೆಯನ್ನು ಪಂಚಾಯತ್ ಅಧ್ಯಕ್ಷ ನಿತಿನ್ ಅವರ ಅಧ್ಯಕ್ಷತೆಯಲ್ಲಿ ಮಾ 24 ರಂದು ನಡೆಸಲಾಯಿತು.

ವಿಕಲಚೇತನರ ಸಮಸ್ಯೆಗಳನ್ನು ಆಲಿಸಿ ಬಗೆಹರಿಸುವ ಮಾಹಿತಿಯನ್ನು ತಾಲೂಕು ವಿಕಲಚೇತನರ ಮೇಲ್ವಿಚಾರಕರಾದ ಜೋನ್ ಬ್ಯಾಪ್ಟಿಸ್ಟ್ ಡಿಸೋಜ, ನೀಡಿದರು.

ಸಮುದಾಯ ಆರೋಗ್ಯ ಇಲಾಖೆಯ ಆರೋಗ್ಯ ಅಧಿಕಾರಿ ಶ್ರೀಮತಿ ಕಾವ್ಯರವರು ಗ್ರಾಮೀಣ ಆರೋಗ್ಯದ ಬಗ್ಗೆ ವಿವರಣೆ ಮತ್ತು ಮಾಹಿತಿಗಳನ್ನು ನೀಡಿದರು

ಪಂಚಾಯತ್ ಅಭಿವೃದ್ಧಿ ಆದಿಕಾರಿಯಾದ ರಾಘವೇಂದ್ರ ಪಾಟೀಲ್ ಪಂಚಾಯತ್ ನಿಂದ ವಿಕಲಚೇತನರಿಗೆ ನೀಡುವ ಸೌಲಭ್ಯಗಳ ಬಗ್ಗೆ ವಿವರಣೆಯನ್ನು ನೀಡಿದರು.

ಪಂಚಾಯತ್ ಅಧ್ಯಕ್ಷರಾದ ನಿತಿನ್ ಎಂ ಮಾತನಾಡಿ ಪಂಚಾಯತ್ ವ್ಯಾಪ್ತಿಯ ಎಲ್ಲಾ ವಿಕಲಚೇತನರು ಯಾವುದೇ ಅಂಜಿಕೆಯಿಲ್ಲದೆ ತಮ್ಮ‌ಸಮಸ್ಯೆಗಳನ್ನು ನಮ್ಮೆಲ್ಲರ ಗಮನಕ್ಕೆ ತರಬೇಕು. ಸಂಪೂರ್ಣ ರೀತಿಯಲ್ಲಿ ಎಲ್ಲಾ ಯೋಜನೆಗಳ ಸದುಪಯೋಗ ಪಡೆಯಬೇಕು ಎಂದರು.

ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಶ್ವೇತಾ, ಕಾರ್ಯದರ್ಶಿ ಶ್ರೀಮತಿ ಚಂಪಾ ಮತ್ತು ಪಂಚಾಯತ್ ನ ಎಲ್ಲಾ ಸದಸ್ಯರು, ಆಶಾ ಕಾರ್ಯಕರ್ತೆಯರು ಹಾಗೂ ಪಂಚಾಯತ್ ಸಿಬ್ಬಂದಿ ವರ್ಗದವರು ಸಹಕರಿಸಿದರು.

ಶೀನ ಸ್ವಾಗತಿಸಿ,ಶ್ರೀಮತಿ ಮಮತಾ ವಂದಿಸಿದರು.ಒಟ್ಟು 54 ಜನ ವಿಕಲಚೇತನರು ಸಭೆಯ ಸದುಪಯೋಗ ಪಡೆದುಕೊಂಡರು.

Related posts

ಕಳೆಂಜ: ಶ್ರೀ ದುರ್ಗಾ ಮಹಿಳಾ ಮಂಡಳಿ ವತಿಯಿಂದ ಉಚಿತ ಟೈಲರಿಂಗ್ ಶಿಬಿರ

Suddi Udaya

ನೆರಿಯ ವಾಲ್ಮೀಕಿ ಆಶ್ರಮ ಶಾಲೆಯ ಶಿಕ್ಷಕ ಕೃಷ್ಣಪ್ಪರಿಗೆ ಬೀಳ್ಕೊಡುಗೆ

Suddi Udaya

ಕೊರಿಂಜ ಪಂಚಲಿಂಗೇಶ್ವರ ದೇವರ ಅಷ್ಟಬಂಧ ಬ್ರಹ್ಮಕಲಶೋತ್ಸವ: ಧಾರ್ಮಿಕ ಸಭೆ

Suddi Udaya

ಗಂಡಿಬಾಗಿಲು: ಸಿಯೋನ್ ಆಶ್ರಮದಲ್ಲಿ 26ನೇ ವಾರ್ಷಿಕೋತ್ಸವ ಆಚರಣೆ

Suddi Udaya

ನ.10: ಬಳಂಜ -ನಾಲ್ಕೂರು – ತೆಂಕಕಾರಂದೂರು ಗ್ರಾಮದ ಪ್ರಮುಖ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸಾರ್ವಜನಿಕ ಪ್ರಥಮ ವರ್ಷದ ಕೆಸರ್ದ ಲೇಸ್ ಬಲೇ ಗೊಬ್ಬುಗ

Suddi Udaya

ಜ.24-30: ನಾಳ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ

Suddi Udaya
error: Content is protected !!