ಕಡಿರುದ್ಯಾವರ: ಇಲ್ಲಿಯ ಕುಚ್ಚೂರು ಬೈಲು ನಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ವನದುರ್ಗಾ ದೇವಿ ದೇವಸ್ಥಾನದ ವಠಾರದಲ್ಲಿ ಮಾ.23 ರಂದು ದ್ವಿತೀಯ ವರ್ಷದ ನಾಗಪ್ರತಿಷ್ಠಾ ವರ್ಷಾಚರಣೆಯನ್ನು ಕಾನರ್ಪ ವಿಕ್ರಂ ಹೊಳ್ಳರವರ ನೇತೃತ್ವದಲ್ಲಿ ನಾಗತಂಬಿಲ ನೆರವೇರಿಸಿದರು.
ಈ ವೇಳೆ ಪ್ರಗತಿಪರ ಕೃಷಿಕ ಶಂಕರ್ ಭಟ್ ಕಾರ್ಯಕ್ರಮವನ್ನು ದೀಪಬೆಳಗಿಸುದರೊಂದಿಗೆ ಶುಭಕೋರಿದರು.
ಶ್ರೀ ವನದುರ್ಗಾ ದೇವಿ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷೆ ಲೋಕೇಶ್ವರಿ ವಿನಯಚಂದ್ರ ರವರು ಪ್ರಸ್ತಾವಣೆಯೊಂದಿಗೆ ಸ್ವಾಗತಿಸಿದರು.
ಧಾರ್ಮಿಕ ಉಪನ್ಯಾಸವನ್ನು ಉಜಿರೆ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಕನ್ನಡ ಸಹಪ್ರಾಧ್ಯಾಪಕರಾದ ದಿವ ಕೊಕ್ಕಡ ರವರು ದೇವರು, ಪ್ರಕೃತಿ ಬಗ್ಗೆ ಅನೇಕ ಉದಾಹರಣೆಗಳೊಂದಿಗೆ ನೀಡಿದರು. ಕು| ರಕ್ಷಿತಾ ಚಂದ್ರಶೇಖರ ಪೂಜಾರಿ, ನವ್ಯ ಕೃಷ್ಣಪ್ಪ ಎಂ.ಕೆ ರವರು ಪ್ರಾರ್ಥಿಸಿ, ಭವಶ್ರೀ ಕೀರ್ತಿ ರಾಜ್ ವಳಂಬ್ರ ಕಾರ್ಯಕ್ರಮ ನಿರೂಪಿಸಿದರು. ದೇವಸ್ಥಾನದ ಟ್ರಸ್ಟ್ ಕಾರ್ಯದರ್ಶಿ ಮಂಜುನಾರ್ಥ ಗೌಡ ಕುಚ್ಚೂರು ವಂದಿಸಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ನ ಸದಸ್ಯರು, ಮಹಿಳಾ ಘಟಕದ ಸದಸ್ಯರು ಸಹಕರಿಸಿದರು. ಕೂಸಪ್ಪ ಎಂ.ಕೆ ರವರ ನೇತೃತ್ವದಲ್ಲಿ ಭಜನಾ ಕಾರ್ಯಕ್ರಮ ನಡೆಯತು.