37.3 C
ಪುತ್ತೂರು, ಬೆಳ್ತಂಗಡಿ
March 26, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಅಳದಂಗಡಿ: ಇತ್ತೀಚೆಗೆ ಭಾರಿ ಗಾಳಿ , ಮಳೆಗೆ ಕುಸಿತಗೊಂಡ ಮನೆಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭೇಟಿ: ತಾತ್ಕಾಲಿಕ ಮನೆ ದುರಸ್ತಿಗೆ ನೆರವು

ಅಳದಂಗಡಿ ಸಮೀಪದ ಪಿಲ್ಯ ಎಂಬಲ್ಲಿ ಇತ್ತೀಚೆಗೆ ಭಾರಿ ಗಾಳಿ , ಮಳೆಗೆ ಮನೆಯೊಂದು ಸಂಪೂರ್ಣ ಕುಸಿದಿದ್ದು , ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ರವರು ಸಹಾಯಹಸ್ತ ನೀಡಿ ತಾತ್ಕಾಲಿಕ ಮನೆ ದುರಸ್ತಿಗೆ ನೆರವಾದರು.

ಇತ್ತೀಚೆಗೆ ಅಳದಂಗಡಿ ಸಮೀಪದ ಪಿಲ್ಯದ ವಿಮಲ ಮಡಿವಾಳ ಎಂಬವರ ಮನೆ ತೀವ್ರ ಸ್ವರೂಪದ ಗಾಳಿ ಮಳೆಗೆ ಸಂಪೂರ್ಣ ಕುಸಿದಿತ್ತು. ಈ ಬಗ್ಗೆ ಕಾರ್ಯಪ್ರವೃತರಾದ ಸ್ಥಳೀಯ ಕಾಂಗ್ರೆಸ್ ಪಕ್ಷದ ‌ನಾಯಕ ಸಂತೋಷ್ ಪೂಜಾರಿ ನಿನ್ನಿಕಲ್ಲು ರವರು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ರವರ ಗಮನ ಸೆಳೆದರು. ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ರಕ್ಷಿತ್ ಶಿವರಾಂ ರವರು ಸಹಾಯಹಸ್ತ ನೀಡಿ , ಸಂತೋಷ್ ನಿನ್ನಿಕಲ್ಲು ರವರ ನೇತೃತ್ವದಲ್ಲಿ ಮನೆ ದುರಸ್ತಿ ಮಾಡಲು ಸೂಚಿಸಿದರು ‌.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ನಾಯಕ , ಉದ್ಯಮಿ ಪ್ರವೀಣ್ ಪೆರ್ನಾಂಡೀಸ್ ಹಳ್ಳಿಮನೆ , ಯುವ ಕಾಂಗ್ರೆಸ್ ಉಪಾಧ್ಯಕ್ಷ ಅರುಣ್ ಲೋಬೋ ಉಪಸ್ಥಿತರಿದ್ದರು.

Related posts

ಗುರುವಾಯನಕೆರೆ: ನಿಸರ್ಗ ಕರ್ಟನ್ & ವಾಲ್ ಪೇಪರ್ ಮಳಿಗೆಯಲ್ಲಿ ದೀಪಾವಳಿ ಪ್ರಯುಕ್ತ ಗ್ರಾಹಕರಿಗೆ ಸ್ಪೆಷಲ್ ಡಿಸ್ಕೌಂಟ್ ಸೇಲ್

Suddi Udaya

ಕಿರಾತಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭೆ

Suddi Udaya

ವೇಣೂರು: ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದ ಯುವಕನ ಬಂಧನ: ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ ಹಿಂ.ಜಾ.ವೇ. ಕಾರ್ಯಕರ್ತರು

Suddi Udaya

ಹೊಸಂಗಡಿ: ಅಡಿಕೆ ಬೆಳೆಯಲ್ಲಿ ಎಲೆ ಚುಕ್ಕೆ ರೋಗದ ನಿರ್ವಹಣೆ ಕುರಿತು ತರಬೇತಿ

Suddi Udaya

ನಾಟಿ ವೈದ್ಯ ಬಾಬು ಗೌಡ ಅಂಡೆಟ್ಟು ನಿಧನ

Suddi Udaya

ಬೆಳ್ತಂಗಡಿಯ ನೂತನ ತಾಲೂಕು ಬಸ್ ನಿಲ್ದಾಣಕ್ಕೆ ಮಾಜಿ ಶಾಸಕ ಕೆ.ವಸಂತ ಬಂಗೇರ ಹೆಸರಿಡಲು ಸುವರ್ಣ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ ಸುವರ್ಣ ಆಗ್ರಹ

Suddi Udaya
error: Content is protected !!