ಬೆಳ್ತಂಗಡಿ : ಬೆಳ್ತಂಗಡಿ ಮಹಿಳಾ ವೃಂದದಿಂದ ವಿಶ್ವ ಮಹಿಳಾ ದಿನಾಚರಣೆಯನ್ನು ಮಾ.22 ರಂದು ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ವೃಂದದ ಅಧ್ಯಕ್ಷೆ ನೇತ್ರಾ ಅಶೋಕ್ ವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ಡಾ. ದೀಪಾಲಿ ಡೊಂಗ್ರೆ ರವರು ಕೌಟುಂಬಿಕ ಭಾಂದವ್ಯದ ಉಳಿವಿನ ಮಹತ್ವ, ವಾಸ್ತವದ ಬದುಕಿನ ಶೈಲಿ, ತಾಯಂದಿರ ಕರ್ತವ್ಯ ಸ್ತ್ರೀ ಸ್ವಾತಂತ್ರ್ಯವನ್ನು ಸದ್ಬಳಕೆ ಮಾಡುವ ರೀತಿ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಉರಗಪ್ರೇಮಿ ಆಶಾ ಕುಪ್ಪೆಟ್ಟಿ ರವರನ್ನು ಸನ್ಮಾನಿಸಲಾಯಿತು. ಉಮಾ ಆರ್ ರಾವ್ ಸ್ವಾಗತಿಸಿ, ವೀಣಾ ವಿ ಕುಮಾರ್ ಪ್ರಸ್ತಾವಿಸಿ, ಕಾರ್ಯದರ್ಶಿ ಪ್ರೀತಿ ಆರ್ ರಾವ್ ವಾರ್ಷಿಕ ವರದಿ ವಾಚಿಸಿದರು. ಸುಚಿತ್ರ ಬಹುಮಾನ ವಿತರಿಸಿದರು. ರೇಖಾ ಸುಧೀರ್ ರಾವ್ ವಂದಿಸಿದರು.