ಪುಂಜಾಲಕಟ್ಟೆ: ಸಂಪೂರ್ಣವಾಗಿ ಹದಗೆಟ್ಟ ಹಾಗೂ ಅಗೆದು ಹಾಕಿ ಜನರು ಸಂಚರಿಸಲು ಯೋಗ್ಯವಲ್ಲದ ಸಂಪೂರ್ಣವಾಗಿ ಹದಗೆಟ್ಟ ಹಾಗೂ ಅಗೆದು ಹಾಕಿ ಜನರು ಸಂಚರಿಸಲು ಯೋಗ್ಯವಲ್ಲದ ಪುಂಜಾಲಕಟ್ಟೆ ಪುರಿಯ ರಸ್ತೆಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಇಂದು(ಮಾ.24) ಭೇಟಿ ನೀಡಿ ಪರಿಶೀಲಿಸಿದರು.


ಕೂಡಲೇ ಇಂಜಿನಿಯರ್ ಗೆ ಕರೆ ಮಾಡಿ ರಸ್ತೆಯ ಅವ್ಯವಸ್ಥೆಯ ಬಗ್ಗೆ ವಿವರಿಸಿ, ಮರು ಡಾಂಬರೀಕರಣ ಮಾಡಲು ಸೂಚನೆ ನೀಡಿದರೆಂದು ಸ್ಪಂದನ ಆಟೋ ಚಾಲಕ ಮಾಲಕರ ಸಂಘದ ಜೊತೆ ಕಾರ್ಯದರ್ಶಿ ಕಿರಣ್ ಶೆಟ್ಟಿ ಮಾಲಾಡಿ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರಾದ ಬೆನಡಿಕ್ಟ್ ಮಿರಾಂದ, ಮಾಜಿ ಸದಸ್ಯರಾದ ಗ್ರೆಗೋರಿ ಮಿರಾಂದ, ಪ್ರಸನ್ನ ಕುಮಾರ್, ರಮೇಶ್ ಬುಡಂಗೊಟ್ಟು, ವಾಜೀರ್ ಪುರಿಯ ಹಾಗೂ ಸ್ಥಳಿಯ ಪ್ರಮುಖರು ಉಪಸ್ಥಿತರಿದ್ದರು.